ಯರಗಟ್ಟಿ

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಯರಗಟ್ಟಿ 23: 12ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿಯತೆ, ಅಶ್ಪೃಸ್ಯತೆ ತೊಲಗಿಸಲು ಸಮ ಸಮಾಜದ ಜಾಗೃತಿ ಮೂಡಿಸಿದ ವಿಶ್ವಗುರು ಬಸವಣ್ಣನವರ ಅನುಯಾಯಿಗಳಲ್ಲೊಬ್ಬರಾದ  ಅಂಬಿಗರ ಚೌಡಯ್ಯನವರು ಮೂಲತ: ಅಂಬಿಗ ವೃತ್ತಿಯಿಂದ ವಚನಗಳ ಮೂಲಕ ನಿಜ ಜೀವನದ ದೋಣಿಯನ್ನು ಹೇಗೆ ನಡೆಸಬೇಕೆಂದು ತಿಳಿಸುವುದರೊಂದಿಗೆ ಸಮಾಜದಲ್ಲಿನ ಮೌಡ್ಯ ಮತ್ತು ಕಳಂಕಗಳನ್ನು ಧಿಕ್ಕರಿಸಿದ ನಿಜಶರಣರಾಗಿದ್ದಾರೆಂದು ತಹಶೀಲ್ದಾರ ಮಹಾಂತೇಶ ಮಠದ ತಿಳಿಸಿದರು.

ನಂತರ ಮಾತನಾಡಿದ ಅವರು ಸಮಾಜದ ಏಳ್ಗೆಗಾಗಿ ಶ್ರಮಿಸಿದ ಶರಣರು, ಸಂತರು, ಋಷಿಮುನಿಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಅವರ ನುಡಿಮುತ್ತುಗಳು, ಜೀವನದ ಹಾದಿ, ವಚನಗಳು, ಗ್ರಂಥಗಳು, ಸಮ ಸಮಾಜದ ಕಳಕಳಿಯನ್ನು ಎಲ್ಲರಿಗೂ ತಿಳಿಸುವಂತಾಗಬೇಕೆಂದು ಸರ್ಕಾರದಿಂದಲೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಇದೇ ವೇಳೆ ಗ್ರೇಡ್-2 ತಹಶೀಲ್ದಾರ್ ಎಸ್. ಜಿ. ದೊಡಮನಿ, ಎಸ್. ಬಿ. ಕುಲಕರ್ಣಿ , ಅಂಬಿಗೇರ ಸಮಾಜದ ಗೌರವಾಧ್ಯಕ್ಷ ನೀಲಪ್ಪ ಬಾರ್ಕಿ, ತಾಲೂಕಾಧ್ಯಕ್ಷ ಸುರೇಶ ಬಾರ್ಕಿ, ಉಪಾಧ್ಯಕ್ಷ ಮುದ್ದಪ್ಪ ಪೂಜೇರ, ಬಸವರಾಜ ಬಾರ್ಕಿ, ಮಲ್ಲಪ್ಪ ಬಾರ್ಕಿ , ಮಲ್ಲಿಕಾರ್ಜುನ ಬಾರ್ಕಿ, ಪ್ರಕಾಶ ಪೂಜೇರ, ಪ್ರಕಾಶ ಬಾರ್ಕಿ, ಮೈಲಾರ ಬಾರ್ಕಿ ,ಹಾಗೂ ಇನ್ನಿತರರು ಇದ್ದರು 

ಸುದ್ದಿ ಓದಿ