ಬೈಲಹೊಂಗಲ

ಭಕ್ತಿಯಿಂದ ಶ್ರೀಹನುಮ ಜಯಂತಿ ಆಚರಣೆ

ಭಕ್ತಿಯಿಂದ ಶ್ರೀಹನುಮ ಜಯಂತಿ ಆಚರಣೆ

ಬೈಲಹೊಂಗಲ 27:  ಪಟ್ಟಣದ ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲ್ಲೂಕು ಘಟಕದಿಂದ ಶ್ರದ್ಧೆ, ಭಕ್ತಿಯಿಂದ ಮಂಗಳವಾರ ಶ್ರೀಹನುಮ ಜಯಂತಿ ಆಚರಿಸಲಾಯಿತು.ಉಪ್ಪಿನ ಕೂಟ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮನ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಜೈ ಆಂಜನೇಯ, ಜೈ ಶ್ರೀರಾಮ ಎಂದು ಘೋಷಣೆ ಮೊಳಗಿಸಿದರು. ಪ್ರಪಂಚಕ್ಕೆ ಎದುರಾಗಿರುವ ಕೊವಿಡ್ ಎರಡನೇ ಅಲೆ ಸಂಪೂರ್ಣವಾಗಿ ತೊಲಗಿ ಶಾಂತಿ, ನೆಮ್ಮದಿ, ಆರೋಗ್ಯಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ಪುರಸಭೆ ಸದಸ್ಯ ಅಶೋಕ ಶಿಂತ್ರಿ, ಅಶೋಕ ಸವದತ್ತಿ, ಮಂಜುನಾಥ ಜಾಧವ, ಬಸವರಾಜ ಈಟಿ, ವಿವೇಕಾನಂದ ಪೂಜೇರ, ನಗರ ಸಂಯೋಜಕ ರವಿ ಹುಲಕುಂದ ಇದ್ದರು. ಅರ್ಚಕ ಗುರುರಾಜ ಏಣಗಿಮಠ ಪೂಜೆ ನೆರವೇರಿಸಿದರು. ಬೈಲಹೊಂಗಲದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ತಾಲ್ಲೂಕು ಘಟಕದಿಂದ ಮಂಗಳವಾರ ಹನುಮ ಜಯಂತಿ ಆಚರಿಸಲಾಯಿತು.

ಸುದ್ದಿ ಓದಿ