ಬೈಲಹೊಂಗಲ

ಹೋಳಿ ರಂಜಾನ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಆಚರಿಸಿ: ಹೂಗಾರ

ಹೋಳಿ ರಂಜಾನ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಆಚರಿಸಿ: ಹೂಗಾರ

ಬೈಲಹೊಂಗಲ 23 : ಪಟ್ಟಣದಲ್ಲಿ ಹೋಳಿ ಹಬ್ಬ, ರಂಜಾನ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಸಿಪಿಐ ಎಂ.ಎಸ್‌.ಹೂಗಾರ ಹೇಳಿದರು. 

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ ಹಬ್ಬದ ನಿಮಿತ್ತ ಏರಿ​‍್ಡಸಿದ್ದ ಶಾಂತತಾ ಸಭೆಯಲ್ಲಿ ಅವರು ಮಾತನಾಡಿದರು.ಬೈಲಹೊಂಗಲ ನಾಡು ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಯುವಕರು ಹೋಳಿ ಹಬ್ಬವನ್ನು, ರಂಜಾನ ಹಬ್ಬವನ್ನು ಶಾಂತರೀತಿಯಿಂದ ಆಚರಿಸಬೇಕು. ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತವಹಿಸಬೇಕು. ಅಂದು ಎಸ್ಸೆಸ್ಸೆಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಇದ್ದು, ಯುವತಿಯರನ್ನು ಬಲವಂತವಾಗಿ ಚುಡಾಯಿಸುವುದು, ಬಣ್ಣ ಎರಚುವುದು, ಗಲಾಟೆಗಳನ್ನು ಮಾಡಿದರೆ ಕ್ರಮ ಜರುಗಿಸಲಾಗುವುದು. ಯಾವುದೇ ಗಲಾಟೆಗಳಿಗೆ ಅವಕಾಶ ಕೊಡದೇ ಪ್ರೀತಿ, ವಾತ್ಸಲ್ಯದಿಂದ ಹೋಳಿ ಹಬ್ಬ, ರಂಜಾನ ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು. ಯಾರಾದರೂ ಯುವತಿಯರಿಗೆ, ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಂಹತವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.ಪಿಎಸ್‌ಐಗಳಾದ ರಾಜು ಮಮದಾಪೂರ, ಗುರುರಾಜ ಕಲಬುರ್ಗಿ ಮಾತನಾಡಿ, ಹೋಳಿ ಹಬ್ಬ, ರಂಜಾನ ಹಬ್ಬವನ್ನು ಶಾಂತತೆಯಿಂದ ಆಚರಿಸಬೇಕು. ಪೊಲೀಸ್ ಇಲಾಖೆ ಸದಾ ಜನರ ರಕ್ಷಣೆಯಲ್ಲಿರುತ್ತದೆ. ಯಾವುದೇ ಘಟನೆಗಳು ನಡೆದರೆ ತಕ್ಷಣ ಪೊಲೀಸ್‌ರಿಗೆ ಮಾಹಿತಿ ನೀಡಿ ಮುಲ್ಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದರು.ಮುಖಂಡರಾದ ಪ್ರಮೋದಕುಮಾರ ವಕ್ಕುಂದಮಠ, ಬಾಬುಸಾಬ ಸುತಗಟ್ಟಿ, ಶಿವಯೋಗಿ ಹುಲ್ಲೇನ್ನವರ, ಅಬ್ದುಲರೆಹಮಾನ ಹುಬ್ಬಳ್ಳಿ ಮಾತನಾಡಿ, ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಹೋಳಿ ಹಬ್ಬ, ರಂಜಾನ ಹಬ್ಬವನ್ನು ಆಚರಣೆ ಮಾಡಲಾಗುವುದೆಂದರು.  

ಈ ಸಂದರ್ಭದಲ್ಲಿ ರಮೇಶ ಹುಲ್ಲೇನ್ನವರ, ಸಂಜು ಮುರಗೋಡ, ಮಹಾಂತೇಶ ಅಕ್ಕಿ, ಪೊಲೀಸ್ ಇಲಾಖೆಯ ಸೋಮು ಕರೀವೀರನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ