ಗಾಂಜಾ ಮಾರಾಟ: ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ
Cannabis sale: Excise Department officials raid
ಜಮಖಂಡಿ 10: ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ. ಮಹಿಳೆಯೋರ್ವಳನ್ನು ಗಾಂಜಾ ಸಮೇತವಾಗಿ ಬಂಧಿಸಿದ್ದಾರೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ನಿರ್ವಹಿಸುವ ಸಮಯದಲ್ಲಿ ಮಹಿಳೆ ಲಕ್ಷ್ಮೀಬಾಯಿ ಮಹದೇವ ಮೊರೆ ಗಾಂಜಾ ಮಾರಾಟ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುತ್ತಾಳೆ. ಬಂಧಿತ ಆರೋಪಿತಳಾದ ಮಹಿಳೆಯಿಂದ ರೂ, 25 ಸಾವಿರ ಬೆಲೆ ಬಾಳುವ 817 ಗ್ರಾಂ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು. ಈ ಕುರಿತು ಪ್ರಕರಣ ದಾಖಲಾಗಿದೆ.
ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ,ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ)ಬೆಳಗಾವಿ, ಅಬಕಾರಿ ಉಪ ಆಯುಕ್ತರು ಬಾಗಲಕೋಟ, ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನೀರೀಕ್ಷಕರು ಜಮಖಂಡಿ ಅವರ ನೇತೃತ್ವದಲ್ಲಿ ಅಬಕಾರಿ ಉಪನೀರೀಕ್ಷಕಿ ಸುಧಾ ಕರಿಗಾರ, ಸಿಬ್ಬಂದಿಗಳಾದ ಮೌನೇಶ ಬಡಿಗೇರ, ರಫಿಕ್ ಬಾಗವಾನ, ಮಹೇಶ ಇರಳಿ ಹಾಗೂ ಇತರರು ಸೇರಿಕೊಂಡು ದಾಳಿಯನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 