ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಹೆಸರು ಘೋಷಣೆ: ಕಾರ್ಯಕರ್ತರಿಂದ ಸಂಭ್ರಮ
ಲೋಕದರ್ಶನ ವರದಿ,
ಜಮಖಂಡಿ 12: ಜಮಖಂಡಿ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ಹೆಸರು ಘೋಷಣೆ ಮಾಡಿದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಗುಡಗುಂಟಿ ಅವರ ನಿವಾಸದ ಮುಂದೆ ಸಾವಿರಾರೂ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ. ಮೋದಿ, ಮೋದಿ ಹಾಗೂ ಜೈ ಶ್ರೀರಾಮ ಎಂದು ಘೋಷಣೆಯನ್ನು ಕೂಗುತ್ತಿದರು. ಮನೆಯ ಮುಂದೆ ಪಟಾಕಿಗಳ ಸದ್ದು ಜೋರಾಗಿತ್ತು.
ಜಮಖಂಡಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೇಟ್ ಕೈ ತಪ್ಪಿದ್ದು. ಹೊಸ ಮುಖ ಅಭ್ಯರ್ಥಿಗೆ ಕೈಯಲ್ಲಿ ಕಮಲ ಅರಳುತ್ತದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿದೆ. ಬಿಜೆಪಿ ಪಕ್ಷದಲ್ಲಿ ಬದಲಾವಣೆಯ ಬೇಡಿಕೆಯ ಕೂಗು ಟಕೆಟ್ ಘೋಷಣೆಯಾಗುವ ಮುನ್ನ ಕ್ಷೇತ್ರದಲ್ಲಿ ಕೇಳಿ ಬರುತ್ತಿತ್ತು. ಆದರೆ ಈ ಭಾರಿ ಕ್ಷೇತ್ರದಲ್ಲಿ ಹೊಸ ಮುಖ ಅಭ್ಯರ್ಥಿಗೆ ಅಧಿಕೃತವಾಗಿ ಟಕೆಟ್ ಘೋಷಣೆಯಾದ ಹಿನ್ನಲೆಯಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಅವರ ಬೆಂಬಲಿಗರು.
ಬಿಜೆಪಿ ಪಕ್ಷದಿಂದ ಜಗದೀಶ ಗುಡಗುಂಟಿ ಅವರಿಗೆ ಟಕೇಟ್ ದೊರೆಕಿದ್ದು. ಕ್ಷೇತ್ರದ ಮತದಾರರು ಹೊಸ ಮುಖದ ಅಭ್ಯರ್ಥಿಯ ಕೈಯಲ್ಲಿ ಕಮಲ ಅರಳಿಸುತ್ತಾರಾ ಎಂಬುವದು ಕಾದುನೋಡಬೇಕಾಗಿದೆ.