ಸಂಘಟಿತರಾಗಿ ಸೌಲಭ್ಯ ಪಡೆಯಲು ಕಾಮರ್ಿಕರಿಗೆ ಕರೆ
ಲೋಕದರ್ಶನ ವರದಿ
ಬಳ್ಳಾರಿ 02: ಅಸಂಘಟಿತರಾಗಿ ಇರುವುದಕ್ಕಿಂತ ಮೊದಲು ಸಂಘಟಿತರಾಗಿ ಸಮಾಜದಲ್ಲಿ ಸಾಮಾಜಿಕವಾಗಿ, ಆಥರ್ಿಕವಾಗಿ ಬೆಳೆಯಬೇಕು. ಹಾಗೆಯೇ ಸಕರ್ಾರದಿಂದ ಬರುವಂತಹ ಪ್ರತಿಯೊಂದು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರದಂದು ಜಿಲ್ಲಾಡಳಿತ, ಜಿಪಂ, ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಮರ್ಿಕ ಸಮ್ಮಾನ ದಿನಾಚರಣೆಯ ಅಂಗವಾಗಿ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಟಿತ ಕಾಮರ್ಿಕರಿಗೆ ಸಿಗುವ ಪ್ರತಿಯೊಂದು ಯೋಜನೆಗಳನ್ನು ತಿಳಿದುಕೊಂಡು ಬಳಸಿಕೊಳ್ಳಬೇಕು. ವಿದ್ಯಾವಂತ ಯುವಕರು ತಮ್ಮ ಮನೆಯ ಹಾಗೂ ಇತರೆ ಸಾರ್ವಜನಿಕರಿಗೆ ಇಂತಹ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಕೇಂದ್ರ ಸಕರ್ಾರವು ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳಿಗೆ 3000 ರೂಗಳಂತೆ ಪಿಂಚಣಿ ಸಿಗಲಿದೆ ಎಂದು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಸಂಘಟಿತ ಕಾಮರ್ಿಕರು ಕೇವಲ ಒಂದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಸಂಘಟಿತ ಕಾಮರ್ಿಕರಿದ್ದಾರೆ ಹಾಗಾಗೀ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕಾಮರ್ಿಕರಿಗಾಗಿ ಅನೇಕ ಯೋಜನೆಗಳು ಜಾರಿ ಮಾಡಿದ್ದು, ಈ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು.
ಸಿರುಗುಪ್ಪ ತಾಲೂಕಿನ ಕಾಮರ್ಿಕ ಇಲಾಖೆಯ ನಿರೀಕ್ಷಕ ಸಿ.ರವಿದಾಸ್ ಮಾತನಾಡಿ, ಕನರ್ಾಟಕ ಸಕರ್ಾರ ಪ್ರಥಮ ಬಾರಿಗೆ ದೇಶದಲ್ಲಿರುವ ಶೇ.94ರಷ್ಟು ಅಸಂಘಟಿತ ಕಾಮರ್ಿಕರು ಹೊಂದಿದ್ದು, ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಅಸಂಘಟಿತ ಕಾಮರ್ಿಕರನ್ನು ಗುರುತಿಸಿ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರವನ್ನು ಸಕರ್ಾರವು ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಒಟ್ಟು 194 ಅಸಂಘಟಿತ ಕಾಮರ್ಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ಪ್ರದಾನವನ್ನು ಮಾಡಲಾಯಿತು.
ಕಾಮರ್ಿಕ ಇಲಾಖೆಯ ಸಂಡೂರಿನ ನಿರೀಕ್ಷಕ ದಿವಾಕರ್, ಹೊಸಪೇಟೆಯ ನಿರೀಕ್ಷಕ ಪರುಶುರಾಮ್, ಬಾಲ ಕಾಮರ್ಿಕ ಇಲಾಖೆ ಯೋಜನಾ ನಿದರ್ೇಶಕ ಇ.ಮೌನೇಶ್, ಜಿಲ್ಲಾ ಕಾಮರ್ಿಕ ಇಲಾಖೆ ಕಾರ್ಯನಿರ್ವಹಕ ಆರ್.ಎನ್.ಶಿವರಾಜ್, ಸಿಬ್ಬಂದಿಗಳಾದ ಎನ್.ನಾಗರಾಜ, ಈರಪ,್ಪ ಶ್ರಮ ಸಮ್ಮಾನ ಪ್ರಶಸ್ತಿಗೆ ಬಾಹಾಗೂ ಇಲಾಖೆಯ ಮುಂಖಾಂಡರು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.