ಜಮಖಂಡಿ

ಸಂಪುಟ ಪುನರಚನೆ ಕುರಿತು ಸಿಎಂ ಹೇಳಿಕೆ ಸತ್ಯ: ತಿಮ್ಮಾಪೂರ

ಸಂಪುಟ ಪುನರಚನೆ ಕುರಿತು ಸಿಎಂ ಹೇಳಿಕೆ ಸತ್ಯ: ತಿಮ್ಮಾಪೂರ

ಲೋಕದರ್ಶನ ವರದಿ

ಜಮಖಂಡಿ04: ನಾಯಕತ್ವ ಬದಲಾವಣೆ, ಸಂಪುಟ ಪುನರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವದು ಸತ್ಯವಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ನಿರ್ಮಿಸಿರುವ ಸಿದ್ದೇಶ್ವರ ತೂಗು ಸೇತುವೆ ಉದ್ಘಾಟನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕ ಮುಖ್ಯಮಂತ್ರಿಯಾಗಿರುತ್ತಾರೆ, ಅವರನ್ನು ಬದಲಿಸುವ ಚರ್ಚೆ ಇಲ್ಲ, ಅವರು ಹೇಳಿರುವದು ಸರಿಯಾಗಿದೆ. ಐದು ವರ್ಷ ಅವರೆ ಮುಖ್ಯಮಂತ್ರಿಯಾಗಿರುತ್ತಾರೆ, ಬದಲಾವಣೆ ಮಾಡಬೇಕೆಂದರೆ ಅದು ಶಾಸಕಾಂಗ ಪಕ್ಷದಲ್ಲಿ ಮಾಡಬೇಕಾಗುತ್ತದೆ ಅದನ್ನು ಹೈಕಮಾಂಡ ನೋಡಿಕೊಳ್ಳುತ್ತದೆ ಯಾರು ಅಸಮಾದಾನವಿಲ್ಲ ಎಂದರು 

ಸುದ್ದಿ ಓದಿ