ಜಮಖಂಡಿ

ಸಿಬಿಎಸ್ಇ ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟ

ಸಿಬಿಎಸ್ಇ ವಲಯ ಮಟ್ಟದ  ಕಬಡ್ಡಿ ಕ್ರೀಡಾಕೂಟ

ಲೋಕದರ್ಶನ ವರದಿ,

ಜಮಖಂಡಿ 02: ನಗರದ ರಾಯಲ್ ಪ್ಯಾಲೇಸ ಶಾಲೆಯಲ್ಲಿ ನಡೆದ ಸಿಬಿಎಸ್ಇ ವಲಯ ಮಟ್ಟದ  ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ನಡೆದ ಕಬಡ್ಡಿ ಕ್ರೀಡಾಕೂಟ ಪಂದ್ಯಾವಳಿಗಳು ಬಾಲಕಿಯರ ವಿಭಾಗದಿಂದ ಪ್ರಥಮ. ಸೆಮಿಫೈನಲ್ನಲ್ಲಿ ಬಳ್ಳಾರಿ ರುದ್ರಪ್ಪಾ ಮೋಟೆಬೆನ್ನೂರು ಬ್ಯಾಡಗಿ 48 ಅಂಕಗಳಿಸಿ ತನ್ನ ವಿರುದ್ಧ ಪೊಲೀಸ ಪಬ್ಲಿಕ್ ಸ್ಕೂಲ್ ಬೆಂಗಳೂರ ತಂಡವನ್ನು 32 ಅಂಕಗಳಿಗೆ ಸೋಲಿಸಿ ವಿಜಯಶಾಲಿಯಾಗಿದೆ.

ಎರಡನೇ ಸೆಮಿಫೈನಲ್ನಲ್ಲಿ ಮಾರುತಿ ವಿದ್ಯಾಕೇಂದ್ರ ತುಮಕೂರ 42 ಅಂಕಗಳಿಸಿದರೆ. ಇಂಡಿಯನ್ ಇಂರ್ಟನ್ಯಾಷನಲ್ ಸ್ಕೂಲ್ ಚಿತ್ರದುರ್ಗ 17 ಅಂಕ ಗಳಿಸಿ ಸೋಲನ್ನು ಅನುಭವಿಸಿತು.

ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ರುದ್ರಪ್ಪ ರೆಸಿಡೆನ್ಸಿಯಲ್ ಸ್ಕೂಲ್ ಮೋಟೆಬೆನ್ನುರ ಬ್ಯಾಡಗಿ ಪ್ರಥಮ ಸ್ಥಾನದಲ್ಲಿ ವಿಜಯಶಾಲಿಯಾದರೆ, ಮಾರುತಿ ವಿದ್ಯಾಕೇಂದ್ರ ತುಮಕೂರ ದ್ವಿತೀಯ ಸ್ಥಾನ, ಪೊಲೀಸ್ ಪಬ್ಲಿಕ್ ಸ್ಕೂಲ್ ಬೆಂಗಳೂರ ತೃತೀಯ ಸ್ಥಾನಕ್ಕೆ ಪಡೆದುಕೊಂಡಿತು.

ಬಾಲಕರ ವಿಭಾಗ ಕ್ರೀಡೆಯಲ್ಲಿ ಸೆಮಿಫೈನಲ್ನಲ್ಲಿ ರಾಯಲ್ ಪ್ಯಾಲೇಸ್ ಸ್ಕೂಲ್ ಜಮಖಂಡಿ 49 ಅಂಕಗಳಿಸಿದರೆ ರಾಷ್ಟ್ರೊಸ್ಥಾನ ವಿದ್ಯಾಕೇಂದ್ರ ಧಾರವಾಡ 44 ಅಂಕಗಳಿಸಿ ಪರಾಜಿತವಾಗಿದೆ.

ಅಂತಿಮ ಹಣಾಹಣಿಯ ಪ್ರಥಮ ಮತ್ತು ಧ್ವಿತೀಯ ಸ್ಥಾನದ ಹೋರಾಟದಲ್ಲಿ  ರಾಯಲ್ ಪ್ಯಾಲೇಸ್ ಜಮಖಂಡಿ ಅತ್ಯುತ್ತಮ ಪ್ರದರ್ಶನ ನೀಡಿ. 15 ಅಂಕಗಳಿಸಿ ದ್ವೀತೀಯ ಸ್ಥಾನದಲ್ಲಿದ್ದರೆ ತ್ಯಾಗರಾಜ ಸೆಂಟ್ರಲ್ ಸ್ಕೂಲ್ ಬಿಡದಿ ತಂಡ 33 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿ ವಿಜಯಶಾಲಿಯಾಗಿದೆ. ಇನ್ನು ತೃತೀಯ ಸ್ಥಾನದಲ್ಲಿ  ರಾಷ್ಟ್ರೊಸ್ಥಾನ ವಿದ್ಯಾ ಕೇಂದ್ರ ಧಾರವಾಡ 2 ಅಂಕಗಳಿಗೆ ಕಟ್ಟಿಹಾಕಿದ ಕೆ.ಎಲ್.ಇ  ನಿಪ್ಪಾಣಿ 7 ಅಂಕಗಳಿಂದ ತೃತಿಯ ಸ್ಥಾನಕ್ಕೆ ತನ್ನದಾಗಿಸಿತು.

ಬಾಲಕಿಯ ವಿಭಾಗದಲ್ಲಿ ಉತ್ತಮ ಆಟಗಾರಳಾಗಿ ತುಮಕೂರಿನ ಸಮಾಗೌಡಾ, ಉತ್ತಮ ಹಿಡಿತ ಆಟಗಾರಳಾಗಿ ಬಳ್ಳಾರಿ ರುದ್ರಪ್ಪಾ ರೆಸಿಡೆನ್ಸಿಯಲ್ ಶಾಲೆಯ ನಿವೇದಾ ಸಂಡೂರ, ಉತ್ತಮ ಆಟಗಾರಳಾಗಿ. ಗುಣಶೀಲಾ ವಿಜಯಪತಾಕೆ ಹಾರಿಸಿದ್ದಾರೆ. ಬಾಲಕರ ವಿಭಾಗದಿಂದ ರಾಯಲಪ್ಯಾಲೇಸ್ ಶಾಲೆ ಶ್ರೀಶೈಲ್ ಆಟಗಾರನಾಗಿ, ದಿಫೆಂಡರಾಗಿ ಟಿಸಿಎಸ್ ಬಿಡದಿ ಶಾಲೆಯ ತೇಜಸ್, ಉತ್ತಮ ಆಟಗಾರನಾಗಿ ಅದೇ ಶಾಲೆ ಕುಶಾಲಗೌಡ ತಮ್ಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಮಾಜಿ ಶಾಸಕ ಆನಂದ ನ್ಯಾಮಗೌಡ, ಸಿಬಿಎಸ್ಇ ಶಾಲೆಯ ಕ್ಲಸ್ಟರ 8 ರ ಕ್ರೀಡಾಕೂಟವನ್ನು ನಮ್ಮ ಶಾಲೆಯಿಂದ ಪ್ರಥಮ ಬಾರಿಯಾಗಿ ಆಯೋಜನೆ ಮಾಡಿದ್ದಾಗಿದೆ. ಕಳೆದ ಮುರುದಿನಗಳಿಂದ ನಡೆದ ಕಬಡ್ಡಿ ಕ್ರೀಡಾಕೂಟದಲ್ಲಿ ಒಟ್ಟು 97 ತಂಡಗಳು ಭಾಗವಹಿಸಿದ್ದವು. ಇಂದು ನಮ್ಮ ಶಾಲೆಯ ತಂಡವು ದ್ವಿತೀಯ ಸ್ಥಾನದಲ್ಲಿದ್ದರೆ ಮುಂದಿನ ಇಂತಹ ಕ್ಲಸ್ಟರ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನದಲ್ಲಿ ಬರುತ್ತದೆ ಎಂದರು.

ಎಸಿ, ಸಂತೋಷ ಕಾಮಗೊಂಡ, ಡಿಎಸ್ಪಿ, ಶಾಂತವೀರ ಈ, ತಹಶೀಲ್ದಾರ ಸದಾಶೀವ ಮಕ್ಕೋಜಿ, ಸಿಪಿಐ ಮಲ್ಲಪ್ಪ ಮಡ್ಡಿ, ಕೋಚ ಜಂಗಮ ಸುನೀಲಕುಮಾರ. ಶಾಲಾ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಎ.ಆರ್.ಸಿಂಧೆ, ಸಿಬಿ.ಎಸ್.ಸಿ ವೀಕ್ಷಕ ಅಜೀತ ಕವಟೇಕರ, ಪ್ರಾಚಾಯರ್ೆ ರೀತಾ ಜೈನರ. ಡಾ, ವಿಜಯ ಮೇತ್ರಿ, ಸುಮಿತ್ರಾ ನ್ಯಾಮಗೌಡ ಇದ್ದರು. ಪಂದ್ಯ ನಿರ್ಣಾಯಕರಾಗಿ 30 ಜನರು ಕರ್ತವ್ಯನಿರ್ವಹಿಸಿದರು. ಸುನೀಲ ಮೆಳ್ಳಿ ಸ್ವಾಗತಿಸಿದರು. ವೀಣಾ ಕಟಗಿ ನಿರೂಪಿಸಿದರು.


ಸುದ್ದಿ ಓದಿ