ಕಾಲೇಜು ಹತ್ತಿರ ಬಸ್ ನಿಲುಗಡೆಗೆ ಆಗ್ರಹ
ಲೋಕದರ್ಶನ ವರದಿ
ಬಳ್ಳಾರಿ 23: ಹೊರವಲಯದಲ್ಲಿರುವ ಬಿ.ಐ.ಟಿ.ಎಂ. ಕಾಲೇಜು ಸಂಜೆ 4:30ಕ್ಕೆ ಬಿಡುತ್ತದೆ, ಈ ಕಾಲೇಜಿನ ಹತ್ತಿರ ಪ್ರತಿದಿನ ಸಂಜೆ ವಿದ್ಯಾಥರ್ಿಗಳು ಬಸ್ ನಿಲುಗಡೆಗಾಗಿ ಕೈಯೊಡ್ಡಿದರೂ ಯಾವುದೇ ಬಸ್ ನಿಲ್ಲಿಸುತ್ತಿಲ್ಲ. ಬಸ್ಗಾಗಿ ಕಾದು-ಕಾದು ತಡವಾಗಿ ಮನೆ ಸೇರುವಂತಾಗಿದೆ. ಅಲ್ಲದೇ ಆ ಸಮಯದಲ್ಲಿ ಬಸ್ ಪಾಸ್ ಅಲೋ ಮಾಡದ ಬಸ್ಗಳೇ ಬರುತ್ತವೆ ಮತ್ತು ಬೇರೆ ಬಸ್ಗಳು ನಿಲ್ಲಿಸುವುದೇ ಇಲ್ಲ. ಸಾಕಷ್ಟು ವಿದ್ಯಾಥರ್ಿನಿಯರು ಕೂಡ ಇರುವುದರಿಂದ ದೂರದ ಹೊಸಪೇಟೆ, ಸಂಡೂರು, ಕಂಪ್ಲಿ, ಗಂಗಾವತಿಗೆ ಹೋಗುವ ವಿದ್ಯಾಥರ್ಿಗಳು ತಡರಾತ್ರಿ ಮನೆ ಸೇರುವಂತಾಗಿದೆ. ಇದರಿಂದ ವಿದ್ಯಾಭಾಸಕ್ಕೆ ತೊಂದರೆಯಗುತ್ತಿದೆ.
ಈ 2 ವರ್ಷದ ಹಿಂದೆ ಕಾಲೇಜಿನ ಬಳಿ ಬಸ್ ನಿಲುಗಡೆಗೆ ಒಂದು ಕೌಂಟರ್ ಇತ್ತು ಆಗ ಎಲ್ಲಾ ಬಸ್ ನಿಲ್ಲಿಸುತ್ತಿತ್ತು ಎಂದು ವಿದ್ಯಾಥರ್ಿಗಳು ಹೇಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಥರ್ಿಗಳ ಹಿತದೃಷ್ಟಿಯಿಂದ ಬಸ್ ನಿಲುಗಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಂ..ಆ.ಖ.ಔ ವಿದ್ಯಾಥರ್ಿ ಸಂಘಟನೆಯ ನೇತೃತ್ವದಲ್ಲಿ ವಿದ್ಯಾಥರ್ಿಗಳು ನಿಯೋಗದಲ್ಲಿ ಬಸ್ ಡಿಪೋಗೆ ತೆರಳಿ ಮಾನ್ಯ ಜಿಲ್ಲಾ ಸಾರಿಗೆ ಅಧಿಕಾರಿಗಳಾದ ಕೃಷ್ಣಮೂತರ್ಿರವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಕೂಡಲೆ ಬಸ್ ನಿಲುಗಡೆ ಮಾಡಲಾಗುವುದೆಂದು ಭರವಸೆ ನೀಡಿದರು.
ಈ ನಿಯೋಗದಲ್ಲಿ ಎಐಡಿಎಸ್ಓನ ಜಿಲ್ಲಾಧ್ಯಕ್ಷರಾದ ಗೋವಿಂದ್, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್.ವಿ.ಎನ್, ಮತ್ತು ಬಿ.ಐ.ಟಿ.ಎಮ್. ಕಾಲೇಜಿನ ವಿದ್ಯಾಥರ್ಿಗಳಿದ್ದರು. ಮದ್ಯಾಹ್ನ 12:30 ರಿಂದ 1:30ರ ವರೆಗೆ ಬಳ್ಳಾರಿಯಿಂದ ಬಿ.ಐ.ಟಿ.ಎಂ ಮಾರ್ಗವಾಗಿ ಹೋಗುವ ಎಲ್ಲಾ ಬಸ್ಗಳನ್ನು ಬಿ.ಐ.ಟಿ.ಎಂ. ಕಾಲೇಜಿನ ಹತ್ತಿರ ನಿಲ್ಲಿಸಿ. ಸಂಜೆ 4:30 ರಿಂದ 5:30 ರ ವರೆಗೆ ಬಳ್ಳಾರಿಯಿಂದ ಬಿ.ಐ.ಟಿ.ಎಂ ಮಾರ್ಗವಾಗಿ ಹೋಗುವ ಎಲ್ಲಾ ಬಸ್ಗಳನ್ನು ಬಿ.ಐ.ಟಿ.ಎಂ. ಕಾಲೇಜಿನ ಹತ್ತಿರ ನಿಲ್ಲಿಸಿ.