ಮಹಾರಾಷ್ಟ್ರಕ್ಕೆ ಅಥಣಿಯಿಂದ ಹೊರಡುವ ಬಸ್ ಸಂಚಾರ ಸ್ಥಗಿತ
ಅಥಣಿ 13: ಮಹಾರಾಷ್ಟ್ರದ ಶಿವಸೇನೆಯಿಂದ ಕರ್ನಾಟಕ ಸಾರಿಗೆ ಇಲಾಖೆ ವಾಹನಗಳ ಮೇಲೆ ಜೈ ಮಹಾರಾಷ್ಟ್ರದ ಎಂದು ಬರೆದು ಪುಂಡಾಟಿಕೆ ನಡೆಸಿದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಅಥಣಿಯಿಂದ ಮಹಾರಾಷ್ಟ್ರದ ಗಡಿಯೊಳಗೆ ಹೊರಡುವ ಎಲ್ಲಾ ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಅಥಣಿ ತಾಲೂಕು ಹೆಚ್ಚಾಗಿ ಮಹಾರಾಷ್ಟ್ರದ ಗಡಿ ಹೊಂದಿರುವ ತಾಲೂಕು ದಿನನಿತ್ಯ ಮಹಾರಾಷ್ಟ್ರದ ರಾಜ್ಯದ ಜತ್ತ್, ಸಾತಾರ್, ಮೀರಜ್, ಸಾಂಗ್ಲಿ, ಜಿಲ್ಲೆಗಳಿಗೆ ನಿತ್ಯವೂ 36 ಬಸ್ ಸಂಚಾರ ಮಾಡುತ್ತಿದ್ದವು. ಸದ್ಯ ಗಡಿ ವಿಚಾರವಾಗಿ ಶಿವಸೇನೆ ಪುಂಡಾಟಿಕೆ ಮಾಡುತ್ತಿರುವುದು ಗಮನಿಸಿ ಕರ್ನಾಟಕ ಸಾರಿಗೆ ಇಲಾಖೆ ಬಸ್ ಸಂಚಾರ ಸ್ಥಗಿತ ಗೋಳಸಿದೆ. ಕರ್ನಾಟಕ ಗಡಿಯಲ್ಲಿ ಮಾತ್ರ ಬಸ್ ಸಂಚಾರ ಪ್ರಾರಂವಾಗಿದ್ದು. ಮಹಾರಾಷ್ಟ್ರಕ್ಕೆ ತೆರಳುವ ಹಲವಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಹಾಗೆ ಮಹಾರಾಷ್ಟ್ರದ ಸಾರಿಗೆ ಬಸಗಳು ಅಥಣಿಗೆ ಬರುದನ್ನು ನಿಲ್ಲಿಸಿದೆ ಎಂದು ಅಥಣಿ ಸಾರಿಗೆ ಘಟಕ ಅಧಿಕಾರಿಗಳು ಮಾಹಿತಿ ನೀಡಿದರು.