ಸಿಂಧಗಿ

ಸಾಮರ್ಥ್ಯಗಳ ಸದ್ಬಳಕೆಯಿಂದ ಜೀವನ ಕಟ್ಟಿಕೊಳ್ಳಿ: ಆಲ್ವಿನ್ ಡಿ’ಸೋಜ

ಸಾಮರ್ಥ್ಯಗಳ ಸದ್ಬಳಕೆಯಿಂದ ಜೀವನ ಕಟ್ಟಿಕೊಳ್ಳಿ:  ಆಲ್ವಿನ್ ಡಿ’ಸೋಜ

ಸಿಂದಗಿ 28: ನಿಮ್ಮಲ್ಲಿರುವ ಕೌಶಲ್ಯಗಳು, ಸಾಮರ್ಥ್ಯಗಳನ್ನು ನೀವು ತಿಳಿದುಕೊಂಡು ಪ್ರದರ್ಶನ ಮಾಡುವ ಜೊತೆಗೆ  ಸಾಮರ್ಥ್ಯಗಳನ್ನು ಸದ್ಬಳಕೆ ಮಾಡಿಕೊಂಡು ಜೀವನ ಕಟ್ಟಿಕೊಳ್ಳಬೇಕು ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿ’ಸೋಜ ಹೇಳಿದರು. 

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ವಿಶೇಷ ಚೇತನರಿಗೆ ಸರಕಾರಿ ಸೌಲಭ್ಯ ಹಾಗೂ ಸೆಲ್ಕೋ ಸೊಲಾರ್ ಕುರಿತು ಮಾಹಿತೀನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರಲ್ಲಿ ಪ್ರತಿಭೆಯಿರುತ್ತದೆ. ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕು ಕಟ್ಟಿಕೊಳ್ಳ ಬೇಕು. ನಮ್ಮಲ್ಲಿ ಕಿಳರಿಮೆಯಿರಬಾರದು. ಸ್ವಯಂ ಉದ್ಯೋಗ ಮಾಡಬೇಕು. ಸಮಾಜದಲ್ಲಿ ನಮಗೆಲ್ಲರಿಗೂ ಗೌರವಸ್ಥಾನವಿರುತ್ತದೆ. ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸ್ವಯಂ ಉದ್ಯೋಗಿಗಲಾಗುವ ಜೊತೆಗೆ ಇತರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಸ್ವಯಂ ಉದ್ಯೋಗ ಮಾಡಲು ಸೆಲ್ಕೋ ಸೋಲಾರ ಹೋಲಿಗೆ ಯಂತ್ರ, ಸೋಲಾರ ಝರಾಕ್ಷ ಮಸೀನ್ ಬಳಕೆ ಮಾಡಿಕೊಂಡು ಬದುಕುಕಟ್ಟಿಕೊಳ್ಳ ಬೇಕು ಎಂದು ಹೇಳಿದರು. 

ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಅವರು ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಚೇತನರಿಗಾಗಿ ಶೇಕಡಾ 5 ರಷ್ಟು ಅನುದಾನ ಇರುತ್ತದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳ ಬೇಕು.  

ವಿಜಯಪುರದ ಸೆಲ್ಕೋ ಸೋಲಾರ ಶಾಖಾ ವ್ಯವಸ್ಥಾಪಕ ಆನಂದ ಪಡನಾಳ ಮತನಾಡಿ, ವಿಶೇಷ ಚೇತನರು ಸ್ವಯಂ ಉದ್ಯೋಗ ಮಾಡಲಿಚ್ಚಿಸುವವರು ಸೋಲಾರ್ ಬಳಸಿ ತಮ್ಮ ಉದ್ಯೋಗ ಪ್ರಾರಂಬಿಸಿದರೆ ಹೆಚ್ಚಿನ ಲಾಭ ಪಡೆಯ ಬಹುದು. ಸೊಲಾರ್‌ನಿಂದ ರೊಟ್ಟಿ ಮಸೀನ್, ಹೊಲಿಗೆ ಮಸೀನ್‌ಗಳಿವೆ. ಹೈನುಗಾರಿಕೆ ಇದ್ದವರಿಗೆ ಹಾಲು ಕರಿಯುವ ಯಂತ್ರ ಸಿಗುತ್ತದೆ. ಮನೆಗೆ ಸೋಲಾರ್ ಬಲ್ಬು ಬಳಬಹುದು ಎಂದು ಹೇಳಿದರು. 

ಪ್ರಸನ್ನ ಕುಮಾಸ್ಥೆ ಮಾತನಾಡಿ, ನಾವು ವಿಶೇಷ ಚೇತನರು ಇದ್ದರು ಕೂಡಾ ನಾವು ಇನ್ನೊಬ್ಬರಿಗೆ ಅವಲಂಬಿತರಾಗಿರಬಾರದು. ಯಾಕಂದರೆ ಅವರು ಒಂದಲ್ಲ ಒಂದು ದಿನ ನಮ್ಮ ಕೈ ಬಿಡಬಹುದು ಅದಕ್ಕಾಗಿ ನಾವೆಲ್ಲರು ಸ್ವಾವಲಂಬಿಗಳಾಗಿರಬೆಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತೇಜಸ್ವಿನಿ ಹಳ್ಳದಕೇರಿ ಭಾರತದ ಸಂವಿಧಾನ ಪ್ರಾಸ್ತ್ತವನೆಯನ್ನು ಓದಿದರು. 

ರಾಜೀವ ಕುರಿಮನಿ ಸ್ವಾಗತಿಸಿದರು. ವಿಜಯ ಬಂಟನೂರ ನಿರೂಪಿಸಿದರು. ಮಲಕಪ್ಪ ವಂದಿಸಿದರು. 


ಸುದ್ದಿ ಓದಿ