ಜಮಖಂಡಿ

ಬೌದ್ಧ ಧರ್ಮವು ಸನಾತನ ಧರ್ಮಕ್ಕೆ ನಿಕಟವಾಗಿದೆ: ಡಾ.ಆರ್‌.ಗಣೇಶ

ಬೌದ್ಧ ಧರ್ಮವು ಸನಾತನ ಧರ್ಮಕ್ಕೆ ನಿಕಟವಾಗಿದೆ: ಡಾ.ಆರ್‌.ಗಣೇಶ

ಸತ್ಯಕಾಮರ ಜನ್ಮಾರಾಧನೆಯ ಬುದ್ಧದರ್ಶನ ಕಾರ್ಯಕ್ರಮದಲ್ಲಿ ಶತಾವಧಾನಿ ಡಾ.ಆರ್‌.ಗಣೇಶ ಹೇಳಿಕೆ 

ಜಮಖಂಡಿ 10: ಬುದ್ಧನ ತತ್ವಗಳು ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವ ತತ್ವ ಅಲ್ಲ, ನಮ್ಮಲ್ಲಿನ ಆತ್ಮವನ್ನು ಜಾಗೃತಗೊಳಿಸಿದರೆ ಜ್ಞಾನ ಒಲಿಯುವುದು. ಬೌದ್ಧ ಧರ್ಮವು ಸನಾತನ ಧರ್ಮಕ್ಕೆ ನಿಕಟವಾಗಿದೆ. ಬುದ್ಧನು ಶೂನ್ಯವಾದಿಯಲ್ಲ ಮಹಾ ಆನಂದವಾದಿಯಾಗಿದ್ದ. ಎಲ್ಲರನ್ನು ಗೌರವಿಸಿ ಸಮಾನವಾಗಿ ಕಾಣುತಿದ್ದ ಎಂದು ಬೆಂಗಳೂರಿನ ಶತಾವಧಾನಿ ಡಾ.ಆರ್‌.ಗಣೇಶ ವಿದ್ವಾಂಸರು ಹೇಳಿದರು. 

ತಾಲೂಕಿನ ಸಮೀಪ ಕಲ್ಹಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನ ಸುಮ್ಮನೆ ಸತ್ಯಕಾಮರ ತೋಟದ ಮನೆಯಲ್ಲಿ ನಡೆದ ಸತ್ಯಕಾಮರ ಜನ್ಮಾರಾಧನೆ ನಿಮಿತ್ಯ ಬುದ್ಧದರ್ಶನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಬುದ್ಧ ಉಪದೇಶ ಮಾಡಿದ್ದೂ ಕೂಡಾ ಪೌರ್ಣಮಿ ದಿನ ಹೀಗಾಗಿ ಬುದ್ಧ ಹೇಗೆ ಸನಾತನ ವಿರೋಧಿಯಾಗ್ತಾನೆ. ಇಂದಿನ ಕಾಲದಲ್ಲಿ ಕಮ್ಯುನಿಸ್ಟ್‌ಗಳು ಬುದ್ದನ ತತ್ವಗಳನ್ನು ತಮಗೆ ಬೇಕಾದ ರೀತಿಯಲ್ಲಿ ತೀರುಚುತ್ತಿದ್ದಾರೆ ಎಂದರು. 

ಸುವರ್ಣ ನ್ಯೂಸ್ ಅಜಿತ ಹಣಮಕ್ಕನವರ ಮಾತನಾಡಿ, ಬುದ್ಧ ಎಂದರೆ ಬೆಳಕು ಆತನ ಜ್ಞಾನ, ತತ್ವಗಳನ್ನು ಸರಿಯಾಗಿ ಅಳವಡಿಸಿಕೊಳ್ಳದೆ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗುರು ಎಂದರೆ ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತಾಗಬಾರದು ಹೊರತು ಇಳಿಸಿ ನಾವು ಮುಂದೆ ಸಾಗಬೇಕು ಎಂಬ ಸತ್ಯಕಾಮರು ಬರೆದ ಸಾಲನ್ನು ಅಂದು ನನಗೆ ರವಿ ಬೆಳೆಗೆರೆ ತಿಳಿಸಿಕೊಟ್ಟದರಿಂದ ಜೀವನ ಮೌಲ್ಯ ಅರಿತು ಬದಕುತ್ತಿದ್ದೇನೆ. ಜೀವನದಲ್ಲಿ ಯಾವುದೇ ಕೆಲಸವಾದರು ಶೇ.100 ಪರಿಶ್ರಮವಿರಬೇಕು. ಶಾಲಾ ಪಠ್ಯ ಪುಸ್ತಕದಲ್ಲಿನ ವಿಷಯವನ್ನು ಪುಣ್ಯಕ್ಕೆ ನಾವು ಪರೀಕ್ಷೆಗಾಗಿ ಓದಿ ಬಿಡುತ್ತೇವೆ ಅದನ್ನೇ ಮನಸ್ಸಿನ ಮೆಲೆ ತಗೆದುಕೊಂಡು ಗಂಭೀರವಾಗಿ ಓದಿದ್ದರೆ ನಮ್ಮ ದೇಶದ ಗತಿ ಅಧೋಗತಿ ಆಗುತ್ತಿತ್ತು ಎಂದರು. 

ಉಡಪಿ ಕಾರ್ಕಳ ಪತ್ರಕರ್ತ ಶ್ರೀಕಾಂತ ಶೆಟ್ಟಿ ಮಾತನಾಡಿ, ಜ್ಞಾನ ಎಂಬುದು ಬಹಿರ್ಮುಖಿಯಲ್ಲ ಅಂತರ್ಮುಖಿ. ಬುದ್ಧ ಎಂದಿಗೂ ಪ್ರತಿಮೆ ಸ್ಥಾಪಿಸಿ, ಪೂಜಿಸಿ, ಪಂತ ಮಾಡಿಕೊಂಡು ವೈದಿಕ ಸಂಸ್ಕೃತಿಯನ್ನು ಅಳಿಸುವಂತೆ ಹೇಳಿಲ್ಲ. ಇಂದಿನ ನವಬುದ್ದರು ತತ್ವಗಳನ್ನು ತಿಳುಕೊಳ್ಳದೆ ಸಮಾಜವನ್ನು ವಿರುದ್ಧ ದಿಕ್ಕಿನಲ್ಲಿ ಎತ್ತಿಕಟ್ಟಿ ಭಾರತದ ವೈದಿಕ ಸಂಸ್ಕೃತಿಗಳ ವಿರುದ್ಧ ಕೆಲವು ಸಂಚುಗಳು ನಡೆಯುತ್ತಿವೆ. ಬುದ್ಧನ ಹೆಸರಲ್ಲಿ ಹಿಂದೂ ಸಮಾಜವನ್ನು ಹಿತ್ತಿಕ್ಕುವ ಕೆಲಸ ನಡೆದಿದೆ. ಬುದ್ದನ ಸ್ವರೂಪವನ್ನು ತೋರಿಸುವ ಕೆಲಸ ಈ ಕಾರ್ಯಕ್ರಮದಿಂದ ಆಗುತ್ತಿದೆ ಎಂದರು.  

ಶಿಕ್ಷಣತಜ್ಞ ಗುರುರಾಜ ಕರಜಗಿ ಮಾತನಾಡಿ, ಒಬ್ಬರ ಯಶಸ್ವಿಗೆ ಹಲವಾರು ಕೈಗಳ ಪರಿಶ್ರಮವಿರುತ್ತದೆ. ಹಾಗೆಯೇ ಬುದ್ದನ ಜೀವನದಲ್ಲಿ ಆತ್ಮಸಂಗಾತಿ ಯಶೋಧರೆ ಪಾತ್ರ ಮುಖ್ಯವಾಗಿದೆ. ಸಿದ್ದಾರ್ಥನಿದ್ದವ ಎಲ್ಲಾ ತೊರೆದು ಬುದ್ದನಾಗಲು ಹೋರಟಾಗ ಅದರಿಂದ ಯಶೋಧರೆಗೆ ಆದ ನೋವು, ಸಂಕಟ, ಕಷ್ಟಗಳನ್ನು ಸಹಿಸಿಕೊಂಡು ಒಬ್ಬ ಮಗನಾಗಿ ಮನೆ ನಡೆಸಿ, ಮಗನಿಗೆ ತಂದೆಯಾಗಿ ನಿಂತು ಜೀವನ ನಡೆಸಿ ಕೊನೆಗೆ ತಾನೂ ಬುದ್ದ ಸಂಘದಲ್ಲಿ ಅರ್ಹತಾ ಸನ್ಯಾಸತ್ವ ಪಡೆದುಕೊಂಡು ಕೊನೆಗೆ ಅಸುನೀಗಿದಳು ಎಂದರು. 

ವೀಣಾ ಬನ್ನಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಬುದ್ಧ್ದನ ತತ್ವಗಳನ್ನು ತಿರುಚಿ ಹಿಂದೂ ಧರ್ಮದ ವಿರೋಧಿ ಮಾಡುತ್ತಿರುವ ಕಮ್ಯೂನಿಸ್ಟ್‌ಗಳ ಕೈಯಲ್ಲಿನ ಬುದ್ಧರನ್ನು ಅಶ್ವಥಕಟ್ಟೆಗೆ ತನ್ನಿರಿ. ಬುದ್ಧ ಹಿಂದೂ ವಿರೋಧಿಗಳಿರಲಿಲ್ಲ ಎಂದರು. 


ಸುದ್ದಿ ಓದಿ