ಬ್ರಮರಾಂಬಾ ಮಹಿಳಾ ಮಂಡಳ ವಾರ್ಷಿಕ ಸ್ನೇಹಸಮೇಳನ
ಜಮಖಂಡಿ 15: ನಗರದ ಕಲ್ಯಾಣ ಮಠದ ಸಮುದಾಯ ಭವನದಲ್ಲಿ ಬ್ರಮರಾಂಬಾ ಮಹಿಳಾ ಮಂಡಳ ವಾರ್ಷಿಕ ಸ್ನೇಹಸಮೇಳನ ಜರುಗಿತು.
ರಾಷ್ಟ್ರಪ್ರಶಸ್ತಿ ವಿಜೇತ ಸಪ್ನಾ ಅನಿಗೋಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವು ಪುರಾತನವಾಗಿದ್ದು. ಅದು ವಿಶ್ವದಲ್ಲಿ ಮಾದರಿಯಾಗಿದೆ. ಎಲ್ಲ ತಂದೆ, ತಾಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುವದು ಅವಶ್ಯಕತೆಯಾಗಿದೆ. ಒಳ್ಳೆಯ ಮಾರ್ಗದರ್ಶನದಲ್ಲಿ ಮಕ್ಕಳನ್ನು ಬೆಳೆಸಬೇಕು. ಭೂಮಿತಾಯಿಯ ಬಗ್ಗೆ ತಿಳುವಳಿಕ್ಕೆಯನ್ನು ನೀಡಬೇಕು. ನಮ್ಮ ಸಂಸ್ಕೃತಿ ಪರಂಪರೆಯನ್ನು ಅನುಸರಿಸಿ ನಡೆದರೆ ದೇಶ ಅಭಿವೃದ್ದಿ ಹೊಂದಲು ಸಾಧ್ಯ. ಇಂದಿನ ಮಹಿಳೆಯರು ಸ್ವಾಲಂಬಿಯಾಗಿ ಬದುಕು ನಡೆಸುವದು ಬಹಳ ಮುಖ್ಯವಾಗಿದೆ ಎಂದರು.
ವೇದಿಕೆಯಲ್ಲಿ ಮಹಿಳಾ ಮಂಡಳ ಅಧ್ಯಕ್ಷೆ ಯಶಸ್ವಿನಿ ಮಠ, ರಜನಿ ಕರಡಿ, ಶ್ರೀದೇವಿ ಮಠ, ಸುಷ್ಮಾ ಹಿರೇಮಠ ಇದ್ದರು. ಪ್ರತಿಭಾ ಅಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಗೀತಾ ಹಿರೇಮಠ ಸ್ವಾಗತಗೀತೆ ಹಾಡಿದರು. ಸುನಂದಾ ಗುಡ್ಲಿ ಸ್ವಾಗತಿಸಿದರು. ಶ್ರೀದೇವಿ ಸುವರ್ಣಖಿಂಡಿ ವರದಿ ವಾಚನ ನೀಡಿದರು. ಶ್ರೀದೇವಿ ಮಠ ವಂದಿಸಿದರು.