ಕಾಂಗ್ರೆಸ ಗ್ಯಾರಂಟಿ ಬಾಂಡಗಳ ಅಭಿಯಾನಕ್ಕೆ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಚಾಲನೆ
ಸಿಂದಗಿ: ಹಿಂದೆ ಕಾಂಗ್ರೆಸ್ ಚುನಾವಣೆ ಪ್ರಣಾಳೀಕೆಯಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಪು:ನ ಪ್ರಾರಂಭ ಮಾಡುವುದಲ್ಲದೆ ಕಾಂಗ್ರೆಸ ಗ್ಯಾರಂಟಿ ಗೃಹಲಕ್ಷ್ಮಿ, ಗೃಹಜ್ಯೋತಿ, ಮನೆ ನಿರ್ವಹಣೆಗೆ ಕಾಂಗ್ರೆಸ ಪರಿಹಾರ ಬಾಂಡಗಳು, ಹಾಗೂ ಕುಟುಂಬದ ಪ್ರತಿ ಸದಸ್ಯರಿಗೆ 10 ಕಿಲೊ ಅನ್ನ ಬಾಗ್ಯ ಯೋಜನೆ ಮೂಲಕ ಹಂಚಲಾಗುವದು ಎಂದು ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಹೇಳೀದರು.
ತಾಲೂಕಿನ ಗೋಲಗೇರಿ, ಯಂಕಂಚಿ, ಮಾಡಬಾಳ, ಗ್ರಾಮದಲ್ಲಿ ಮನೆ ಮನೆಗೆ ಬೇಟಿ ನೀಡಿ ಕಾಂಗ್ರೆಸ ಗ್ಯಾರಂಟಿ ಬಾಂಡಗಳ ಅಭಿಯಾನ ಚಾಲನೆ ನೀಡಿ, ಮಾತನಾಡಿ, ಕಾಂಗ್ರೆಸ ಪಕ್ಷ ಅಧಿಕಾರದಲ್ಲಿದಾಗ ಬಡವರು, ಯುವಕರು, ರೈತರು, ಕಾಮರ್ಿಕರು, ವಯಸ್ಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದ ನಮ್ಮ ನಿಮ್ಮಲ್ಲೇರ ನೆಚ್ಚಿನ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು 5 ವರ್ಷ ಸಂಪೂರ್ಣವಾಗಿ ಯಾವುದೆ ಸಮಸ್ಯೆಗಳಿಲ್ಲದೆ ಅಧಿಕಾರ ನಡೆಸಿದರು. ಅದರಂತೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬಂದರೆ ಈಗಿನ ಸಕರ್ಾರ ಕೊಡುವ 5 ಕಿಲೊ ಅಕ್ಕಿ ಬದಲು 10 ಕಿಲೊ ಕೊಡಲಾಗುವದು, ಹಾಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ರೂ ಕೊಡಲಾಗುವದು, ಗೃಹಜ್ಯೋತಿ ಯೊಜನೆ ಅಡಿಯಲ್ಲಿ ಬಡವರಿಗಾಗಿ ಉಚಿತ ವಿದ್ಯುತ ನೀಡಲಾಗುವದು, ಹಾಗೂ ಗ್ಯಾಸ ಬೆಲೆ ಇಳಿಕೆ ಮಾಡಲಾಗುವದು ಈ ಎಲ್ಲಾ ಯೋಜನೆಗಳನ್ನೊಳಗೊಂಡ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರ ಸಹಿಯನ್ನು ಹೊಂದಿದ ಬಾಂಡಗಳನ್ನು ತಮಗೆ ನಿಡುತ್ತಿದ್ದೆವೆ ಇದನ್ನು ತಾವೆಲ್ಲರೂ ತಿಳಿದುಕೊಂಡು ಸದೃಡ ಹಾಗೂ ಸುರಕ್ಷಿತ ಕುಟುಂಬಕ್ಕಾಗಿ ಕಾಂಗ್ರೆಸಗೆ ವೋಟ್ ಮಾಡಿ ಕಾಂಗ್ರೆಸ ಗೆಲ್ಲಿಸಿ ಈ ಯೊಜನೆಗಳ ಉಪಯೋಗಗಳನ್ನು ತಾವೆಲ್ಲರು ಪಡೆದುಕೊಳ್ಳಬೆಕೆಂದು ಕರೆ ನೀಡಿದರು.