ಶಾಸಕ ಲಕ್ಷ್ಮಣ ಸವದಿಯವರ ಜನ್ಮ ದಿನ: ರೋಗಿಗಳಿಗೆ ಹಣ್ಣು ವಿತರಣೆ
ಅಥಣಿ 17: ಮಾಜಿ ಡಿಸಿಎಮ್ ಶಾಸಕ ಲಕ್ಷ್ಮಣ ಸವದಿಯವರ 64 ನೇ ಜನ್ಮ ದಿನದ ಅಂಗವಾಗಿ ಪುರಸಭಾ ಸದಸ್ಯ ದತ್ತಾ ವಾಸ್ಟರ್ ನೇತೃತ್ವದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.
ಪುರಸಭಾ ಸದಸ್ಯ ದತ್ತಾ ವಾಸ್ಟರ್ ಮಾತನಾಡಿ ಶಾಸಕ ಲಕ್ಷ್ಮಣ ಸವದಿಯವರ ಅಭಿಮಾನಿಗಳಾದ ನಾವು ಪ್ರತಿ ವರ್ಷ ಅವರ ಜನ್ಮ ದಿನದಂದು ವಿಶೇಷವಾಗಿ ಬಡ, ನಿರ್ಗತಿಕರಿಗೆ, ರೋಗಿಗಳಿಗೆ ಸೇವೆ ಒದಗಿಸುವ ಮೂಲಕ ಅಭಿಮಾನದಿಂದ ಆಚರಿಸುತ್ತೇವೆ ಎಂದ ಅವರು ರಾಜಕೀಯದಲ್ಲಿ ಉಪ ಮುಖ್ಯಮಂತ್ರಿಯಂತಹ ಉನ್ನತ ಸ್ಥಾನಕ್ಕೇರಿದ್ದ ಶಾಸಕ ಲಕ್ಷ್ಮಣ ಸವದಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಕೋರಿದರು.
ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಆಸೀಫ ತಾಂಬೋಳಿ, ಕಲ್ಲೇಶ ಮಡ್ಡಿ, ಬಿ.ಎನ್.ಪಾಟೀಲ, ಬಸು ನಾಯಿಕ, ತಿಪ್ಪಣ್ಣ ಭಜಂತ್ರಿ, ಸರಕಾರಿ ಆಸ್ಪತ್ರೆಯ ಡಾ.ಕಾಗೆ, ಧುರೀಣರಾದ ಆನಂದ ದೇಶಪಾಂಡೆ, ವಿಜಯ ಮಂಗಸೂಳಿ, ದೀಪಕ ಟಿಕಾರೆ, ರಾಜು ಢಾಲೆ, ಶ್ರೀನಿವಾಸ ಪಟ್ಟಣ, ಪ್ರದೀಪ ನಂದಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.