ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಜಮಖಂಡಿ 02: ತಾಲೂಕಿನ ಆಲಗೂರ ಗ್ರಾಮದ ಬಳಿ ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಆಲಗೂರ ಗ್ರಾಮದ ಸಂಜು ರಾಮಪ್ಪ ಡುಮಕ್ಕಿ (28) ಆಲಗೂರ ಗ್ರಾಮದಿಂದ ಜಮಖಂಡಿ ಕಡೆಗೆ ಬೈಕ್ ಮೇಲೆ ಬರುವ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಯುವಕ ಸ್ಥಳದಲ್ಲಿ ಸಾವನ್ನಪ್ಪಿ ದುರ್ದೈವಿ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೋಲೀಸರು ಆಗಮಿಸಿ ತನಿಖೆಯನ್ನು ಮುಂದುವರಿಸಿದ್ದು. ಮನೆಯ ಕುಟುಂಬಸ್ಥರ ಅಕ್ರಂದ ಮುಗಿಲು ಮುಟ್ಟುವಂತೆ ಇತ್ತು.