ಬಿಹಾರ ಮೂಲದ ವ್ಯಕ್ತಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಸಾವು

ಜಮಖಂಡಿ 23: ಬಿಹಾರ ಮೂಲದ ಅಪರಿಚಿತ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.  

ನಗರದ ಗ್ರಾಮೀಣ ಪೋಲಿಸ್ ಠಾಣಿಯ ಬಳಿ ವ್ಯಕ್ತಿಯೊರ್ವನು ಚಲಿಸುತ್ತಿರುವ ಸ್ವೀಫ್ ಡಿಜೈರ್ ಕಾರಿನ ಚಕ್ರಕ್ಕೆ ಸಿಲುಕಿ ತಲೆಭಾಗದ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಿಹಾರ ಮೂಲದ ಮಸನಸಿಕ ಅಸ್ವಸ್ಥತ ವ್ಯಕ್ತಿ ಎಂದು ತಿಳಿದು ಬರುತ್ತದೆ.  

ತಾಲೂಕಿನ ಸನಾಳ ಗ್ರಾಮದ ತಿಪ್ಪಣ್ಣ ಪಕ್ಕಾಲಿ ಅವರ ಸ್ವೀಫ್ ಡಿಜೈರ್ ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.  

ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ, ಶಹರ ಠಾಣಿಯ ಪಿಎಸ್ ಐ ನಾಗರಾಜ ಕಿಲಾರೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.  

ಸಾವನ್ನಪ್ಪಿದ ಅಪರಿಚಿತ ವ್ಯಕ್ತಿ ಬಿಹಾರ ಮೂಲದವನಾಗಿದ್ದಾನೆಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಶಹರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.