ಭೀಮರಾಯ ಅವರಾದಿ ನಿಧನ
ಇಂಡಿ 01: ತಾಲೂಕಿನ ನಿಂಬಾಳ ಕೆ.ಡಿ. ಗ್ರಾಮದ ಶಿಕ್ಷಕ ಭೀಮರಾಯ ಅವರಾದಿ (52) ಸೋಮವಾರ ಕೋವಿಡ್ ಸೋಂಕಿನಿಂದ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ನಿಂಬಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 22 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಓರ್ವ ಪುತ್ರ, ಈರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.