ಬಳ್ಳಾರಿ: ಸಿಡಿಬಂಡಿ ರಥೋತ್ಸವ: ಹರಿದುಬಂದು ಜನಸಾಗರ

ಬಳ್ಳಾರಿ: ಸಿಡಿಬಂಡಿ ರಥೋತ್ಸವ: ಹರಿದುಬಂದು ಜನಸಾಗರ

ಬಳ್ಳಾರಿ 20: ನಗರದ ಆದಿದೇವತೆ ಶ್ರೀ ಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಜನಸಾಗರ ಹರಿದುಬಂದು ರಥೋತ್ಸವವನ್ನು ವಿಕ್ಷಿಸಿ ದೇವರ ದರ್ಶನವನ್ನು ಪಡೆದರು. ಸಂಜೆ 5:30ಕ್ಕೆ ಆರಂಭವಾಗಬೇಕಿದ್ದ ರಥೊತ್ಸವ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಬೆಳಿಗ್ಗೆ 4 ಗಂಟೆಯಿಂದ ದೇವಿಯ ದರ್ಶನ ಪಡೆಯಲು ಭಕ್ತಾದಿಗಳು ಸಾಲು-ಸಾಲಾಗಿ ಬರುತ್ತಿರುವುದು ಕಂಡುಬಂತು. ದೇವರಿಗೆ ಬೆಳಿಗ್ಗೆ ವಿಶೇಷ ಅಭಿಷೇಕ ಮಾಡುವ ಮೂಲಕ ಬಂಗಾರದ ಆಭರಣಗಳಿಂದ ಅಲಂಕಾರಗೊಳಿಸಿ ದೇವಿಯ ಪೂಜೆಯನ್ನು ನೆರವೇರಿಸಿದರು. ದೇವಸ್ಥಾನದ ಒಳಗಡೆ ವಿಶೇಷವಾದ ಹೂವಿನ ಅಲಂಕಾರವನ್ನು ಮಾಡಿದ್ದರು. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಹಲವಡೆ ಭಕ್ತಾದಿಗಳಿಂದ ವಿವಿದ ಸೇವೆಗಳನ್ನು ನೀಡುತ್ತಿದ್ದರು. ಸಂಜೆ 5:30ಕ್ಕೆ ಗಾಣಿಗೆ ಸಮೂದಾಯ ಅಲಂಕರಿಸಿದ ಸಿಡಿಬಂಡಿಯನ್ನು ಮೂರು ಜೊತ ಸದೃಡ ಎತ್ತುಗಳ ಮೂಲಕ ಸಿಡಿಬಂಡಿಯನ್ನು ಎಳೆಯುವ ಕಾರ್ಯಕ್ರಮವು ನಡೆಯಿತು. ನಗರದ ಹಲವೆಡೆ ಭಕ್ತಾದಿಗಳಿಗಾಗಿ ಸೇವೆಯನ್ನು ಸಲ್ಲಿಸಲು ಪೋಲಿಸ್ ಇಲಾಖೆ ಬಹಳ ಅಚ್ಚು-ಕಟ್ಟಾದ ವ್ಯೆವೆಸ್ಥೆಯನ್ನು ಮಾಡಿದ್ದರು. ದೇವಸ್ಥಾನದ ವತಿಯಿಂದ ಉಚಿತ ಭೊಜನವನ್ನು ಸಹ ಏರ್ಪಡಿಸಿದ್ದರು. ಈ ಭೊಜನೆ ವ್ಯೆವೆಸ್ಥೆ ರಾತ್ರಿವರೆಗೂ ನಡೆದಿತ್ತು. ರಾತ್ರಿ 10 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜೊತೆಗೆ ವೀರಅಭಿಮನ್ಯು ನಾಟಕವನ್ನು ಸಹ ಏರ್ಪಡಿಸಿದ್ದರು. ರಾತ್ರಿ ಇಡೀ ಭಕ್ತಾದಿಗಳು ನಿದ್ದೆಗೆಟ್ಟು ನಾಟಕವನ್ನು ಬೆಳಿಗಿನ ಜಾವದವರೆಗೆ ವಿಕ್ಷಿಸಿದರು. ಈ ಬಾರಿ ವಿಶೇಷವಾದ ಅಭಿವೃದ್ದಿ ಕಾರ್ಯಕ್ರಮಗಳು ನಡೆದಿದ್ದು ಸಖಲ ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಎಲ್ಲವನ್ನು ವಿಕ್ಷಿಸುವ ವ್ಯೆವೆಸ್ಥೆಯನ್ನು ಕಲ್ಪಿಸಿದ್ದರು. ಜನಸಾಗರದ ನಡುವೆ ಸಿಡಿಬಂಡಿ ರಥೋತ್ಸವವು ಯಾವುದೇ ಅಡೆ-ತಡೆ ಇಲ್ಲದೇ ನಡೆದಿದ್ದು ಜಿಲ್ಲೆಯ ಜನತೆಗೆ ಎಲ್ಲವೂ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ಕಾರ್ಯಕ್ರಮಗಳು ನಡೆದವು. ಈ ಸಿಡಿಬಂಡಿಯನ್ನು ವಿಕ್ಷಿಸಲು ಜಾತಿ, ಮತ, ಬೇದವಿಲ್ಲದೇ ಭಕ್ತಾದಿಗಳು ಆಗಮಿಸಿತ್ತಿರುವುದು ಒಂದು ವಿಶೇಷವಾಗಿತ್ತು. 

 

ಸುದ್ದಿ ಓದಿ