ಬಳ್ಳಾರಿ: ಯೋಗ ಅಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರ: ಪಂಪಾಪತಿ

ಬಳ್ಳಾರಿ: ಯೋಗ ಅಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರ: ಪಂಪಾಪತಿ

ಬಳ್ಳಾರಿ 17: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿರುವ ನೋಬಲ್ ಆಂಗ್ಲ ಮಾಧ್ಯಮ ಸ್ಕೂಲ್ ಆವರಣದಲ್ಲಿರುವ ಎನ್.ಎಸ್.ಎಸ್ ಶಿಬಿರವನ್ನು ಜ್ಞಾನಜ್ಯೋತಿ ಮಹಾವಿದ್ಯಾಲಯದವರು ಹಮ್ಮಿಕೊಂಡಿದ್ದರು ಎನ್.ಎಸ್.ಎಸ್ ಶಿಬಿರದಲ್ಲಿ ಶಿಬಿರಾಥರ್ಿಗಳಿಗೆ ಒಂದು ವಾರಗಳ ಕಾಲ ಯೋಗ ಶಿಬಿರವನ್ನು ಜಿಲ್ಲಾ ಪತಾಂಜಲಿ ಯೋಗ ಸಮಿತಿಯವರು ನಡೆಸಿಕೊಡಲಿದ್ದು ಶಿಬಿರವನ್ನು ಜಿಲ್ಲಾ ಪತಾಂಜಲಿ ಯೋಗ ಸಂಯೋಜಕ ಇಸ್ವಿ. ಪಂಪಾಪತಿಯವರು ವಿದ್ಯಾಥರ್ಿಗಳಿಗೆ ಮತ್ತು ಹಳ್ಳಿ ನಾಗರಿಕರಿಗೆ ಯೋಗದ ಬಗ್ಗೆ ಹರಿವು ಮೂಡಿಸಿದರು. ಈಗಿನ ಆಧುನಿಕ ಜೀವನ ಶೈಲಿ ಮನಷ್ಯುನ ಮಾನಸಿಕ ಶಾಂತಿಯನ್ನು ಕದಡಿ ಅತನ ಶರೀರದಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಿ ಆಯುಷ್ಯ ಕ್ಷೀಣಿಸುವುದಕ್ಕೆ ಕಾರಣವಾಗಿದೆ. ಭಾರತ ವಿಶ್ವಯೋಗ ವಳಗೊಂಡತೆ ಅಲವಾರು ಅಮೂಲ್ಯ ಜನೋಪಯೋಗಿ ಕೊಡಿಗೆಗಳನ್ನು ನೀಡಿದೆ ಎಂದರೆ 5000 ವರ್ಷಗಳಿಂದೆ ಇಂಡಿಸ್ ಸ್ವರಸ್ವತಿ ನಾಗರಿಕತೆ ಮೊಟ್ಟಮೋದಲ ಯೋಗವನ್ನು ಪ್ರಾರಂಭಿಸಿತು. ಯೋಗ ಭಾರತದೇಶದಲ್ಲಿ ಪ್ರಾರಂಭವಾಗಿದ್ದು  ಇಡೀ ವಿಶ್ವದಲ್ಲಿ ಹಮ್ಮಿಕೊಂಡಿದೆ. ತಾವುಗಳು ಒಂದು ತಾಸು ಪ್ರತಿ ನಿತ್ಯ ಯೋಗ ಅಭ್ಯಾಸವನ್ನು ಜೀವನದಲ್ಲಿ ರೂಡಿಸಿಕೊಂಡರೆ ರೋಗದಿಂದ ಮುಕ್ತರಾಗಿ ಆರೋಗ್ಯವನ್ನು ಗಳಿಸಬಹುದೆಂದು ಯೋಗ ಅಭ್ಯಾಸದ ಜೋತೆಗೆ ತಿಳಿವಳಿಕೆ ನೀಡಿದರು. 

ನೋಬಲ್ ಆಂಗ್ಲ ಮಾಧ್ಯಮ ಸ್ಕೂಲ್ ಅಧ್ಯಕ್ಷ ಗೋವಿಂದ ಮಾತಾನಾಡಿ "ಹಸಿರನ್ನು ಬೆಳಿಸಿ ನಾಡಿನ್ನು ಉಳಿಸಿ" ಹಸಿರೇ ಜೀವನದ ಒಂದು ಉಸಿರು. ಹಸಿರನ್ನು ಬೆಳುಸುವುದರಿಂದ ನಮ್ಮ ನರನಾಡಿಗಳಿಗೆ ಒಳ್ಳೆಯ ಆಮ್ಲಜನಕ ಸಿಕ್ಕು ಅದರಿಂದ ನಾನಾರೋಗಗಳು ದೂರವಾಗುತ್ತದೆಂದು ತಿಳಿಸಿದರು. 

ಜ್ಞಾನಜ್ಯೋತಿ ಮಹಾವಿದ್ಯಾಲಯದ ಅಧ್ಯಕ್ಷರಾದ ಬಿ.ಡಿ ಗೌಡ ಒಂದುವಾರದ ಶಿಬಿರದ ಬಗ್ಗೆ ವಿವರವಾಗಿ ತಿಳಿಸಿದರು. ಸ್ವಚ್ಚತ ಬಗ್ಗೆ  "ಗರ್ಭಕೋಶದ ಗೊರಳಿನ ತಪಾಸಣೆ ಶಿಬಿರ", ಮಹಿಳಾ ಸಂರಕ್ಷಣಾ ಕಾಯ್ದೆಗಳು,  ಹೆಪಟೈಟೀಸ್ -ಬಿ ಬಗ್ಗೆ ತಪಾಸಣೆ ಶಿಬಿರ ಹಾಗೂ ಬಾಲ ಕಾಮರ್ಿಕರ ನಿಮರ್ೂಲನೆ,  ಇಲ್ಲವುಗಳನ್ನು ಹಳ್ಳಿ ಜನರು ಉಪಯೋಗಿಸಿಕೊಳ್ಳಲು ಕರೆ ನೀಡಿದರು. ಶಿಬಿರದಲ್ಲಿ ಯೋಗ ಶಿಕ್ಷಕರಾದ ಮಹೇಶಗೌಡ, ಯುವಭಾರತ್ ಅಧ್ಯಕ್ಷರಾದ ಲಕ್ಷ್ಮಿ ರೆಡ್ಡಿ, ಪ್ರಾಂಶುಪಾಲ ವೆಂಕಟೇಶ್ ಎನ್.ಎಸ್.ಎಸ್ ಶಿಬಿರದ ಅಧಿಕಾರಿಗಳಾದ ವೀರೇಶ್, ಯೋಗ ಶಿಕ್ಷಕರಾದ ಗೂಳೆಪ್ಪ ಮತ್ತು ಪ್ರಕಾಶ್, ಉಪನ್ಯಾಸಕರಾದ ಮಯೂರ , ಪಾಂಡುರಂಗ ಹಾಗೂ ಶಿಬಿರಾಥರ್ಿಗಳು ಪಾಲ್ಗೊಂಡಿದ್ದರು. 

 

ಸುದ್ದಿ ಓದಿ