ಬಳ್ಳಾರಿ: ಗ್ರಾಮೀಣ ಕ್ರೀಡೆ ಕೋಲಾಟವನ್ನು ಮರುಕಳಿಸಿದ ಮಹಿಳೆಯರು

ಬಳ್ಳಾರಿ: ಗ್ರಾಮೀಣ ಕ್ರೀಡೆ ಕೋಲಾಟವನ್ನು ಮರುಕಳಿಸಿದ ಮಹಿಳೆಯರು

ಲೋಕದರ್ಶನ ವರದಿ

ಬಳ್ಳಾರಿ 04: ಗ್ರಾಮೀಣ ಜಾನಪದ ಕ್ರೀಡೆಯಾದ ಕೋಲಾಟವನ್ನು ಬಳ್ಳಾರಿಯ ಹಲವಾರು ಮಹಿಳೆಯರು ಪ್ರದರ್ಶನ ನೀಡಿ ಜನರ ಮನವನ್ನು ಗೆದ್ದರು. ನಗರದ ಮೋಕಾ ರಸ್ತೆಯಲ್ಲಿರುವ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ಸಂಜೆ ಹಲವಾರು ಮಹಿಳೆಯರು ಸತತ 70 ದಿನದ ತರಬೇತಿಯಿಂದ ಪ್ರದರ್ಶನ ನೀಡಿ ಜನರ ಮನಸ್ಸಿಗೆ ಮನೋರಂಜನೆ ನೀಡಿದರು. 

ಹಳೆ ಚಿತ್ರಗೀತೆಗಳ ಹಾಡುಗಳೊಂದಿಗೆ ಕೋಲಾಟವನ್ನು ಹಾಕುತ್ತಾ ತಮ್ಮ ಜನಪದ ಗ್ರಾಮೀಣ ಕ್ರೀಡೆಯನ್ನು ಮತ್ತೇ ಬೆಳಕಿಗೆ ತರುವ ಮೂಲಕ ಯಶಸ್ವಿಕಾರ್ಯಕ್ರಮವನ್ನು ಆಯೋಜಿಸಿದ್ದರು. ಯೋಗ, ದ್ಯಾನ, ಭಗವತ್ಗೀತೆ ಎನ್ನುವ ಕಾರ್ಯಗಾರದಲ್ಲಿ ಭಾಗವಹಿಸುತ್ತಿದ್ದ ಮಹಿಳೆಯರು ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟು ಕೋಲಾಟ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲರು ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ರೂಪಿಸಿದರು. 

ಕಾಮಾಕ್ಷಮ್ಮ ಅಕ್ಕ ಸಂಘಟನೆಯ 30 ರಿಂದ 50 ವರ್ಷದೊಳಗಿನ 30 ಮಹಿಳೆಯರು ಸತತ 70 ದಿನದ ತರಬೇತಿಯನ್ನು ಪಡೆದು ಕಾರ್ಯಕ್ರಮವನ್ನು ರೂಪಿಸಿದ್ದರು. 

ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಷಿಸಿ ಹೋಗುತ್ತಿರುವ ಕಾರಣ ನಾವು ಅಂತಹ ಆರೋಗ್ಯಕರವಾದ ಕ್ರೀಡೆಗಳನ್ನು ಈಗಿನ ಜನಾಂಗಕ್ಕೆ ಮತ್ತೇ ಚಾಲನೆ ಕೋಡಲು ನಾವು ಇದರ ಒಂದು ಪ್ರಯತ್ನವನ್ನು ಹಮ್ಮಿಕೊಂಡಿದ್ದೇವು. ಆದರೆ ನಮ್ಮ ಪ್ರಯತ್ನಕ್ಕೆ ಜನರಿಂದ ಒಳ್ಳೆಯ ಸ್ಪಂಧನೆ ಸಿಕ್ಕಿದ್ದು ಕಾರ್ಯಕ್ರಮ ಯಶಸ್ವಿಯಾಯಿತು ಎಂದರು. 

ಅಂತಯೇ ಇಂತಹ ಕೋಲಾಟ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಟ್ರಷ್ಟ್ ವತಿಯಿಂದ ತಿರುಪತಿಯಲ್ಲಿ ಈ ಕಾರ್ಯಕ್ರಮವನ್ನು ನೀಡಲು ಕರೆ ಬಂದಿದ್ದು ಎಲ್ಲಾ 30 ಮಹಿಳೆಯರು ತಿರುಪತಿಗೆ ತೆರಳಿ ಕಾರ್ಯಕ್ರಮ ನೀಡಲಿದ್ದೇವೆ ಎಂದು ತಿಳಿಸಿದರು. 

 

ಸುದ್ದಿ ಓದಿ