ಬಳ್ಳಾರಿ: ಮತದಾನ ಜಾಗೃತಿ: ಪ್ರಬಂಧ ಸ್ಪರ್ಧೆ ಕಾರ್ಯಕ್ರಮ

ಬಳ್ಳಾರಿ: ಮತದಾನ ಜಾಗೃತಿ: ಪ್ರಬಂಧ ಸ್ಪರ್ಧೆ ಕಾರ್ಯಕ್ರಮ

ಬಳ್ಳಾರಿ 26: ನಗರದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಡಾ|| ಪಿ.ಆರ್.ಕೆ ಡಿಗ್ರೀ ಕಾಲೇಜಿನಲ್ಲಿ ಮಂಗಳವಾರ ಮತದಾನ ಸಾಕ್ಷಾರತ ಅಭಿಯಾನ ಕಾರ್ಯಕ್ರಮವನ್ನು ಅಯೋಜಿಸಿದ್ದು ಇದರ ಅಂಗವಾಗಿ ಚಚರ್ಾಸ್ಪಧರ್ೆ, ಪ್ರಬಂದಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ  ನಡೆಸಿಕೊಟ್ಟರು.

ಉದ್ಘಾಟನೆಯನ್ನು ಚುನಾವಣಾ ಸಮಿತಿ ಅಧಿಕಾರಿಯಾದ ಡಾ.ಹನುಮಂತಪ್ಪ, ಮತ್ತು ಜಿ.ಪಂ ಅಧಿಕಾರಿ ಚಂದ್ರಶೇಖರ ಗುಡಿ, ತಾ.ಪಂ ಇ.ಓ ಜಾನಕಿರಾಮ್, ಮತ್ತಿತರ ಕಾಲೇಜಿನ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಎಲ್ಲಾಸ್ಪರ್ಧೆಗಳನ್ನು  ಸ್ವವಿವರವಾಗಿ ವಿದ್ಯಾರ್ಥಿಗಳಿಗಾಗಿ ತಿಳಿಸಿಕೊಟ್ಟರು. 

ನಂತರ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಮತದಾನ ಜಾಗೃತಿ ಕಾರ್ಯಗಾರವನ್ನು ಆಯೋಜಿಸಿದ್ದು ಈ ಎಲ್ಲಾ ಸ್ಪರ್ಧೆಗಳಲ್ಲಿ   ವಿಜೇತರಾದ ವಿದ್ಯಾಥರ್ಿಗಳಿಗೆ ಮಹಾನಗರ ಪಾಲಿಕೆಯ ಕಮಿಷ್ನರ್ ತುಷಾರಮಣಿ ಅವರುವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಕುಮಾರಸ್ವಾಮಿ, ಉಪನ್ಯಾಸಕರಾದ ಪ್ರಬಂಜನ್, ಕೆ.ಸಿದ್ದಲಿಂಗಪ್ಪ, ಪಂಪಾನಾಯಕ್, ಸಂಚಾಲಕರಾದ ಬಸವರಾಜ ಡಿ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಈ ಕಾರ್ಯಕ್ರಮವನ್ನು ರೂಪಿಸಿತ್ತು. 

ಸುದ್ದಿ ಓದಿ