ಬಳ್ಳಾರಿ: ಉತ್ಸಾಹದಿಂದ ಮತ ಚಲಾಯಿಸಿ; ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ: ಉತ್ಸಾಹದಿಂದ ಮತ ಚಲಾಯಿಸಿ; ಪ್ರಜಾಪ್ರಭುತ್ವ ಗಟ್ಟಿಗೊಳಿಸಿ: ಡಿಸಿ ರಾಮ್ ಪ್ರಸಾತ್

ಲೋಕದರ್ಶನ ವರದಿ

ಬಳ್ಳಾರಿ 16: ಮುಕ್ತ, ನಿರ್ಭಿತಿಯಿಂದ  ಮತದಾನ ಚಲಾಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅನೇಕ ಕ್ರಮಗಳನ್ನು ಕೈಗೊಂಡಿದ್ದು ಏ.23ರಂದು ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು. ನಗರದ ಸರ್ಕಾರಿ  ಐ.ಟಿ.ಐ ಕಾಲೇಜು ಆವರಣದಿಂದ ಮಂಗಳವಾರ ಏರ್ಪಡಿಸಿದ್ದ ಬೃಹತ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. 

ಪ್ರಜಾಪ್ರಭುತ್ವದ ಹಬ್ಬ ಈ ಮತದಾನ ಪ್ರಕ್ರಿಯೆ ಏ.23ರಂದು ಸರ್ವರೂ ಉತ್ಸಾಹದಿಂದ ಬಂದು ಮತದಾನ ಮಾಡಬೇಕು. ಸರಕಾರಿ ನೌಕರರು ಸಹ ಮತದಾನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.  ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ-ವಿಜಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ ಪೋಟೊ ಮತ್ತು ವಿಡಿಯೋ ಕ್ಲಿಕ್ ಮಾಡಿ ಆ್ಯಪ್ ಪ್ ಮೂಲಕ ದೂರು ನೀಡಬಹುದು ಎಂದು ವಿವರಿಸಿದರು 

ಇದೇ ಸಂದರ್ಭದಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿಸಿದಂತೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋದಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ, ಚುನಾವಣಾ ಆಯೋಗದ ರಾಯಭಾರಿ, ಹಿರಿಯ ರಂಗಕಲಾವಿದೆ ಸುಭದ್ರಮ್ಮ ಮನ್ಸೂರ್, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ  ವಿಜಯಕುಮಾರ್, ಡಿಎಚ್ಒ ಡಾ.ಶಿವರಾಜ ಹೆಡೆ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಹಾಗೂ ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸರಕಾರಿ ನೌಕರರು ಪಾಲ್ಗೊಂಡಿದ್ದರು. ಸರಕಾರಿ ಐಟಿಐ ಕಾಲೇಜಿನಿಂದ ಆರಂಭವಾದ ಜಾಥಾವು ಕೌಲ್ಬಜಾರ್ ಪೊಲೀಸ್ ಠಾಣೆ ಮಾರ್ಗವಾಗಿ ರೇಡಿಯೋಪಾರ್ಕ , ಗಡಂಗ ಸ್ಟ್ರೀಟ್ ಪ್ರದೇಶಗಳ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಹಾಗೂ ಅಲ್ಲಿಂದ ಸರಕಾರಿ ಐಟಿಐ ಕಾಲೇಜಿನವರೆಗೆ ಸಂಚರಿಸಿತು. ಬಳ್ಳಾರಿ ಪೂರ್ವ ವಲಯ/ಪಶ್ಚಿಮ ವಲಯದ ವ್ಯಾಪ್ತಿಯ ಸರಕಾರಿ ಶಾಲಾ ಕಾಲೇಜುಗಳ ಉಪನ್ಯಾಸಕರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸರಕಾರಿ ನೌಕರರು ಇದ್ದರು.   ಮತದಾನ ಮಹತ್ವ ಸಾರುವ ಗೀತೆಗಳ ವಾಹನದೊಂದಿಗೆ ನಾಮಫಲಕ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿದರು.  ಇದೇ ಸಂದರ್ಭದಲ್ಲಿ ಇವಿಎಂ-ವಿವಿಪ್ಯಾಟ್ನ ಪ್ರಾತ್ಯೆಕ್ಷಿಕೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು 

ಸುದ್ದಿ ಓದಿ