ಬಳ್ಳಾರಿ: ತಿಪ್ಪೆಗುಂಡಿಯಾದ ಬಸ್ ನಿಲ್ದಾಣ
ಲೋಕದರ್ಶನ ವರದಿ
ಸಿರುಗುಪ್ಪ, ಬಳ್ಳಾರಿ 21: ತಾಲ್ಲೂಕಿನ ಕುಡುದರಹಾಳ್ ಗ್ರಾಮದ ಬಸ್ ನಿಲ್ದಾಣದ ಕಟ್ಟಡ ಮೇಲ್ಚಾವಣಿ ಕುಸಿದು ಸುಮಾರು 5 ವರ್ಷಗಳು ಕಳೆದರೂ ಬಸ್ ನಿಲ್ದಾಣದ ಹೀಗೆ ಇದೆ. ಪ್ರಯಾಣಿಕರು ಸುಡುವ ಬಿಸಿಲಿನಲ್ಲಿ ರಸ್ತೆ ಬದಿ ಬಸ್ ಕಾಯಬೇಕಾಗಿದೆ. ಬಂಡಿ ಮತ್ತು ಅಂಗಡಿ ವ್ಯಾಪಾರಿಗಳು ತ್ಯಾಜ್ಯ ಸುರಿಯುತ್ತಿದ್ದಾರೆ. ಬಸ್ ನಿಲ್ದಾಣ ತಿಪ್ಪೆಗುಂಡಿ ರೀತಿಯಲ್ಲಿ ಮಾರ್ಪಾಡಾಗಿದೆ
ಪ್ರಸ್ತುತ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿದ್ದು, ಹಂದಿಗಳು ನಾಯಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಬಸ್ ಹತ್ತಲು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತಾಗ ಕೆಲವೊಂದು ಸಲ ಅಪಘಾತ ಆಗಿದ್ದು ಉಂಟು. ಮಹಿಳೆಯರು ವೃದ್ಧರು ಅಂಗವಿಕಲರ ಗೋಳು ಕೇಳದವರಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಮತ್ತು ಗ್ರಾಮ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ ಎಂದು ಗ್ರಾಮದ ಮುಖಂಡರು ಸ್ಥಳೀಯರು ಹೇಳಿದರು. ಸಂಬಂಧಿಸಿದ ಅಧಿಕಾರಿಗಳು ಹೊಸ ಬಸ್ ನಿಲ್ದಾಣ ನಿಮರ್ಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.