ಬಳ್ಳಾರಿ: ಶಾಂತಿಯುತ ಚುನಾವಣೆ: ಕಾಂಚಾಣ ಕುಣಿತಕ್ಕೆ ಹಾಕಿ ಲಗಾಮು

ಬಳ್ಳಾರಿ: ಶಾಂತಿಯುತ ಚುನಾವಣೆ: ಕಾಂಚಾಣ ಕುಣಿತಕ್ಕೆ ಹಾಕಿ ಲಗಾಮು

ಬಳ್ಳಾರಿ 05: ಬಳ್ಳಾರಿ ಲೋಕಸಭಾ ಚುನಾವಣಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಮುಕ್ತ, ಪಾರದರ್ಶಕ ಹಾಗೂ ಅತ್ಯಂತ ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಆಗಮಿಸಿದ ಸಾಮಾನ್ಯ ವೀಕ್ಷಕರಾದ ಶಿಯೋ ಶೇಖರ್ ಶುಕ್ಲಾ, ಅಶುತೋಷ ಅವಸ್ತಿ ಹಾಗೂ ಪೊಲೀಸ್ ವೀಕ್ಷಕರಾದ ಎಸ್.ಎಂ.ನರ್ವನೆ ಹೇಳಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಅವರು ಅಗತ್ಯ ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.

     ಚುನಾವಣೆಗೆ ನಿಯೋಜಿತರಾದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು.ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದಿರಿ ಎಂದು ಅವರು ಹೇಳಿದರು.

     ಈ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಕಾಂಚಾಣ ಕುಣಿತ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು. ಪಕ್ಕದ ಆಂಧ್ರಪ್ರದೇಶದಿಂದ ಅಕ್ರಮ ಮದ್ಯ ಮತ್ತು ಹಣ ಹರಿದು ಬರುವ ಸಾಧ್ಯತೆ ಇದ್ದು ವಿಶೇಷ ನೀಗಾವಹಿಸಿ ಮತ್ತು ಕೋಮುಗಲಭೆ ಆದ ಕಡೆ ವಿಶೇಷ ಒತ್ತು ಕೊಡಿ ಎಂದು ಅವರು ಸೂಚಿಸಿದರು.

     ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಅವರು ಕಾಂಚಾಣದ ಸದ್ದು ಈ ಚುನಾವಣೆಯಲ್ಲಿ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವೀಚಕ್ಷಣಾ ದಳ ಸೇರಿದಂತೆ ವಿವಿಧ ತಂಡಗಳನ್ನು ನೇಮಿಸಿ ಅಗತ್ಯ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಜಿಲ್ಲೆಯು 6 ಕನರ್ಾಟಕದ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಎರಡು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಅಂತರಾಜ್ಯ 11 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ ಆಂಧ್ರಪ್ರದೇಶದಿಂದ ಅಕ್ರಮ ಮದ್ಯ ಹಾಗೂ ಹಣ ಹರಿದುಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು.

     ಕೋಮುಗಲಭೆಯಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಪ್ಯಾರಾ ಮಿಲ್ಟ್ರೀ ಪಡೆ ನಿಯೋಜನೆ ಮಾಡಲಾಗಿದೆ. ಶಾಂತಿ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, 2018ರ ಚುನಾವಣೆ ಸಂದರ್ಭದಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನವಾಗಿದೆಯೋ ಅಂತ ಪ್ರದೇಶಗಳನ್ನು ಗುರುತಿಸಿ ಅಂತಲ್ಲಿ ಹೆಚ್ಚೆಚ್ಚು ಸ್ವೀಪ್ ಚಟುವಟಿಕೆಗಳನ್ನು ಈ ಬಾರಿ ನಡೆಸಲಾಗಿದೆ ಎಂದರು.

ಮತಯಂತ್ರಗಳು ಸಮರ್ಪಕ ಸಂಗ್ರಹ: 

ಕ್ಷೇತ್ರದ ಚುನಾವಣೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಅಂದರೇ ಶೇ.120ರಷ್ಟು ಮತಯಂತ್ರಗಳನ್ನು ಸಂಗ್ರಹಿಸಿಡಲಾಗಿದೆ.

ವಿವಿಪ್ಯಾಟ್ ಪ್ರಾತ್ಯಕ್ಷಿಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಏರ್ಪಡಿ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ. ಚುನಾವಣಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಹಂತದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಈ ಬಾರಿಯ ಚುನಾವಣಾ ಕಾರ್ಯಕ್ಕೆ  ಶೇ.15ರಷ್ಟು ಜನರು ಮೀಸಲು ಸೇರಿದಂತೆ ಒಟ್ಟು 11077 ಜನರು ನಿಯೋಜಿಸಲಾಗುತ್ತಿದೆ ಎಂದರು.

ಮೈಕ್ರೋ ಅಬ್ಸವಸರ್್ಗಳು ಅಗತ್ಯತೆ ನಮಗೆ 430 ಇದ್ದು,ನಮ್ಮಲ್ಲಿ 670 ಜನರಿದ್ದಾರೆ ಎಂದರು.

ಈ ಕ್ಷೇತ್ರದಲ್ಲಿ 3 ವಿಧಾನಸಭಾ ಕ್ಷೇತ್ರಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾಗಿದ್ದು, ಆ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅಸ್ಪದ ಕೊಡದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

541 ಕ್ರಿಟಿಕಲ್ ಪೊಲೀಂಗ್ ಸ್ಟೇಶನ್ಗಳು ಕ್ಷೇತ್ರದಲ್ಲಿವೆ ಎಂದರು.

ಆರ್ವೈಎಂಇಸಿ ಕಾಲೇಜಿನಲ್ಲಿ ಮತಎಣಿಕೆ: 

ಜಿಲ್ಲಾಕೇಂದ್ರದಲ್ಲಿರುವ ಆರ್ವೈಎಂಇಸಿ ಕಾಲೇಜಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಅಲ್ಲಿಯೇ ಮಾಡಲಾಗುತ್ತಿದ್ದು, ಮತ ಏಣಿಕೆಗೆ ಸಂಬಂಧಿಸಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಏ.8ರಿಂದ ಆರಂಭವಾಗಿ ಏ.20ರೊಳಗೆ ಮುಗಿಯಲಿದೆ ಎಂದು ಜಿಲ್ಲಾಚುನಾವಣಾಧಿಕಾರಿಗಳು ಹೇಳಿದರು.

     ಮತದಾನದ ದಿನ ಮಾನಿಟರ್ ಮಾಡುವ ನಿಟ್ಟಿನಲ್ಲಿ ಎಸ್ಎಂಸ್, ವೆಬ್ ಬೇಸಡ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

     ಈ ಸಂದರ್ಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಪ್ರೋಬೆಷನರಿ ಐಎಎಸ್ ಅಧಿಕಾರಿ ನಂದಿನಿ ಸೇರಿದಂತೆ ವಿವಿಧ ಕೋಶಗಳ ನೋಡಲ್ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.


ಸುದ್ದಿ ಓದಿ