ಬಳ್ಳಾರಿ: ವಿವೇಕ ತೋರಣದಿಂದ ಶ್ರೀರಾಮ ಆದರ್ಶ ಕಾರ್ಯಕ್ರಮಗಳು

ಬಳ್ಳಾರಿ: ವಿವೇಕ ತೋರಣದಿಂದ ಶ್ರೀರಾಮ ಆದರ್ಶ ಕಾರ್ಯಕ್ರಮಗಳು

ಬಳ್ಳಾರಿ 04: ನಗರದ ಸಾಂಸ್ಕೃತಿಕ ಸಮುಚ್ಚಯ ಬಯಲು ರಂಗಮಂದಿರದಲ್ಲಿ ವಿವೇಕ ತೋರಣದಿಂದ ಏ.06ರಿಂದ 13ರವರೆಗೆ ಸಂಗೀತ, ನೃತ್ಯ, ಭಜನೆ, ಕೀರ್ಥನೆ, ತೊಗಲುಗೊಂಬೆ ಆಟ, ಉಪನ್ಯಾಷ, ಇನ್ನೂ ಮೊದಲಾದವುಗಳಿಂದ ಕೂಡಿದ ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 

ಈ ಕುರಿತು ರಾಮೋತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಜೆ.ಗುಪ್ತಾ ಸಂಚಾಲಕ ಕೆ.ಎಸ್.ಹರಿಕುಮಾರ್, ಸಂಯೋಜಕ ಪ್ರಭುದೇವ್ ಕಪಗಲ್ಲು ಅವರು ಗುರುವಾರ ಸುದ್ದಿಗೋಷ್ಟಿ ನಡೆಸಿ ಉತ್ಸವಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರದ ಆಧ್ಯಾತ್ಮಿಕ ವೈಚಾರಿಕ ಸಂಸ್ಥೆಯಾದ 'ವಿವೇಕತೋರಣ' ಕಳೆದ ಹಲವು ವರ್ಷಗಳಿಂದ ಪ್ರತಿ ಯುಗಾದಿಯಿಂದ ನವಮಿಯವರೆಗೆ 'ಬಳ್ಳಾರಿ ರಾಮೋತ್ಸವ' ಅಂಗವಾಗಿ ಸಂಗೀತ, ನೃತ್ಯ, ಕೀರ್ತನೆ, ಭಜನೆ, ಗೊಂಬೆಯಾಟ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದ್ದು ನಗರದ ಸತ್ಯನಾರಾಯಣಪೇಟೆಯ ಒಂದನೇ ಅಡ್ಡ ರಸ್ತೆಯಲ್ಲಿರುವ ರಾಘವೇಂದ್ರಸ್ವಾಮಿ ಮಠದ ಎದುರುಗಿನ ಸಾಂಸ್ಕೃತಿಕ ಸಮುಚ್ಛಯದ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಎಂದರು. 

ಏಪ್ರಿಲ್ 6, ಶನಿವಾರ ಯುಗಾದಿ, ಹೊಸ ವರ್ಷದ ಪ್ರಥಮ ದಿನ 'ವಿಕಾರಿ ನಾಮ ಸಂವತ್ಸರದ ನೂತನ ಪಂಚಾಂಗ ಶ್ರವಣ' ನಗರದ ವಿದ್ವಾಂಸರು, ಘನಪಾಠಿಗಳಾದ ಶ್ರೀ ಗೋವಿಂದಭಟ್ಟರಿಂದ ಆರಂಭಗೊಳ್ಳುವ ರಾಮೋತ್ಸವದ ಮೊದಲದಿನ ನಗರದ ಯುವ ಗಾಯಕಿ ಕು.ಅನುಕೃಪಾ ಅವರ ಸಂಗೀತ ಹಾಗೂ ಯುವ ನೃತ್ಯ ಕಲಾವಿದೆ ಕು.ದೀಕ್ಷಾ ಅವರ ನೃತ್ಯದಿಂದ 'ಗೀತ ನೃತ್ಯೋತ್ಸವ' ನೆರವೇರಲಿದೆ ಎಂದರು. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ಇವರಿಂದ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು 'ಶ್ರೀರಾಮನ ಆದರ್ಶಗಳು' ಕುರಿತ ಏಪ್ರಿಲ್-8, ಸೋಮವಾರ ಹಾಗೂ ಏಪ್ರಿಲ್-9ರ ಉದ್ಭೋಧಕ ಉಪನ್ಯಾಸ ನೀಡಲಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ವೀರೇಶಾನಂದರು ಪುರುಷೋತ್ತಮಾನಂದ ಪ್ರೇರಣೆಯಿಂದ ಸ್ವಾಮೀಜಿಯಾಗಿ ದೇಶ ವಿದೇಶಗಳಲ್ಲಿ ವಿಶೇಷ ಉಪನ್ಯಾಸಗಳಿಂದ ಮತ್ತು ವಿದ್ಯಾರ್ಥಿ  ದೇವೋಭವ, ದೀನ ದಲಿತ ದೇವೋಭವ, ಆಚಾರ್ಯ ದೇವೋಭವದಂತಹ ಕಾರ್ಯಕ್ರಮಗಳಿಂದ ವಿಶಿಷ್ಟ ಸ್ವಾಮೀಜಿಯಾಗಿ ಖ್ಯಾತರಾಗಿದ್ದಾರೆ. ವ್ಯಾಟಿಕನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ವಿಲಿಯಮ್ಸ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ಅವರ ನಿವಾಸದಲ್ಲಿ 'ವೇದ ಘೋಷ' ನಡೆಸಿದ ಪ್ರಥಮರು, ಇಟಲಿ, ರೋಮ್, ಅಮೇರಿಕ, ಲಂಡನ್, ಫ್ರಾನ್ಸ್ಗಳಲ್ಲಿ ಅಂತರರಾಷ್ಟ್ರೀಯ ನಾಯಕತ್ವ ಶಿಬಿರ, ವಿಶೇಷ ಸತ್ಸಂಗ, ಲಲಿತಾಮಾತೆಯ ವಿಗ್ರಹ ಪ್ರತಿಷ್ಠಾಪನೆ, ಕನರ್ಾಟಕದ 70 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಶೇಷ ಪ್ರವಚನ, 10 ಲಕ್ಷಕ್ಕೂ ಅಧಿಕ ವಿದ್ಯಾಥರ್ಿಗಳಿಗೆ ಉಪನ್ಯಾಸ, 16 ಲಕ್ಷ ವಿದ್ಯಾಥರ್ಿಗಳು ಸ್ಪಧರ್ಾತ್ಮಕ ಪರೀಕ್ಷೆ ತರಬೇತಿ, 2 ಲಕ್ಷಕ್ಕೂ ಅಧಿಕ ಉಪನ್ಯಾಸಕರೊಂದಿಗೆ ಸಂವಾದ ಕೊಳಗೇರಿಗಳಲ್ಲಿ ವಾಸಿಸುವ, ಭೀಕ್ಷೆ ಬೇಡುವ ಅಶಕ್ತಮಾತೆಯರನ್ನು ಆಶ್ರಮದಲ್ಲಿ 'ಜೀವಂತ ದುಗರ್ಾಮಾತೆ' ಎಂದು ಅನ್ನ, ವಸ್ತ್ರ, ನೆರವು ನೀಡಿ ಪೂಜಿಸಿದವರು ಸ್ವಾಮೀಜಿ ಉತ್ತಮ ಲೇಖಕರೂ ಆಗಿರುವ ಸ್ವಾಮೀಜಿಯವರ ವಿಚಾರಧಾರೆಗಳನ್ನು ನಾಡಿನ ಹಲವಾರು ಪತ್ರಿಕೆಗಳು ಪ್ರಕಟಿಸುತ್ತಿವೆ. ಇವರೇ ಬರೆದ 'ಸ್ವಾಮಿ ವಿವೇಕಾನಂದ ಮತ್ತು ಮಾನವ ಅಭ್ಯುದಯ' ಕೃತಿ ಬಿಡುಗಡೆ ಆಗಿದೆ. ಇವರೇ ಹಾಡಿರುವ 'ಭಗವಾತ್ಪದರ ಭಕ್ತಿ ಸುಧೆ' ಧ್ವನಿಸುರುಳಿ ಹೊರಬಂದಿದೆ. 'ತುಮಕೂರು ವಿಶ್ವ ವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ' ಇವರು ಏಪ್ರಿಲ್-8, ಸೋಮವಾರ ಮತ್ತು ಏಪ್ರಿಲ್-9, ಮಂಗಳವಾರ 'ಬಳ್ಳಾರಿ ರಾಮೋತ್ಸವ'ದಲ್ಲಿ ಶ್ರೀರಾಮನ ಆದರ್ಶಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಾಗೂ ಏಪ್ರಿಲ್-7ರಂದು ಮೈಸೂರಿನ ಪ್ರಾಧ್ಯಾಪಕ ಡಾ. ಬಿ.ವಿ.ವಸಂತಕುಮಾರ ಹಾಗೂ ಏಪ್ರಿಲ್-13ರಂದು ಹುಬ್ಬಳ್ಳಿಯ ಪ್ರಜ್ಞಾ ಪ್ರವಾಹದ ಸಂಯೋಜಕ ಶ್ರೀ ರಘುನಂದನ ಶ್ರೀರಾಮ ನುಡಿನಮನ ಆಶಯ ಭಾಷಣ ಮಾಡಲಿದ್ದಾರೆ. 

ನಗರದ ಖ್ಯಾತ ವೈದ್ಯ ಡಾ.ಬಿ.ಕೆ. ಶ್ರೀನಿವಾಸ ಮೂರ್ತಿ , ಲೆಕ್ಕಪರಿಶೋಧಕ ಜಯಪ್ರಕಾಶ ಗುಪ್ತಾ, ರಾಮದೂತ ಕಂಪ್ಯೂಟರ್ಸ್ನ ಕೆ.ಎಸ್.ಬಾಬು, ಪ್ರಾಂಶುಪಾಲ ಕೆ.ಹೆಚ್.ಹರಿಕುಮಾರ, ಡಾ.ಹರೀಶರಾವ್, ಸೇರಿದಂತೆ ನಗರದ ಗಣ್ಯ ನಾಗರಿಕರ ರಾಮೋತ್ಸವ ಸಮಿತಿ 'ಬಳ್ಳಾರಿ ರಾಮೋತ್ಸವ' ನಡೆಸಲು ಸಿದ್ಧತೆ ನಡೆಸಿದೆ. ಏಪ್ರಿಲ್ 6ರಿಂದ 13ರವರೆಗೆ 8 ದಿನಗಳ ಕಾಲ ಪ್ರತಿದಿನ ಸಂಜೆ 5.45 ರಿಂದ 8.30ರವರೆಗೆ ನಗರದ ಸಾಂಸ್ಕೃತಿಕ ಸಮುಚ್ಛಯ ಬಯಲು ರಂಗಮಂದಿರ, ಶ್ರೀರಾಘವೇಂದ್ರ ಸ್ವಾಮಿ ಮಠದ ಎದುರು, 1ನೇ ಕ್ರಾಸ್ ಸತ್ಯನಾರಾಯಣಪೇಟೆಯಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಾಮ ಸಂಕೀರ್ತನೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಕೋರಿದರು 

ಸುದ್ದಿ ಓದಿ