ಬಳ್ಳಾರಿ: ಸಮಾಜವಾದಿ ಫಾರ್ವಡ್ಬ್ಲಾಕ್ ಸ್ಪರ್ಧೆ

ಬಳ್ಳಾರಿ: ಸಮಾಜವಾದಿ ಫಾರ್ವಡ್ಬ್ಲಾಕ್ ಸ್ಪರ್ಧೆ

ಲೋಕದರ್ಶನ ವರದಿ

ಬಳ್ಳಾರಿ 18: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಸಮಾಜವಾದಿ ಫಾರ್ವಡ್ಬ್ಲಾಕ್ ಪಕ್ಷ ತನ್ನ ಯುವಭ್ಯಾರ್ಥರಗಳನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ|| ಸಲೀಂಖಾನ್ ವಲಿಬಾಷಾ ತಿಳಿಸಿದರು. ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿನ ನಡೆಸಿ ಮಾತನಾಡಿ ದೇಶದ ಸ್ವತಂತ್ರಹೋರಾಟದ ನಾಯಕ ಸುಬಾಸ್ಚಂದ್ರಬೋಸ್ ಅವರ ಆಶಯದೊಂದಿಗೆ ದೇಶದ 18 ರಾಜ್ಯಗಳಲ್ಲಿ ಪಕ್ಷ ಸಂಘಟನೆಗೊಂಡಿದೆ. ಈ ದೇಶವನ್ನು ಈವರೆಗೆ ಆಳಿದ ಕಾಂಗ್ರೆಸ್ ಪಕ್ಷದ ಸರ್ವಧಿಕಾರದಿಂದಾಗಿ ದೇಶದಲ್ಲಿ ಅನೇಕ ಪಕ್ಷಗಳು ಹುಟ್ಟಿಕೊಳ್ಳಲು ಕಾರಣವಾಗಿವೆ. ಈಗ ದೇಶವನ್ನು ಆಳುತ್ತಿರುವ ಬಿಜೆಪಿಯು ಜನಸಾಮಾನ್ಯರ ಯುವ ಜನರ ಆಶಯಗಳಿಗೆ ಸ್ಪಂಧಿಸಿಲ್ಲ. ಅದಕ್ಕಾಗಿ ಜನತೆ ಹೊಸ ಪಕ್ಷದತ್ತ ಮುಖಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಜನರ ಸಮಸ್ಯಗಳಿಗೆ ಸ್ಪಂದಿಸುವ ಬರವಷೆಯಿಂದ ಚುನಾವಣೆಯ ಕಣಕ್ಕಿಳಿಯುತ್ತಿದ್ದೇವೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೆ.ವಿ.ವೆಂಕಟೇಶ್ ಮಾತನಾಡಿ ನಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು  ಯುವಕರಿಗೆ ಆಧ್ಯತೆ ನೀಡುತ್ತೇವೆ. ಈ ಹಿಂದೆ ಬೇರೆ ಪಕ್ಷದಲ್ಲಿ ಇದ್ದವರಿಗೆ ಇಲ್ಲಿ ಸ್ಥಾನವಿಲ್ಲ. ಹೊಸ ಮುಖಗಳ ಹುಡುಕಾಟ ನಡೆಸಿದ್ದೇವೆ. ಅವರಲ್ಲಿ ಸಮಾಜದ ಸೇವೆಯ ಮನೋಭಾವ ಹೊಂದಿರುವವರು ಆಗಬೇಕು. ಅಂತವರಿಗೆ ನಾವು ಚುನಾವಣೆಯಲ್ಲಿಸ್ಪರ್ದಿಸಲು  ನಮ್ಮ ಪಕ್ಷ ಅವಕಾಶ ನೀಡುತ್ತದೆ ಎಂದರು. ಈ ಸುದ್ದಿಗೋಷ್ಟಿಯಲ್ಲಿ ನಗರ ಅಧ್ಯಕ್ಷ ಹೆಚ್.ಹನುಮಂತಪ್ಪ, ನೂರಮಹಮ್ಮದ್, ಸೇರಿದಂತೆ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು. 

 

ಸುದ್ದಿ ಓದಿ