ಬಳ್ಳಾರಿ: ಆರ್.ವೈ.ಎಂ.ಇ.ಸಿ ಕಾಲೇಜಿಗೆ ಸಮಾಜಮುಖಿ ಕಾರ್ಯದ ಪ್ರಶಸ್ತಿ
ಬಳ್ಳಾರಿ 04: ಬಳ್ಳಾರಿಯ ಆರ್,ವೈ,ಎಂ,ಇ,ಸಿ ತಾಂತ್ರಿಕ ಮಹಾವಿದ್ಯಾಲಯದ "ಲೀಡ್ನ ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಬಳ್ಳಾರಿಯ ನಗರದಾಂದ್ಯಂತ ಸ್ವಚ್ಚ ಭಾರತ ಅಭಿಯಾನ, ಪೃಥ್ವಿಯೋಗ, ಮಹಿಳಾ ಸಬಲೀಕರಣ, ಬಳ್ಳಾರಿ ಪೋಲೀಸ್ ಆಪ್ಗಳ ಬಗ್ಗೆ ಜಾಗೃತಿ, ಅನಾಥ ಮಕ್ಕಳಿಗಾಗಿ ದವಸ ಧಾನ್ಯ ಶೇಖರಣೆ, ಕೊಡಹಿನ ನೆರೆ ಸಂತ್ರಸ್ಥರುಗಳಿಗೆ ನೆರವು, ಪರಿಸರದ ರಕ್ಷಣೆ, ಮತದಾನದ ಬಗ್ಗೆ ಜಾಗೃತಿ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಸಾಕಷ್ಟು ಅನಾಥರ, ಬಡವರ ಪಾಲಿಗೆ ನೆರವಾಗುವ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದು, ಹುಬ್ಬಳ್ಳಿಯಲ್ಲಿ ನಡೆದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಲೀಡ್ನವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ನ ವತಿಯಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಲೀಡ್ ಸಮಾರೋಪ ಸಮಾರಂಭದಲ್ಲಿ ಉತ್ತಮ ಸಮಾಜಮುಖಿ ಕೆಲಸ ನಿರ್ವಹಣೆಯ ಪ್ರಶಸ್ತಿಯನ್ನು ನಗರದ ಪ್ರತಿಷ್ಠಿತ ರಾವ್ ಬಹಾದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಲಭಿಸಿದೆ.
ಈ ವಿಷಯದ ಬಗ್ಗೆ ಪ್ರತಿಕ್ರಯಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್.ಬಸವರಾಜ್,ವಿದ್ಯಾರ್ಥಿಗಳು ಕೇವಲ ಓದಿಗಷ್ಟೇ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಜೀವನ ಪರಿಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಲೀಡ್ನ ವಿದ್ಯಾಥರ್ಿಗಳ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಪ್ಪಗಲ್ ವೀರೇಶ್, ಉಪಪ್ರಾಶುಪಾಲ ಡಾ.ಟಿ.ಹನುಮಂತರೆಡ್ಡಿ, ಡಾ.ಸವಿತಾ ನೊನಾಳಿ, ಲೀಡ್ನ ಮುಖ್ಯಸ್ಥ ಜಗದೀಶ.ಜಿ.ಎಂ, ಪ್ರಾಧ್ಯಾಪಕ ಡಾ.ಗಿರೀಶ, ಡಾ.ವೀರಗಂಗಾಧರ ಸ್ವಾಮಿ, ಡಾ.ಶ್ರೀಪತಿ, ವಿದ್ಯಾಥರ್ಿಗಳಾದ, ಮಹಾಂತೇಶ, ರಶ್ಮಿ, ರಜನಿ, ಸಂಜಯ, ಸುಶ್ಮಾ, ಏಕನಾಥ, ತ್ರಿವೇಣಿ, ಸೋಮಶೇಖರ ಇತರರು ಹಾಜರಿದ್ದರು.