ಬಳ್ಳಾರಿ: ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಸ್ಪರ್ಧೆಗಳು ವಿಎಸ್ಕೆ ವಿವಿ ವಿದ್ಯಾರ್ಥಿಗಳಿಂದ ಸಾಧನೆ

ಬಳ್ಳಾರಿ: ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಸ್ಪರ್ಧೆಗಳು ವಿಎಸ್ಕೆ ವಿವಿ ವಿದ್ಯಾರ್ಥಿಗಳಿಂದ  ಸಾಧನೆ

ಲೋಕದರ್ಶನ ವರದಿ

ಬಳ್ಳಾರಿ 26: ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಅಮೃತಸರದ ಗುರುನಾನಕ ದೇವ್ ವಿಶ್ವವಿದ್ಯಾಲಯವು ನಡೆಸಿದ ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಸ್ಪರ್ಧಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು  6 ಬೆಳ್ಳಿ ಮತ್ತು 12 ಕಂಚು ಪದಕಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆಂದು ವಿ.ವಿ ಕುಲಪತಿ ಎಂ.ಎಸ್.ಸುಬಾಸ್ ಅವರು ಮಂಗಳವಾರ ವಿ.ಎಸ್.ಕೆ ವಿ.ವಿಯ ಅಥಿತಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ವಿವರಿಸಿದರು. ವಿ.ವಿಯಿಂದ ಹಲವು ಕ್ರೀಡೆಯಲ್ಲಿ ವಿದ್ಯಾರ್ಥಿಗಳು  ಬಾಗವಹಿಸುತ್ತಿದ್ದರೂ ಯಾವುದೇ ಪದಕಗಳನ್ನು ಇಲ್ಲಿಯವರೆಗೆ ಪಡೆದಿಲ್ಲ. ಆದರೆ ಈ ಬಾರಿ ನಡೆದ ರಾಷ್ಟ್ರಮಟ್ಟದಲ್ಲಿ ಒಟ್ಟು 18 ಪದಕಗಳನ್ನು ಗಳಿಸಿರುವುದು ನಮ್ಮ ವಿಶ್ವವಿದ್ಯಾಲಯಕ್ಕೆ ಒಂದು ಹೆಮ್ಮೆಯ ಸಂಘತಿಯಾಗಿದೆ ಎಂದರು. 

ಈ ಸ್ಪಧರ್ೆಯಲ್ಲಿ ಭಾಗವಹಿಸಿ ಗೆಲವು ಸಾಧಿಸಿದ ವಿದ್ಯಾಥರ್ಿಗಳಿಗೆ ಶುಲ್ಕ ರಹಿತ ಉನ್ನತ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದ ಅವರು. ಈ ಸ್ಪಧರ್ೆಯಲ್ಲಿ ಕೊಪ್ಪಳ ಪ್ರಥಮ ದಜರ್ೆ ಕಾಲೇಜಿನ ಇಬ್ಬರು ವಿದ್ಯಾಥರ್ಿನೀಯರು, ಗಂಗಾವತಿ ಕಾಲೇಜಿನ ನಾಲ್ಕೂ ಜನ ವಿದ್ಯಾರ್ಥಿಗಳು  ಹಾಗೂ ಹೊಸಪೇಟೆ ಕಾಲೇಜಿನ ಐದು ಜನ ವಿದ್ಯಾಥರ್ಿಗಳು ಭಾಗವಹಿಸಿ ಗೆಲವು ಸಾಧಿಸಿದ್ದಾರೆ ಎಂದು ತಿಳಿಸಿದರು. 

ಆಕಾಶ ದೊಡ್ಡವಾಡ ತುಂಗಲ್ಸ್ಪರ್ಧೆಯಲ್ಲಿ  ಒಂದು ಕಂಚಿನ ಪದಕ, ರೇಗು ಸ್ಪರ್ಧಿಗಳು  ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ಮನೋಜಕುಮಾರ ಒಂದು ಕಂಚು ಮತ್ತು ಬೆಳ್ಳಿ ಪದಕ, ವಿಜಯಕುಮಾರ ಕಂಚು ಮತ್ತು ಬೆಳ್ಳಿ ಪದಕ, ಹಾಗೂ ಪ್ರತಾಪ್ಸಿಂಹ ಕಂಚು ಪದಕ, ಅಭಿಜಿತ್ ಕಂಚಿನ ಪದಕ, ರುಕ್ಮಿಣಿ ಒಂದು ಕಂಚು ಮತ್ತು ಬೆಳ್ಳಿ ಪದಕ, ಮಂಜುನಾಥ ಬೆಳ್ಳಿಯ ಪದಕ ಪಡೆದು ಕಾಲೇಜಿನಲ್ಲಿ ಇತಿಹಾಸ ಸೃಷ್ಟಿಮಾಡಿದ್ದಾರೆಂದು ತಿಳಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ವಿ.ವಿಯ ವ್ಯೆವಸ್ಥಾಪಕ ಹಾಗೂ ಕೊಚ್ನ ಗುರುಬಸವರಾಜ, ಅಬ್ದುಲ್ ರಜಾಕ್, ಕ್ರೀಡಾ ವಿಶೇಷ ಅಧಿಕಾರಿ ಪ್ರೋ.ಎನ್.ಶಾಂತಾ ನಾಯಕ, ಡಾ.ಕವಿತಾ ಸಂಗನಗೌಡ, ಹಾಗೂ ಗೆಲವು ಸಾದಿಸಿ ಬಂದಿದ್ದವಿದ್ಯಾರ್ಥಿಗಳು ಹಾಜರಿದ್ದರು.


ಸುದ್ದಿ ಓದಿ