ಬಳ್ಳಾರಿ: ವಿವಿಧ ವಿಭಾಗಗಳಿಗೆ ಕುಲಪತಿ ರಮೇಶ ಭೇಟಿ

ಬಳ್ಳಾರಿ: ವಿವಿಧ ವಿಭಾಗಗಳಿಗೆ ಕುಲಪತಿ ರಮೇಶ ಭೇಟಿ

ಲೋಕದರ್ಶನ ವರದಿ

ಬಳ್ಳಾರಿ 27: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ.ಸ.ಚಿ.ರಮೇಶ ಅವರು ದಿ 25ರಿಂದ 27ರ ಮಾಚರ್್ 2019ರ ವರೆಗೆ 3 ದಿನಗಳ ಕಾಲ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ವಿಶ್ವವಿದ್ಯಾಲಯದ ಮೂರು ನಿಕಾಯಗಳಾದ ಭಾಷಾ ನಿಕಾಯದ ಕನ್ನಡ ಸಾಹಿತ್ಯ, ಕನ್ನಡ ಭಾಷಾಧ್ಯಯನ, ದ್ರಾವಿಡ ಸಂಸ್ಕೃತಿ ಅಧ್ಯಯನ, ಭಾಷಾಂತರ ಅಧ್ಯಯನ, ಹಸ್ತಪ್ರತಿಶಾಸ್ತ್ರ, ಮಹಿಳಾ ಅಧ್ಯಯನ ವಿಭಾಗ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಚರಿತ್ರೆ ವಿಭಾಗ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಶಾಸನಶಾಸ್ತ್ರ, ಜಾನಪದ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಬುಡಕಟ್ಟು ಅಧ್ಯಯನ, ಮಾನವಶಾಸ್ತ್ರ ವಿಭಾಗಗಳು ಮತ್ತು ಲಲಿತಕಲೆಗಳ ನಿಕಾಯದ ಸಂಗೀತ ಮತ್ತು ನೃತ್ಯ ವಿಭಾಗ, ದೃಶ್ಯಕಲಾ ವಿಭಾಗ, ನಾಟಕ ಅಧ್ಯಯನ ವಿಭಾಗಗಳಿಗೆ ಸತತವಾಗಿ 3 ದಿನಗಳಿಂದ ಭೇಟಿ ನೀಡಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಅಧ್ಯಾಪಕರು ಕೈಗೊಂಡ ಅಧ್ಯಯನ ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಪೂರ್ಣಗೊಳಿಸಿದ ಯೋಜನೆಗಳನ್ನು ಕೂಡಲೇ ಪ್ರಸಾರಂಗಕ್ಕೆ ಪ್ರಕಟಣೆಗಾಗಿ ಸಲ್ಲಿಸಲು ನಿದರ್ೇಶನ ನೀಡಿದರು. ಜೊತೆಗೆ 2019-2020ನೆಯ ಶೈಕ್ಷಣಿಕ ಸಾಲಿನಲ್ಲಿ ಅಧ್ಯಾಪಕರು ಕೈಗೊಳ್ಳಲು ಉದ್ದೇಶಿಸಿರುವ ಅಧ್ಯಯನ ಯೋಜನೆಗಳ ವಿಷಯ, ಅವಧಿ, ಖಚರ್ು ವೆಚ್ಚದ ಕುರಿತಂತೆ ಮಾಹಿತಿ ಪಡೆದರು.

ಪ್ರತಿಯೊಂದು ವಿಭಾಗಗಳು 2019-2020ನೆ ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಳ್ಳಬೇಕಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅವಗಾಹಿಸಿದರು. ವಿಭಾಗಗಳ ಅಗತ್ಯಗಳನ್ನು ವಿಚಾರಿಸಿದರು. ಪ್ರತಿಯೊಂದು ವಿಭಾಗಗಳ ಪಿಎಚ್.ಡಿ. ವಿದ್ಯಾಥರ್ಿಗಳೊಂದಿಗೆ ಸಂವಾದಿಸಿ, ಕುಂದುಕೊರತೆಗಳನ್ನು ವಿಚಾರಿಸಿದರು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳು  ಮುನ್ನಡೆಸಲು ಬೇಕಾದ ಕ್ರಮಕೈಗೊಳ್ಳಲು ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಿದರು.

ನುಡಿ ಕಟ್ಟಡದಲ್ಲಿ ನಡೆಯುವ ಎಂ.ಎ.ಪಿಎಚ್.ಡಿ. ತರಗತಿ ಹಾಗೂ ಪತ್ರಿಕೋದ್ಯಮ ಇತರ ತರಗತಿಗಳನ್ನು ವೀಕ್ಷಿಸಿದರು. ಮಾನ್ಯ ಕುಲಪತಿಯವರೊಂದಿಗೆ ನಿಕಾಯಗಳ ಡೀನರಾದ ಡಾ.ಕೆ.ಕೇಶವನ್ ಪ್ರಸಾದ್, ಡಾ.ಎ.ಸುಬ್ಬಣ್ಣ ರೈ, ಡಾ.ಡಿ.ಪಾಂಡುರಂಗಬಾಬು ಹಾಗೂ ಶೈಕ್ಷಣಿಕ ಉಪಕುಲಸಚಿವ ಡಾ.ಎಸ್.ವೈ. ಸೋಮಶೇಖರ ಇದ್ದರು.


ಸುದ್ದಿ ಓದಿ