ಬಳ್ಳಾರಿ: ಗಾಂಧಿಪುರಸ್ಕಾರ ಪಡೆದ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ ಸಮಾರಂಭ

ಬಳ್ಳಾರಿ: ಗಾಂಧಿಪುರಸ್ಕಾರ ಪಡೆದ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ

ಬಳ್ಳಾರಿ 05: ಗಾಂಧಿಪುರಸ್ಕಾರ ಪಡೆದ ಹಿನ್ನಲೆಯಲ್ಲಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶ್ರೀಧರಗಡ್ಡೆಯ ಗೋಡೆ ಕಲ್ಯಾಣಪ್ಪ ಪೊಲೀಸ್ ಗೌಡರ ಗಡಿನಾಡ ಸೇವಾ ಸಂಘ ಹೊಳಲಗುಂದಿ ವತಿಯಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಶರಣಬಸವೇಶ್ವರ ಪುರಾಣ ಮಂಟಪದಲ್ಲಿ ನಡೆಯುತ್ತಿರುವ 24ನೇ ವರ್ಷದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಕನ್ನಡಸೇವಕ ಹಾಗೂ ಸುವರ್ಣ-ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಶ್ರೀಧರಗಡ್ಡೆ ಬಸಪ್ಪ ಅವರು ಪಂಚಾಯಿತಿ ಅಧ್ಯಕ್ಷ-ಸದಸ್ಯರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್, `ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರು ತಮ್ಮ ಬದುಕಿನುದ್ದಕ್ಕೂ ಕನ್ನಡಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಗಡಿನಾಡು ಸೇರಿದಂತೆ ರಾಜ್ಯದ ಅನೇಕ ಕನ್ನಡ ಶಾಲೆಗಳಿಗೆ ಲಕ್ಷಾಂತರ ರೂಗಳ ದೇಣಿಗೆಯನ್ನು ನೀಡುವ ಮೂಲಕ ಕನ್ನಡ ಶಾಲೆಗಳು ಉಳಿಯಬೇಕು ಎಂಬ ಆಶಯ ಹೊಂದಿದ್ದಾರೆ. ಇಂತಹ ವ್ಯಕ್ತಿಗಳು ಸಮಾಜದಲ್ಲಿ ಅಪರೂಪ ಎನಿಸಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಎನ್.ತಿಮ್ಮಕ್ಕ, ಸದಸ್ಯರಾದ ಸಿದ್ದಬಸಪ್ಪ ಜಾಲಿಬೆಂಚೆ, ಅಕ್ಕಿ ಜಂಬಣ್ಣ, ಎನ್.ಬಿ.ನಂದೀಶ್, ಎನ್.ಎಂ.ಅನ್ನಪೂರ್ಣ, ಕಲಾವಿದ ಪುರುಷೋತ್ತಮ ಹಂದ್ಯಾಳ್, ಯುವ ಮುಖಂಡ ಕಟ್ಟೆಬಸಪ್ಪ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ದಾನನಗೌಡರ ಪಂಪಣ್ಣ, ಮಾಜಿ ಅಧ್ಯಕ್ಷ ಮೋಕಾ ಸಿದ್ದಪ್ಪ, ಯಾಟೆ ದೊಡ್ಡಬಸಪ್ಪ, ಎಂ.ಪಂಪಣ್ಣ, ಶಿಕ್ಷಕರು ಹಾಗೂ ಗಡಿನಾಡ ಕನ್ನಡ ಹೋರಾಟಗಾರ ಜಿ.ದೊಡ್ಡಬಸಪ್ಪ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಮುಖಂಡರಾದ ಚಿದಾನಂದಸ್ವಾಮಿ, ಯು.ಚಂದ್ರಪ್ಪ ಇತರರಿದ್ದರು.  ವೀರಭದ್ರಯ್ಯಸ್ವಾಮಿ ಹಾಗೂ ಎ.ಜಂಬನಗೌಡ ಕಾರ್ಯಕ್ರಮ ನಿರ್ವಹಿಸಿದರು. ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಜರುಗಿದ ಪುರಾಣ ಪ್ರವಚನ ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆಯನ್ನು ಕನ್ನಡಸೇವಕ ಶ್ರೀಧರಗಡ್ಡೆ ಸಿದ್ಧಬಸಪ್ಪ ಅವರು ಸನ್ಮಾನಿಸಿದರು.

ಸುದ್ದಿ ಓದಿ