ಬಳ್ಳಾರಿ: ಉಚಿತ ಹೃದಯ ತಪಾಸಣಾ ಶಿಬಿರ

ಬಳ್ಳಾರಿ: ಉಚಿತ ಹೃದಯ ತಪಾಸಣಾ ಶಿಬಿರ

ಬಳ್ಳಾರಿ 09: ನಗರ ಸಭೆ ಸದಸ್ಯರಾಗಿದ್ದ ದಿ.ಸಿರಿಗೇರಿ ಬಸವರಾಜ ಅವರ 31ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ನಗರದ ಆದರ್ಶ ಹಾರ್ಟಸ್ಕ್ಯಾನರ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರ ನಡೆಸಲಾಯಿತು. ಶಿಬಿರವನ್ನು ಉದ್ಘಾಟಿಸಿದ ಡಾ.ಹಳ್ಳಿ ಕರಿಬಸಪ್ಪ ಇಂದಿನ ಜೀವನ ಶೈಲಿ ಮತ್ತು ಒತ್ತಡದ ಕೆಲಸದಿಂದಾಗಿ ಎಲ್ಲಾ ವಯಸ್ಸಿನ ಜನರಲ್ಲಿ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಕಾಲ ಕಾಲಕ್ಕೆ ತಪಾಸಣೆ ಮತ್ತು ಶಿಸ್ತುಭದ್ದ ಜೀವನ ಶೈಲಿ ರೂಡಿಸಿಕೊಳ್ಳಬೇಕು ಎಂದರು. 

ಆಸ್ಪತ್ರೆಯ ವ್ಯವಸ್ಥಾಪಕ ನಿದರ್ೆಶಕ ಸಿರಿಗೇರಿ ಪೊನ್ನರಾಜ ಮಾತನಾಡಿ ಹೃದ್ರೋಗ ವಂಶ ಪಾರಂಪಾರವಾಗಿ ಮತ್ತು ಕುಲಷಿತ ವಾತಾವರಣದಲ್ಲಿರುವ ವಿಶಕಾರಿ ವಸ್ತುಗಳ ಸೇವೆನೆಯಿಂದ ಮಹಿಳೆಯರು ಮತ್ತು ಯುವಕರಲ್ಲೂ ಹೆಚ್ಚಾಗಿತ್ತಿರುವುದು ಆತಂಕದ ವಿಷಯ ಎಂದರು. ಶೇ.40 ರಷ್ಟು ಹೃದ್ರೋಗಿಗಳ ಕೆಟ್ಟ ಪರಿಸರದಿಂದ ಬರುತ್ತಿದ್ದು ಸ್ವಚ್ಛ ಪರಿಸರದ ರಕ್ಷಣೆಗೆ ಎಲ್ಲರೂ ಬದ್ದರಾಗಿರಬೇಕು ಎಂದರು. 

ಕಾರ್ಯಕ್ರಮದಲ್ಲಿ ಡಾ.ದಿನೇಶ, ನಿರ್ದೇಶಕರಾದ  ಬಿ.ಬಸವರಾಜ, ಶಿವಮೂತರ್ಿ ಮೊದಲಾದವರು ಈ ತಪಾಷಣಾ ಶಿಬಿರವನ್ನು ನಡೆಸಿಕೊಟ್ಟರು. 60ಕ್ಕೂ ಹೆಚ್ಚು ಜನ ಹೃದಯ ತಪಾಷಣಾ ಶಿಬಿರಕ್ಕೆ ಭಾಗಿಯಾಗಿದ್ದರು. 


ಸುದ್ದಿ ಓದಿ