ಬಳ್ಳಾರಿ: ಅಭಿವೃದ್ಧಿ ಚಿಂತನೆ ಪ್ರಸ್ತುತತೆ ಕುರಿತು ಸಂವಾದ ಕಾರ್ಯಕ್ರಮ
ಬಳ್ಳಾರಿ 17: ಜಾತಿ ಅಂತಸ್ತಿನ ಕಾರಣದಿಂದ ತಾರತಮ್ಯ ನೋವು, ಅವಮಾನಗಳನ್ನು ಅನುಭವಿಸಿ ಅದನ್ನು ಮೀರಿ ಡಾ. ಶೇಷಾದ್ರಿ ಅವರು ಬೆಳೆದಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಟಿ.ಆರ್. ಚಂದ್ರಶೇಖರಯ್ಯ ಹೇಳಿದರು. ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗವು ಕೆ.ವಿ.ತಿರುಪಾಲಪ್ಪ ದತ್ತಿನಿಧಿಯ ಸಹಯೋಗದಲ್ಲಿ ಶನಿವಾರ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೊ|| ಬಿ.ಶೇಷಾದ್ರಿ ಅವರ ಅಭಿವೃದ್ಧಿ ಚಿಂತನೆ ಮತ್ತು ಅದರ ಪ್ರಸ್ತುತತೆ ಕುರಿತ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಓದುವ ಕಲಿಯುವ, ಕಲಿಸುವ ಕುರಿತು ಕೊನೆಯವರೆಗೂ ಶೇಷಾದ್ರಿಯವರಿಗೆ ಅದಮ್ಯ ಆಸಕ್ತಿ ಮತ್ತು ಪರಿಶ್ರಮವಿತ್ತು. ಶೇಷಾದ್ರಿಯವರು ಸಕರ್ಾರ ತನ್ನ ನೀತಿ ನಿರೂಪಣಾ ಕರ್ಯಕ್ರಮಗಳನ್ನು ತಜ್ಞರ ಸಲಹೆ ಸಮಿತಿಯ ಶಿಫಾರಸ್ಸಿನ ಮೇಲೆ ರೂಪಿಸಬೇಕೆಂದು ಆಶಿಸುತ್ತಿದ್ದರು. ಶೇಷಾದ್ರಿಯವರು ನಂಜುಂಡಪ್ಪ ವರದಿ ಸದಸ್ಯರಾಗಿದ್ದಾಗ ಸಕರ್ಾರಕ್ಕೆ ಅನೇಕ ಸಲಹೆ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾ ಕೇಂದ್ರದಂತಹ ಬಳ್ಳಾರಿಯಲ್ಲಿ ನೆಲೆನಿಂತು ಅಧ್ಯಯನ ಚಳುವಳಿಗೆ ಬಹುದೊಡ್ಡ ಕಾಣಿಕೆ ಕೊಡಲು ಅವರಿಗೆ ಸಾಧ್ಯವಾಗಿದೆ. ಇದು ಅವರ ಬಹುದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಎಂದು ನುಡಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ|| ಕೆ.ಕೇಶವನ್ ಪ್ರಸಾದ್ ಮಾತನಾಡಿ ಶೇಷಾದ್ರಿಯಂಥವರು ಸಮಾಜಕ್ಕೆ ಯಾವಾಗಲೂ ಪ್ರಸ್ತುತವಾಗುತ್ತಾರೆ. ಹತ್ತು ಹಲವು ವಿಚಾರಗಳ ಕೋಶವಾಗಿದ್ದ ಶೇಷಾದ್ರಿಯವರು ಉಪನ್ಯಾಸ ನೀಡುವವರ ಮತ್ತು ಕೇಳುಗರ ನಡುವೆ ಅಂತರವಿರಬಾರದು ಎಂದು ಹೇಳುತ್ತಿದ್ದರು. ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಶೇಷಾದ್ರಿಯವರ ಶಿಷ್ಯರಾದ ಡಾ.ಜೆ.ಕೃಷ್ಣ ಹಾಗೂ ಡಾ. ಹೊನ್ನೂರ ಅಲಿ ಅವರು ಶೇಷಾದ್ರಿಯವರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗೀತಮ್ಮ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಜನಾರ್ದನ ವಂದಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರು, ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿದ್ದಗಂಗಮ್ಮ, ಡಾ.ಶ್ರೀಧರ, ಡಾ. ಗೋವರ್ಧನ ಹಾಗೂ ಡಾ.ಎಂ. ಉಷಾ, ಡಾ.ಕೆ.ಸಿ.ಶಿವಾರೆಡ್ಡಿ, ಡಾ.ಡಿ.ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.