ಬಳ್ಳಾರಿ: ವಿಜೃಂಭಯ ಆಂಜನೇಯ ಸ್ವಾಮಿ ಗಂಗೆ ತರುವ ಕಾರ್ಯಕ್ರಮ

ಬಳ್ಳಾರಿ: ವಿಜೃಂಭಯ ಆಂಜನೇಯ ಸ್ವಾಮಿ ಗಂಗೆ ತರುವ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 19: ವಾಯುಪುತ್ರ ಬಜರಂಗಬಲಿ ಆಂಜನೇಯ ಸ್ವಾಮಿಯ ಗಂಗೆ ತರುವ ಕಾರ್ಯಕ್ರಮವು ಒಬಳಾಪುರ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯ ಸಂಭ್ರಮ ಸಡಗರದಿಂದ ನಡೆಯಿತು. ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಕಾರ್ಯಮ ಆಚರಿಸಿದರು. ಕಾರ್ಯಕ್ರಮದಲ್ಲಿ ತಮ್ಮಾಳೆ, ಮೇಳ ಮತ್ತು ಬ್ಯಾಂಡ್ಸೆಟ್ಗೆ ಸರಿಯಾಗಿ ನಂದಿ ಕೋಲುಗಳ ಕುಣಿತವು ಸ್ವರ್ಗವೇ ಧರೆಗಿಳಿದಂತಿತ್ತು. 

ಬೆಟ್ಟದಿಂದ ಗಂಗೆಯನ್ನು ತಂದ ನಂತರ ಗುಡಿ ತುಂಬಿಸಿಕೊಳ್ಳುವ ಕಾರ್ಯಕ್ರಮವು ನಡೆಯಿತು. ನಂತರ ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಕಳಸದ ಸಮೇತ ತೆರಳಿ ಪೂಜೆ ನಡೆಸಲಾಯಿತು. ನಂತರ ಮಹಾ ಮಂಗಳಾರುತಿ ಕಾರ್ಯಕ್ರಮ ನಡೆಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಈ ಸಂದರ್ಭದಲ್ಲಿ ದೇವಸಮುದ್ರದ ವೀರೇಶ್ ಸ್ವಾಮಿಂ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಮಾರುತಿ ಗಂಗೆಯನ್ನು ಹೊತ್ತು ತಂದರು. ಊರಿನ ಮುಖಂಡರಾದ ಕೊಂಡಣ್ಣನವರ ರಾಜಣ್ಣ, ಚೆನ್ನಬಸಪ್ಪ, ಪ್ರಭಾಕರ್, ವಸಂತ್ ಕುಮಾರ್, ಜಲ್ಲಿ ಶ್ರೀನಿವಾಸ್ ರೆಡ್ಡಿ, ಪ್ರಕಾಶ್ ರೆಡ್ಡಿ, ಪರಮೇಶ್ವರಪ್ಪ, ಪಾಲಕ್ಷಿ, ಗಂಗಣ್ಣ, ಏಕಾಂತ್, ರಮೇಶ್ ಗ್ರಾಮದ ಮುಖಂಡರು, ಯುವಕರು, ಎಲ್ಲಾ ಗ್ರಾಮಸ್ಥರು, ಭಕ್ತರು ಹಾಜರಿದ್ದರು.

ಗಮನ ಸೆಳೆದ ನಂದಿ ಕೋಲುಗಳ ಕುಣಿತ:

ಗಂಗೆ ತರುವ ಸಂದರ್ಭದಲ್ಲಿ ತಮ್ಮಾಳೆ, ಮೇಳ ಹಾಗೂ ಡ್ರಮ್ಸ್ಸೆಟ್ಗೆ ಸರಿಯಾಗಿ ನಂದಿ ಕೋಲುಗಳ ಕುಣಿತವು ಎಲ್ಲರ ಗಮನ ಸೆಳೆಯಿತು. ಕುಣಿಯುತ್ತಾ ಸಾಗಿದಂತೆ ಅದರ ನಾದಕ್ಕೆ ತಲೆಬಾಗದವರಿಲ್ಲ. ಆ ಕ್ಷಣ ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿತ್ತು. ಮಹಿಳೆಯರು, ಯುವಕರು ಹಿರಿಯರು ಎಲ್ಲರು ಅವರವರ ಗೆಳೆಯರು ಮತ್ತು ಆತ್ಮೀಯರ ಜೊತೆಗೆ ಚೆಂದದ ಮಾತುಗಳನ್ನಾಡುತ್ತಾ ಕಾಲ ಕಳೆಯುತ್ತಿದ್ದರು. ಒಟ್ಟಾರೆ ಆಂಜನೇಯ ಸ್ವಾಮಿಯ ಈ ಹಬ್ಬವು ಅತ್ಯಂತ ಸಂಭ್ರಮ ಸಡಗರದಿಂದ ನಡೆದಿದ್ದು, ಎಲ್ಲರ ಮನಸ್ಸನಲ್ಲಿ ಅಚ್ಚಳಿಯದೆ ಉಳಿಯಿತು.


ಸುದ್ದಿ ಓದಿ