ಬಳ್ಳಾರಿ: ಈ ಬಾರಿ ಕಾಂಗ್ರೆಸ್ಗೆ ಬೆಂಬಲ: ಬಿ.ಎಂ.ಪಾಟಿಲ್

ಬಳ್ಳಾರಿ: ಈ ಬಾರಿ ಕಾಂಗ್ರೆಸ್ಗೆ ಬೆಂಬಲ: ಬಿ.ಎಂ.ಪಾಟಿಲ್

ಬಳ್ಳಾರಿ 09: ರಾಜ್ಯದ ಪ್ರಮುಖ ಸಮೂದಾಯದಲ್ಲಿ ಒಂದಾದ ಕುರುಬ ಸಮೂದಾಯಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಪ್ಪಳ, ದಾವಣಗೇರಾ, ಮೈಸೂರುನಲ್ಲಿ ಕುರುಬ ಸಮೂದಾಯದ ಅಭ್ಯರ್ಥಿಗೆ  ಟಿಕೇಟ್ ನೀಡಿದ್ದು ಬಿಜೆಪಿ ಪಕ್ಷದ ಪ್ರಮುಖ ಮುಖಂಡ ಕೆ.ಎಸ್.ಈಶ್ವರಪ್ಪನವರು ಒಬ್ಬರಿಗೂ ಟಿಕೇಟ್ ನೀಡದ ಕಾರಣ ಸಮೂದಾಯದ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತದೆ ಎಂದು ಕರ್ನಾಟಕ  ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಬಿ.ಎಂ.ಪಾಟಿಲ್ ತಿಳಿಸಿದರು. 

ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಕೆ.ಎಸ್.ಈಶ್ವರಪ್ಪನವರು ನಾನು ಕುರುಬ ಸಮಾಜದವನೇ ಅಲ್ಲ. ಎಂದು ಹಾರಿಕೆ ಉತ್ತರ ನೀಡಿ ಯಾವೊಬ್ಬ ಅಭ್ಯರ್ಥಿಗೂ ಟಿಕೇಟ್ ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮೂವರಿಗೆ ಟಿಕೇಟ್ ನೀಡಿದ್ದರಿಂದ ನಾವು ಸಿದ್ದರಾಮಯ್ಯನವರ ಕೈಯನ್ನು ಬಲ ಪಡಿಸಲಿದ್ದೇವೆ ಎಂದರು. ಜೊತೆಗೆ ಕೊಪ್ಪಳ, ದಾವಣಗೇರಾ ಮತ್ತು ಮೈಸೂರಿನಲ್ಲಿ ತೆರಳಿ ಅಭ್ಯಥರ್ಿಗಳ ಪರ ಮತ ನೀಡುವಂತೆ ಅಲ್ಲಿಯೂ ಸಹ ಪತ್ರಿಕಾಗೋಷ್ಟಿ ನಡೆಸುವುದಾಗಿ ತಿಳಸಿದರು. ರಾಜ್ಯದಲ್ಲಿನ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಸಿದರು. 

ಈ ಸಂದರ್ಭದಲ್ಲಿ ಅನಿಲ್ ಕುಮಾರ್, ಹೊನ್ನಪ್ಪ, ಕೆ.ಎನ್.ಯುಗೇಂದ್ರ, ಕೆ.ಎ.ಶಿವಕುಮಾರ, ಬಟ್ಟಿ ಮಹೇಶ, ಬಿ.ರಾಮಲಿಂಗ, ಜಂಬಯ್ಯ, ಲಿಂಗರಾಜು ಅಪ್ಪು, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು. 

 

ಸುದ್ದಿ ಓದಿ