ಬಾಸ್ಕೇಟ್ ಬಾಲ್ : ಜಿಲ್ಲಾ ಮಟ್ಟಕ್ಕೆ ಆಯ್ಕೆ

 ಬಾಸ್ಕೇಟ್ ಬಾಲ್ : ಜಿಲ್ಲಾ ಮಟ್ಟಕ್ಕೆ ಆಯ್ಕೆ  Basketball: Selection for district level

ಲೋಕದರ್ಶನ ವರದಿ 

ಬೀಳಗಿ 01 : ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಬೀಳಗಿಯಲ್ಲಿ ನಡೆದ ತಾಲೂಕಾ ಮಟ್ಟದ ಬಾಸ್ಕೇಟ್ ಬಾಲ್ ಕ್ರೀಡಾಕೂಟದಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಕುಮಾರ ಜೀವನ, ಸಿದ್ದಲಿಂಗ, ರೋಹಿತ, ಪ್ರಶಾಂತ, ಅಕ್ಷಯ, ಭೀಮಣ್ಣ, ಸಿದ್ದಾರ್ಥ, ವಜ್ರನಾಭ, ಪ್ರಜ್ವಲ, ಶಶಾಂಕ, ಮಣಿಕಂಠ, ಮ.ಫರಹಾನ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತರಬೇತಿ ನೀಡಿದ ದೈಹಿಕ ಶಿಕ್ಷಕರಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಎಂ.ಎನ್‌.ಪಾಟೀಲ, ಆಡಳಿತಾಧಿಕಾರಿ ವಿ.ಎಸ್‌.ಮೇಟಿ, ಪ್ರಾಚಾರ್ಯ ಜಿ.ಆರ್‌.ಪಾಟೀಲ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡೆಸಿದ್ದಾರೆ.