ಬಸವಜ್ಯೋತಿ ಐಟಿಐ ಕಾಲೇಜು ಫಲಿತಾಂಶ ಶೇ. ನೂರರಷ್ಟು
ಲೋಕದರ್ಶನ ವರದಿ
ಗೋಕಾಕ 18: ಗೋಕಾಕ ನಗರದ ಪ್ರ ಪ್ರಥಮ ಐಟಿಐ ಕಾಲೇಜು ಎಂಬ ಹೆಗ್ಳಿಕೆಗೆ ಪಾತ್ರವಾಗಿರುವ್ರ್ರಥಮ ಬಸವಜ್ಯೋತಿ ಐ ಟಿ ಐ ಕಾಲೇಜು 24ನೇ ವರ್ಷಕ್ಕೆ ಪಾದಾರೆ್ಣ ಮಾಡುತ್ತಿರುವ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ.
ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತ್ ನವದೆಹೆಲಿ ಯಿಂದ ನಡೆದ ಸನ್ 2020/22 ನೇ ಸಾಲಿನ ಫಲಿತಾಂಶದಲ್ಲಿ ಫಿಟ್ಟರ್ ವಿಭಾಗದ ರವಿ ಸಿದ್ಧಯ್ಯಗೊಳ ಪ್ರಥಮ ಸ್ಥಾನ ಪಡೆದರೆ, ನಿರ್ವಾಣಿ ವಠಾರ ದ್ವಿತೀಯ ಹಾಗೂ ಬಸವರಾಜ ಗೇಟಿನ ತೃತೀಯ ಸ್ಥಾನ ಪಡೆದಿರುತ್ತಾರೆ. ಎಲೆಕ್ಟ್ರೀಶಿಯನ್ ವಿಭಾಗದಲ್ಲಿ ಮಲ್ಲಿಕಾರ್ಜುನ ವಣಕಿ ಪ್ರಥಮ ಸ್ಥಾನ ಪಡೆದರೆ, ಹಣಮಂತ ದ್ಯಾಮಕ್ಕಾಗೋಳ ದ್ವಿತೀಯ ಸ್ಥಾನ ಹಾಗೂ ಅಬ್ದುಲ ಸಯ್ಯದ ತೃತೀಯ ಸ್ಥಾನ ಪಡೆದಿರುತ್ತಾರೆ. ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದಲ್ಲಿ ಹರುಷ ಹುಕ್ಕೇರಿ ಪ್ರಥಮ ಸ್ಥಾನ ಪಡೆದರೆ, ಭರತ ಇಂಚಲ ದ್ವಿತೀಯ ಹಾಗೂ ಓಂಕಾರ ಗುಡ್ಡದಮನಿ ತೃತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ 2021/23 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ನೂರರಷ್ಟು ಆಗಿದೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಶೋಕ ಲಗಮಪ್ಪಗೋಳ ಮತ್ತು ಕಾಲೇಜಿನ ಪ್ರಾಚಾರ್ಯರು ಆದ ಲೋಕೇಶ ಎಸ್ ಜಾಧವ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.