ಜಮಖಂಡಿ

ಮತದಾರರಿಗೆ ಜಾಗೃತಿ ಮೂಡಿಸಿದ ಬಂಡಿಗಣಿ ಮಠದ ಬಸವಗೋಪಾಲ ಸ್ವಾಮೀಜಿ

ಮತದಾರರಿಗೆ ಜಾಗೃತಿ ಮೂಡಿಸಿದ ಬಂಡಿಗಣಿ ಮಠದ ಬಸವಗೋಪಾಲ ಸ್ವಾಮೀಜಿ

ಜಮಖಂಡಿ 06: ರಾಜ್ಯದಲ್ಲಿ ಮತ್ತು ದೇಶದಲ್ಲಿ ಕರ್ಮ ಹೆಚ್ಚಾಗಿದೆ ಅದು ನಿಲ್ಲಬೇಕು. ಧರ್ಮದ ಕಾಯಕ ಬೆಳೆಯಬೇಕು. ದೇಶಕ್ಕೆ ಒಳ್ಳೆಯದನ್ನು ಬಯಸುವ ವ್ಯಕ್ತಿಗೆ ಮತವನ್ನು ಚಲಾಯಿಸಿದ್ದರೆ ಮಾತ್ರ ದೇಶಕ್ಕೆ ಶಾಂತಿ ದೊರೆಯಲು ಸಾಧ್ಯ ಎಂದು ಬಂಡಿಗಣಿ ಬಸವಗೋಪಾಲ ಶ್ರೀಗಳು ಹೇಳಿದರು.  

ತಾಲ್ಲೂಕಿನ ಸಮೀಪ ಬಂಡಿಗಣಿ ಬಸವಗೋಪಾಲ ಮಠದ ಶ್ರೀಗಳು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರಿಗೆ ಜಾಗೃತಿ ಸಂದೇಶವನ್ನು ನೀಡಿ, ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಯಿಂದ ದೇಶಕ್ಕೆ ಮತ್ತು ರಾಜ್ಯಕ್ಕೆ ಹಿತವಾಗಿರಬೇಕು. ಯಾವುದೇ ಪಕ್ಷದ ವ್ಯಕ್ತಿಯಾಗಿರಲ್ಲಿ. ಪಕ್ಷವನ್ನು ನೋಡದೆ. ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ದೇಶಕ್ಕೆ ಯಾವುದೇ ರೀತಿಯಿಂದ ಹಾನಿಯಾಗುವುದಿಲ್ಲ ಎಂದರು. 

ರಾಜಕಾರಣಿಗಳು, ಅಧಿಕಾರಿಗಳು, ಖಾವಿ ಬಟ್ಟೆಧಾರಿಗಳು ಒಳ್ಳೆಯ ದಾರಿಯಲ್ಲಿ ನಡೆದುಕೊಂಡು ತಮ್ಮ ವೃತ್ತಿಯ ಜೀವದಲ್ಲಿ ನಿಷ್ಠೆಯಿಂದ ಕಾರ್ಯವನ್ನು ನಿರ್ವಹಿಸಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ತಮ್ಮ ಮತವನ್ನು ಚಲಾಯಿಸಬೇಕಾದರೆ ಒಳ್ಳೆಯ ವ್ಯಕ್ತಿಗೆ ನೀಡಿದರೆ. ದೇಶ, ರಾಜ್ಯ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ. ಬರುವ 2023ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಬಂಡಿಗಣಿ ಮಠದ ಬಸವಗೋಪಾಲ ಸ್ವಾಮೀಜಿಯವರು ಮತದಾರರಿಗೆ ಜಾಗೃತಿ ಸಂದೇಶವನ್ನು ನೀಡಿದರು. 


ಸುದ್ದಿ ಓದಿ