ಜಮಖಂಡಿ

ಮಾ.25ರಂದು ಜಮಖಂಡಿ ವ್ಯಾಪಾರಸ್ಥರಿಂದ ಬಂದ್ ಗೆ ಕರೆ

ಮಾ.25ರಂದು ಜಮಖಂಡಿ ವ್ಯಾಪಾರಸ್ಥರಿಂದ ಬಂದ್ ಗೆ ಕರೆ

ಲೋಕದರ್ಶನ ವರದಿ,

ಜಮಖಂಡಿ : 24: ಹೊರರಾಜ್ಯಗಳಿಂದ ಅರಸಿ ಬಂದ ವ್ಯಾಪಾರಿಗಳ ವಿರುದ್ದ ಮಾ,25 ರಂದು ಜಮಖಂಡಿ ವ್ಯಾಪಾರಸ್ಥರಿಂದ ಹಾಗೂ ವಿವಿಧ ಕನ್ನಡ ಪರ ಸಂಘಟನೆಯಿಂದ ಜಮಖಂಡಿ ಬಚ್ಚಾವೋ, ರಾಜಸ್ಥಾನ ಹಠಾವೋಕ್ಕೆ ಬಂದ್ ಕರೆಗೆ ಘೋಷಣೆ ಮಾಡಲಾಗಿದೆಂದು ನ್ಯಾಯವಾದಿ ಎನ್,ಎಸ್,ದೇವರವರ ತಿಳಿಸಿದರು.

 ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಕನ್ನಡಿಗರನ್ನು ಹತ್ತಿಕ್ಕಿ ಬೇರೆ ಭಾಷೆಯ ಮತ್ತು ಬೇರೆ ರಾಜ್ಯದ ಜನರು ಇಲ್ಲಿಗೆ ಆಶ್ರಯ ಅರಸಿ ಬಂದು. ವಿಶಾಲ ಹೃದಯದ ಕನ್ನಡಿಗರಿಂದ ಅವಕಾಶವನ್ನು ಪಡೆದುಕೊಂಡು ಇಂದು ಕನ್ನಡಿಗರೊಂದಿಗೆ ಅನಾರೋಗ್ಯಕರವಾದ ವ್ಯಾಪಾರ ಪೈಪೋಟಿಗೆ ಇಳಿಯುತ್ತಿದ್ದಾರೆ. ಶೇ.70 ರಿಂದ 80 ರಷ್ಟು ಸ್ಥಳೀಯ ವ್ಯಾಪಾರಿಗಳಿಂದ ರಾಜಸ್ಥಾನಿ, ಗುಜರಾತಿ, ಉತ್ತರಪ್ರದೇಶದ ವ್ಯಾಪಾರಿಗಳ ಪಾಲಾಗುತ್ತಿದೆ. ಪ್ರತಿಯೊಂದು ವ್ಯಾಪಾರಗಳು ಬೇರೆ ರಾಜ್ಯದವರ ಅಂಗಡಿಗಳನ್ನು ಪಡೆದುಕೊಂಡು ಅವರೆ ಉದ್ಯೋಗವನ್ನು ಮಾಡುತ್ತಿದ್ದಾರೆ. ಅವರಲ್ಲಿ ಸ್ಥಳೀಯ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಪಡೆದುಕೊಳ್ಳದೆ. ನಿರುದ್ಯೋಗಿಗಳು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಹೊರ ರಾಜ್ಯದ ರಾಜಸ್ಥಾನಿ, ಉತ್ತರಪ್ರದೇಶ, ಗುಜರಾತ್ದಿಂದ ಅರಸಿ ಬಂದ ವ್ಯಾಪಾರಿಗಳು ಮರಳಿ ತಮ್ಮ ರಾಜ್ಯಕ್ಕೆ ಹೋಗಬೇಕೆಂದು ಒತ್ತಾಯಿಸಿದರು.  

ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ವ್ಯಾಪಾರಸ್ಥರ ಸಂಘಟನೆಗಳು ಬಂದ್ಗೆ ಬೆಂಬಲವನ್ನು ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಡು ಜಿರಲಿ, ಅರುಣ ಲಗಳಿ, ಶಿವಶರಣ ಮನಗೂಳಿ, ರಾಜು ಗಾಂದಿ, ರಾಕೇಶ ಜೈನ್, ಶೀತಲ ರಾಠಿ, ವಸೀಮ ಅವಟಿ, ತೋಫಿಕ್ ಕಡಕೋಳ, ಆನಂದ ಮನಗೂಳಿ, ವಿಠ್ಠಲ ಮರಾಠೆ, ಸುಂದರ ಮೀಶಿ, ಸೈಯದ ಶೇಖ, ಮಹಾಂತೇಶ ಕಲ್ಯಾಣಿ, ಜಿ,ಎಚ್, ಹಲ್ಯಾಳ, ಪ್ರಕಾಶ ಚವ್ಹಾಣ, ಪ್ರಭು ಕಲ್ಯಾಣಶೆಟ್ಟಿ, ಗಣೇಶ ಸಾಳೋಂಕಿ, ಪವಣ ಪತಂಗೆ ಸೇರಿದಂತೆ ಅನೇಕರು ಇದ್ದರು,



ಸುದ್ದಿ ಓದಿ