ದೇಶದ ಜನತೆಯ ಹಿತಕ್ಕಾಗಿ ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಅವಶ್ಯ : ಶಾಸಕ ಜಗದೀಶ ಗುಡಗುಂಟಿ
ಜಮಖಂಡಿ 08: ದೇಶದ ಜನತೆಯ ಹಿತಕ್ಕಾಗಿ ಕೇಂದ್ರದಲ್ಲಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ಬಹಳಷ್ಟು ಅವಶ್ಯಕತೆ ಇರುತ್ತದೆ. ಆದರಿಂದ ತಾಲೂಕ ಮಟ್ಟ. ಬೂತ್ ಮಟ್ಟದ ಕಾರ್ಯಕರ್ತರ ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಮಾವೇಶ ಮತ್ತು ವೈಚಾರಿಕ ಸಂಘೋಷ್ಠಿಯ ಕಾರ್ಯಕ್ರಮ ಅ.10 ರಂದು ಬೃಹತ್ ಸಮಾವೇಶ ನಡೆಯಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಅವರ ಹೇಳಿದರು.
ನಗರದ ಶಾಸಕರ ನಿವಾಸ ಸಾಕ್ಷಾತ್ಕಾರ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಅ.10 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ. ಬೆಂಗಳೂರಿನ ಮಾಜಿ ಉಪ ಕುಲಪತಿ ಸಂಸ್ಕೃತ ವಿಶ್ವವಿದ್ಯಾಲಯದ ಮಲ್ಲೇಪುರಂ ಜಿ. ವೇಕಟೇಶ ಶಾಸಕ ಸುರೇಶಕುಮಾರ ಸೇರಿದಂತೆ ಅನೇಕ ನಾಯಕರುಗಳು ಭಾಗವಹಿಸಲಿದ್ದು. ಮಲ್ಲೇಪುರಂ ಜಿ. ವೇಕಟೇಶ ಅವರು
ಬಿಜೆಪಿ ಇತಿಹಾಸ ಮತ್ತು ವಿಕಾಸ ಕುರಿತು ಭಾಷಣ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಸುಮಾರು 3 ರಿಂದ 4 ಸಾವಿರ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿತ್ತು. ಆದರೆ ಕಾಂಗ್ರೆಸಿಗರು ರಾಜ್ಯದ ಜನತೆಗೆ ಐದು ಗ್ಯಾರೇಂಟಿ ಯೋಜನೆಗಳ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರುತ್ತಿತ್ತು. ಆದರೆ ಗ್ಯಾರೇಂಟಿ ನೀಡಿದ ಕಾರಣ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜಮಖಂಡಿ ಮತಕ್ಷೇತ್ರದಲ್ಲಿ ಮಹಿಳಾ ಮತದಾರರು ಸುಮಾರು 98 ಸಾವಿರ ಜನರು ಇದ್ದಾರೆ. ಮನೆಯ ಮಹಿಳಾ ಕುಟುಂಬಸ್ಥರು 32 ಸಾವಿರ ಜನರು ಫಲಾನುಭವಿಗಳು ಇದ್ದಾರೆ. ಇವರಿಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆಯಾಗದೆ ಪರದಾಡುತ್ತಿದ್ದಾರೆ. ಇನ್ನೂ ಸುಮಾರು 24 ಸಾವಿರ ಮಹಿಳೆಯರು ಕ್ಷೇತ್ರದಲ್ಲಿ ಉಳಿದ್ದಾರೆ. ಕಾಂಗ್ರಸಿಗರ ಗ್ಯಾರೇಂಟಿ ಯೋಜನೆಯನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಲೇವಡಿ ಮಾಡಿದರು.
ಭವ್ಯಭಾರತದಲ್ಲಿ,26 ಪಕ್ಷಗಳು ಸೇರಿಕೊಂಡು ಇಂಡಿಯಾ ಒಕ್ಕೂಟ ಎಂದು ಸಂಘಟನೆ ಹುಟ್ಟಿಕೊಂಡಿದೆ. ಇದೊಂದು ಬಹಳ ಭ್ರಷ್ಟರ ಸಂಘಟನೆಯಾಗಿದೆ. ದೇಹದ ಜನರು ಬಹಳು ಜಾಗೃತರಾಗಿದ್ದಾರೆ. ದೇಶದ ಜನರು ಭಾರತ ಮಾತಾಕಿ ಜೈ ಎಂದು ಘೋಷಣಿ ಕರೆಯುತ್ತೇವೆ. ಆದರೆ ಇಂಡಿಯಾಕ್ಕೆ ಜೈ ಎಂದು ಕರೆಯುವುದಿಲ್ಲ ಎಂದು ಕೀಡಿಕಾರಿದರು.
ದೇಶದಲ್ಲಿ ಮಹಿಳೆಯರಿಗೆ ಪ್ರಧಾನಿಯವರು ಶೇ. 33 ಮೀಸಲಾತಿಯನ್ನು ನೀಡಿದ್ದಾರೆ. ಇದರಿಂದ ಮಹಿಳೆಯರು ಮುಂದೆ ಬರಲು ಸಾಧ್ಯವಾಗುತ್ತದೆ.ಅದಕ್ಕಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಅದರಗೋಸ್ಕರವಾಗಿ ಕಾರ್ಯಕರ್ತರ ಸಮಾವೇಶವನ್ನು ಮಾಡುವ ಮೂಲಕ ಪಕ್ಷವನ್ನು ಸಂಘಟಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಈಶ್ವರ ಆದೇಪ್ಪನ್ನವರ. ಅಜೇಯ ಕಡಪಟ್ಟಿ. ಮಾದೇವ ನ್ಯಾಮಗೌಡ. ಪ್ರದೀಪ ನಂದೇಪ್ಪನ್ನರ. ಗಣೇಶ ಶಿರಗನ್ನವರ. ಶಂಕರ ಕಾಳೆ.ಶ್ರೀಧರ ಕಂಬಿ ಉಪಸ್ಥಿತರಿದ್ದರು.