ರಾಣೆಬೆನ್ನೂರ

ಗಂಗಾಮತ ಸಮಾಜದ ಮುಖಂಡರು ಬಿಜೆಪಿಗೆ ಸೇರ್ಪಡೆ

ಗಂಗಾಮತ ಸಮಾಜದ ಮುಖಂಡರು ಬಿಜೆಪಿಗೆ ಸೇರ್ಪಡೆ

ರಾಣೆಬೆನ್ನೂರು23:  ಗಂಗಾಮತ ಸಮಾಜದ ಮುಖಂಡರು ಹಾಗೂ ಮಹಿಳೆಯರು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಕ್ಕೆ ಮನಸ್ಸು ಸೋಮವಾರದಂದು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಶಾಸಕ ಅರುಣ್ ಕುಮಾರ್ ಪೂಜಾ ನೇತೃತ್ವದಲ್ಲಿ ಸೇರ್ಪಡೆಗೊಂಡರು ಶಾಸಕ ಅರುಣ್ ಕುಮಾರ್ ಪೂಜಾರ್ ಸಮಾಜದ ಮುಖಂಡರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಮಾತನಾಡಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಶ್ರಮಿಸಿದ್ದೇನೆ 8.5 ಲಕ್ಷ ರುಂತಿಕೆ ಹಣದಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣಕ್ಕೆ ದಾರವಾಗಿ ನೀಡಿದ್ದೇನೆ ಅಂಬಿಗರ ವಸತಿ ನಿಲಯ ಸ್ಥಾಪಿಸಲು ಮುಂದಾಗಿರುವುದಾಗಿ ಹೇಳಿದರು. 32 ಕೋಟಿ ರೂ ವೆಚ್ಚದಲ್ಲಿ ಮೆಡ್ಲೇರಿ ಕೆರೆಯ ಅಭಿವೃದ್ಧಿ ಮಾಡಲಾಗುವುದು ಮುಂಬರುವ ದಿನಮಾನಗಳಲ್ಲಿ ಗ್ರಾಮದ ಸರ್ವತೋಮುಖ ಏಳಿಗೆಗೆ ಸದಾ ಸಿದ್ಧವಿರುವುದಾಗಿ ಹಾಗೂ ಮುಂಬರುವ ಚುನಾವಣೆಯಲ್ಲಿ ಶಾಸಕನಾಗಲು ನನಗೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಅರುಣ್ ಕುಮಾರ್ ಪೂಜಾರ ಹೇಳಿದರು. 

ಗಂಗಾ ಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಬಾರ್ಕಿ , ಮಾತನಾಡಿ ಮೆಡ್ಡೇಯಲ್ಲಿರುವ ಗಂಗಾಪರಮೇಶ್ವರಿ ದೇವಸ್ಥಾನದ ನಿಮರ್ಾಣಕ್ಕೆ ಶಾಸಕ ಅರುಣ್ ಕುಮಾರ್ ಪೂಜಾರ್ ಅವರು 8. 5 ಲಕ್ಷ ರೂಗಳನ್ನು ನೀಡಿದ್ದು ಅವರ ಋಣವನ್ನು ಸಮಾಜ ಬಾಂಧವರು ಪ್ರತ್ಯುಪಕಾರದ ಮೂಲಕ ತಿರಿಸಬೇಕೆಂದು ವಿನಂತಿಸಿದರು.

ರಾಮಚಂದ್ರಪ್ಪ ಬಾರ್ಕಿ , ಸುಭಾಷ್ ಬಾರ್ಕಿ  ,ಮಂಜುನಾಥ್ ಅಂಬಿಗೇರ್ ರಾಜು ಬಾರ್ಕಿ   ಸೋಮಶೇಖರ  ಬಸಾಪುರ. ದುರ್ಗಪ್ಪ ಬಾರ್ಕಿ  ವೀರೇಶ್ ಬಾರ್ಕಿ  ಹುಚ್ಚಪ್ಪ ಬಸಾಪುರ ಬಸವರಾಜ ಅಂಬಿಗೇರ್ ಈರಮ್ಮ ಸುಣಗಾರ,ನೇತ್ರ ಬಾರ್ಕಿ  ದೇವಿರಮ್ಮ ಅಂಬಿಗೇರ್ ಗಂಗಮ್ಮ ಬಾರ್ಕಿ  ಕರಿಯಪ್ಪ ಬಾರ್ಕಿ  ಸೇರಿದಂತೆ ಗಂಗಾಮತ ಮತ್ತು ಹಾಲುಮತದ ನೂರಾರು ಜನರು ಪಕ್ಷಕ್ಕೆ ಸೇರ್ಪಡೆಗೊಂಡರು ಪವನ್ ಕುಮಾರ್ ಮಲ್ನಾಡದ ಕರಬಸಪ್ಪ ಬಾರ್ಕಿ  ಮಲ್ಲಿಕಾರ್ಜುನ ಮಸಪ್ಪನವರ್ ಬಸವರಾಜ ಹುಲ್ಲತ್ತಿ, ಗಂಗಪ್ಪ ಬಾರ್ಕಿ ,ಬಸವರಾಜ ಚಳಗೇರಿ,ನಾಗರಾಜ ಅಂಬಿಗೇರ್, ಜಯಪ್ಪ ಪಾರ್ಟಿ  ನಾಗರಾಜ್ ಅಂಬಿಗೇರ್,ಸೇರಿದಂತೆ ಸಮಾಜದ ಗಣ್ಯರು, ಮುಖಂಡರು  ಇದ್ದರು 

ಸುದ್ದಿ ಓದಿ