ಬಿಜೆಪಿ ತತ್ವ-ಸಿದ್ಧಾಂತ, ವಿಚಾರ ಚಿಂತನ-ಮಂಥನ ಮಾಡುವ ಪಕ್ಷ : ಜಮಖಂಡಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್
ಲೋಕದರ್ಶನ ವರದಿ,
ಜಮಖಂಡಿ 26: ಭಾರತೀಯ ಜನತಾ ಪಕ್ಷ ಇದೊಂದು ತತ್ವ-ಸಿದ್ಧಾಂತ- ರಾಜಕೀಯ ಹಾಗೂ ವಿಚಾರ ಚಿಂತನ-ಮಂಥನ ಮಾಡುವ ಪಕ್ಷವಾಗಿದ್ದು, ಈ ಪಕ್ಷ ಬಗ್ಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ಯಪಡಿಸುತ್ತಿದ್ದು, ಹೀಗಾಗಿ ಇಂದು ರಾಜ್ಯದಲ್ಲಿ ಕನಿಷ್ಠ 130 ರಷ್ಟು ಶಾಸಕರ ಆಯ್ಕೆ ಮಾಡಲು ಮತದಾರ ಇಂದು ಮನಸ್ಸು ಮಾಡಿದ್ದಾನೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕುಂಚನೂರು ರಸ್ತೆಯಲ್ಲಿನ ಆಲಗೂರ ಆರ್ಸಿ ಸೆಂಟರ್ ಹತ್ತಿರದ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಗುಡಗುಂಟಿ ಅವರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಇಂದು ಭಾರತ ತಾಕತ್ತಿನಿಂದ ಕೂಡಿದೆ. ಇಡೀ ಜಗತ್ತಿನಲ್ಲಿ ಭಾರತ ದೇಶದಂತಹ ಸರ್ಕಾರ ಸಿಗುವುದಿಲ್ಲ. ಈ ದೇಶದ 80 ಕೋಟಿ, ಜನತೆಗೆ ಕೋವಿಡ್ ಸಂದರ್ಭದಲ್ಲಿ ರೇಶನ್ ನೀಡಿ ಕಾಪಾಡಿದ್ದು, ಕೇಂದ್ರ ಸರ್ಕಾರ ಮಾಡಿದೆ. ಕರ್ನಾಟಕದ ವಿಕಾಸದ ಬಗ್ಗೆ ಪ್ರಧಾನಿ ಸತತ ಚಿಂತನ ಮಾಡುತ್ತಿದ್ದು, ಈ ಮೊದಲು ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದು, ಸದ್ಯ 148 ವಿಮಾನ ನಿಲ್ದಾಣ ನಿರ್ಮಣಗೊಂಡಿವೆ. ಹಿಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಭ್ರಷ್ಟಾಚಾರದಲ್ಲಿ ತೊಡಗಿದ್ದವರಿಂದ ಕೇವಲ 5 ಕೋ,ಹಣ ಜಪ್ತಿ ಮಾಡಿತ್ತು, ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 1 ಲಕ್ಷ,10 ಕೋ, ರು,ಗಳಷ್ಟು ಹಣ ಖಜಾನೆಗೆ ಜಮಾ ಮಾಡಲಾಗಿದೆ ಎಂದರು.
ಕಳೆದ 9 ವರ್ಷಗಳಲ್ಲಿ ಪ್ರತಿದಿನ 3.9 ಕಿಮಿ ರಸ್ತೆ ನಿಮಾಣವಾಗಿತ್ತಿದ್ದು, ಸದ್ಯ 18 ಸಾವಿರ ಕಿಮೀ ಹೈವೇ ರಸ್ತೆ ನಿರ್ಮಣಗೊಂಡಿದೆ. ಅದು ಪ್ರತಿದಿನ 38 ಕಿಮಿ ಹೈವೇ ಹೆದ್ದಾರಿ ನಿರ್ಮಾಣ ಕೈಗೆತ್ತಿಕೊಳ್ಳುತ್ತಿದೆ. ಚೇನೈ, ಹೈದ್ರಾಬಾದ, ಬೆಂಗಳೂರು, ಮುಂಬೈ, ದೆಹಲಿ ನಗರಗಳಲ್ಲಿ ಜೌದ್ಯೋಗಿಕ ಕಾರಿಡಾರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರಿಂದ ದೊಡ್ಡ-ದೊಡ್ಡ ಉದ್ಯಮಿಗಳು ರಾಜ್ಯಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಉದ್ಯೊಗ ಸಿಗುತ್ತದೆ ಎಂದರು.
ಭಾರತದ ಒಂದು ಇಂಚು ಜಾಗೆಯನ್ನು ಸುತ್ತಲಿನ ಯಾವುದೇ ದೇಶ ಕಬ್ಜಾ ಮಾಡಲು ಸಾಧ್ಯವಿಲ್ಲ. ಇಂದು ಅಕ್ಕಪಕ್ಕದ ದೇಶಗಳಿಗೆ ಭಾರತ ತನ್ನ ತಾಕತ್ತನ್ನು ತೋರಿಸಲು ಸನ್ನದ್ಧವಾಗಿದೆ. ಪ್ರಧಾನಿ ನರೇಂದ್ರ ಅವರ ಘೋಷಣೆಯಂತೆ ನಿವಾಸಿಗಳಿಗೆ ನೀರು, ನೀರಾವರಿಗೆ ನೀರು ಎಂಬ ಕಾರ್ಯ ಸದ್ಯ ಜಾರಿಯಲ್ಲಿದೆ. ರಸ್ತೆ ಸಂಪರ್ಕ, ವಾಯು, ರೈಲ್ವೇ ಸಂಪರ್ಕ ಅಲ್ಲದೇ ಇಂದು 5ಜಿ ಅಷ್ಟೇ ಅಲ್ಲ 6ಜಿ ನಿರ್ಮಾಣಕ್ಕೂ ಭಾರತ ಸಜ್ಜಾಗಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಪ್ರಧಾನಿಯಾಗಲೀ ಯಾವುದೇ ಸಚಿವರಿಗೆ ಯಾವುದೇ ಭ್ರಷ್ಟಾಚಾರ ಕಪ್ಪು ಚುಕ್ಕೆ ಇಲ್ಲವೆಂದು ಹೆಮ್ಮೆಯಿಂದ ಹೇಳಿದರು.
ಭಾರತೀಯ ಜನತಾ ಪಕ್ಷವು ಹೇಳಿದಂತೆ ಕೆಲಸ ಮಾಡುವ ಪಕ್ಷವಾಗಿದೆ. ಜನತೆಗೆ ಮೋಸ ಮಾಡಿ ಅಧಿಕಾರ ಪಡೆಯುವ ಪಕ್ಷ ನಮ್ಮದಲ್ಲ, ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ನಮ್ಮ ಕರ್ತವ್ಯವಾಗಿದೆ. ಜಮ್ಮು-ಕಾಶ್ಮೀರ ಸಮಸ್ಯೆಯನ್ನು ಅಧಿಕಾರಕ್ಕೆ ಬಂದ ತಕ್ಷಣ ನರೇಂದ್ರ ಮೋದಿ ಬಗೆಹರಿಸಿದರು. ಇದನ್ನು ವಿರೋಧಿಗಳು ಶ್ಲಾಘಿಸಬೇಕು ಎಂದರು.
ಲಡಾಯಿ ಇಲ್ಲ :
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ನಡೆದಿದ್ದು, ಅದೂ ಕಾಂಗ್ರೆಸ್ ಪಕ್ಷ ಹಗಲು ಕನಸು ಕಾಣುತ್ತಿದೆ. ಈಗಾಗಲೇ ಸಿದ್ದರಾಮಯ್ಯಾ ಮತ್ತು ಡಿಕೆ ಶಿವಕುಮಾರ ಮಧ್ಯ ಕುರ್ಚಿಗೆ ಲಡಾಯಿ ನಡೆಯುತ್ತಿರುವುದು ಹಾಸ್ಯಾಸ್ಪದ ಸಂಗತಿ. ಭಾರತದ ಸುಸ್ಥಿತಿಯನ್ನು ನೋಡಿ ಅಕ್ಕಪಕ್ಕದ ಪಾಕಿಸ್ತಾನಗಳಂತಹ ದೇಶಗಳು ಹೊಟ್ಟೆಕಿಚ್ಚು ಪಡುತ್ತಿವೆ ಎಂದು ಹೇಳಿದರು.
ಸ್ಮರಣೆ :
ಈ ನಾಡಿ ಶ್ರೇಷ್ಠ ತತ್ವಜ್ಞಾನಿ ಗುರುದೇವ ರಾನಡೆ ಅವರು ಜನ್ಮವಿತ್ತ ಈ ನಾಡು ತುಂಬಾ ಪವಿತ್ರವಾದ ನಾಡಾಗಿದ್ದು, ಇಲ್ಲಿ ಪ್ರಾಮಾಣಿಕರಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಪ್ರಾಮಾಣಿಕ ರಾಜಕರಣಿಗಳನ್ನು ವಿಧಾನಸಭೆಗೆ ಕಳಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದ್ದು. ಗುರುದೇವ ರಾನಡೆ ಅವರನ್ನು ಸ್ಮರಿಸಿದರು.
ಅಭ್ಯರ್ಥಿ ಜಗದೀಶ ಗುಡಗುಂಟಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಪ ಮಾಜಿ ಸದಸ್ಯ ಜಿ. ಎಸ್.ನ್ಯಾಮಗೌಡ, ಡಾ.ಉಮೇಶ ಮಹಾಬಳಶೆಟ್ಟಿ, ಮಹಾದೇವ ನ್ಯಾಮಗೌಡ, ಯೋಗಪ್ಪ ಸವದಿ, ನಾರಾಯಣಸಾ ಭಾಂಡಗೆ, ನಾಗಪ್ಪ ಸನದಿ, ಬಸವರಾಜ ಬಿರಾದಾರ, ಬಸವರಾಜ ಕಲೂತಿ, ಚಂದ್ರಕಾಂತ ಉಪಾಧ್ಯೆ, ಪ್ರಕಾಶ ಕಾಳೆ, ಅಜೇಯ ಕಡಪಟ್ಟಿ ವೇದಿಕೆಯಲ್ಲಿ ಇದ್ದರು.