ಜಮಖಂಡಿ

ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಬಿಇಓ ಅಶೋಕ ಬಸಣ್ಣವರ ಚಾಲನೆ

ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ  ಬಿಇಓ ಅಶೋಕ ಬಸಣ್ಣವರ ಚಾಲನೆ

ಲೋಕದರ್ಶನ ವರದಿ,

ಜಮಖಂಡಿ  4: ಶಿಕ್ಷಣ ಇಲಾಖೆ ಮತ್ತು ದಾರೈನ ಪಬ್ಲಿಕ್ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇವರ ಸಹಯೋಗದಲ್ಲಿ ಪೂರ್ವ ವಲಯ ಮಟ್ಟದ 14 ಮತ್ತು 17 ವಯೋಮಿತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಬಿಇಓ ಅಶೋಕ ಬಸಣ್ಣವರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ಜ್ಞಾನಾತ್ಮಕ ಅಷ್ಟೇ ಅಲ್ಲದೇ ದೈಹಿಕವಾಗಿ ಬೆಳೆಯಬೇಕು.ಅದಕ್ಕಾಗಿ ಶಿಕ್ಷಣ ಇಲಾಖೆ ಪ್ರತಿ ವರ್ಷ ಕಾರ್ಯ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತದೆಂದರು.

ಅದ್ಯಕ್ಷತೆ ವಹಿಸಿದ ಸಂಸ್ಥೆ ಚೇರ್ಮನ್ ಡಾ.ಸೈಯ್ಯದ ತೌಸಿಫ್ ಖಾದ್ರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಟಿ.ವಿ.ಮೊಬೈಲ್ಗಳಲ್ಲಿ ಕ್ರಿಕೆಟ್ ನೋಡುವವುದು, ಮನೆ ಮುಂದೆ ಬ್ಯಾಡ್ಮಿಂಟನ್ ಆಡುವುದು,ಹಲವು ತರಹದ ವಿಡಿಯೋ ಗೇಮ್ಸ್ಗಳನ್ನು ಆಡುವುದು, ನೋಡುದುದನ್ನೇ ಇಷ್ಟು ಪಡುತ್ತಿದರೆ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಹಾಗೆ ಮಾಡದೆ ಸಾರ್ವಜನಿಕವಾಗಿ ಆಟದ ಮೈದಾನದಲ್ಲಿ ಸ್ಪರ್ಧೆ ಮಾಡಿ ಗೆಲ್ಲಬೇಕೆಂದೆರು.

ದೈಹಿಕ ಶಿಕ್ಷಣ ಪರಿವೀಕ್ಷಕ ಪಂಚಾಕ್ಷರಿ ನಂದೀಶ, ದಾರೈನ್ ಮಹಿಳಾ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಎ.ಎಲ್.ತೇರದಾಳ, ಮುಖ್ಯಶಿಕ್ಷಕ ಸಿ.ಬಿ. ಮಾಳಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಮೇಶ ಅವಟಿ, ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ, ಪೂರ್ವ ವಲಯ ಸಿ.ಆರ್.ಪಿ  ಎ.ಹೆಚ್. ಮುಲ್ಲಾ ಉಪಸ್ಥಿತರಿದ್ದರು.  ಮೇಘಾ ಮಾಲಗಾಂವಿ ಪ್ರಾರ್ಥಿಸಿದರು. ಶಿಲ್ಪಾ ಲಿಂಗನೂರ ಸ್ವಾಗತಿಸಿದರು. ಶಾಯಿನಾ ವಾಲಿಕಾರ ನಿರೂಪಿಸಿದರು. ಅಕ್ಷತಾ ಕುಟುಕನಕೇರಿ ವಂದಿಸಿದರು. 



ಸುದ್ದಿ ಓದಿ