ಮಹಿಳೆಯರ ಘನತೆ, ಭದ್ರತೆಗೆ ಆಗ್ರಹಿಸಿ ಜಾಗೃತಿ ಕಾರ್ಯಕ್ರಮ

ಮಹಿಳೆಯರ ಘನತೆ, ಭದ್ರತೆಗೆ ಆಗ್ರಹಿಸಿ ಜಾಗೃತಿ ಕಾರ್ಯಕ್ರಮ

ಬಳ್ಳಾರಿ 20:ಬಾಲಕಿಯರ ಸಕರ್ಾರಿ ಪ.ಪೂ.ಕಾಲೇಜಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್)  ನಿಂದ ನಿರ್ಭಯಾ ನೆನಪಿನ ಅಂಗವಾಗಿ ಮಹಿಳೆಯರ ಘನತೆ-ಭದ್ರತೆಗೆ ಆಗ್ರಹಿಸಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಳೆದ ಡಿಸೆಂಬರ್  16.2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ನಡೆದು 6ನೇ ವರ್ಷದ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿ ಎ.ಐ.ಎಂ.ಎಸ್.ಎಸ್.ನ  ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಂತರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಮಹಿಳೆಯರ ಮೇಲೆ ಇಂದಿಗೂ ಅತ್ಯಚಾರಗಳು ನಡೆಯುತ್ತಿವೆ.   ಇಂತಹ ಪ್ರಕರಣಗಳು ನಿಲ್ಲಬೇಕು ಎಂದರೆ ಅಪರಾಧಿಗಳಿಗೆ  ಉಗ್ರ ಶಿಕ್ಷೆಯಾಗಬೇಕು.  ಸಕರ್ಾರ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.  ಮಹಿಳೆಯರನ್ನು ಗೌರವಿಸುವಂತಹ ಸಮಾಜ ನಮ್ಮದಾಗಬೇಕು ಮಹಿಳಾ  ವಿಮೋಚನೆಯ ಹೋರಾಟದ ಸಂಕಲ್ಪವನ್ನು ನಾವೆಲ್ಲರು  ತೊಡಬೇಕು ಎಂದು ಕರೆ ನೀಡಿದರು.  ನಂತರ ವೇದಿಕೆಯಲ್ಲಿದ್ದ ಕಾಲೇಜಿನ ಉಪನ್ಯಾಸಕರಾದ ಚಾಂದ್ಭಾಷಾ ಅವರು ವಿದ್ಯಾಥರ್ಿನಿಯರನ್ನು ಉದ್ದೇಶಿಸಿ ಮಾತನಾಡಿದರು.  ನಂತರ ಶ್ರೀನಿವಾಸಮೂತರ್ಿ ಯವರು ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.  ಅಬ್ದುಲ್ರೆಹಮಾನ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಎ.ಐ.ಎಂ.ಎಸ್.ಎಸ್.ನ  ಪದಾಧಿಕಾರಿಗಳಾದ ರೇಖಾ, ಭಾರ್ಗವಿ, ವಿದ್ಯಾ, ಅಹಲ್ಯಾ, ನಂದಿನಿ, ಅನಿತಾ, ಈಶ್ವರಿ ಉಪಸ್ಥಿತರಿದ್ದರು.  ನೂರಾರು  ವಿದ್ಯಾಥರ್ಿನಿಯರು ಭಾಗವಹಿಸಿದ್ದರು.

 

ಸುದ್ದಿ ಓದಿ