ಹಿರಿಯ ನಾಗರಿಕರಿಗೆ, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ
ಲೋಕದರ್ಶನ ವರದಿ,
ಜಮಖಂಡಿ 27: ನಗರದ ಕುಂಚನೂರ ರಸ್ತೆಯ ದಾನಮ್ಮಾದೇವಿ ಗಜಾನನ ಉತ್ಸವ ಸಮಿತಿಯ ವತಿಯಿಂದ ಸೇವಾ ನಿವೃತ್ತಿ ಹೊಂದಿದ 22 ಜನ ಹಿರಿಯ ನಾಗರಿಕರಿಗೆ, ಪಿಯುಸಿ ಹಾಗೂ ಎಸ್ಎಸ್ಎಲ್ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಐದು ಜನ ಸಾಧಕರನ್ನು ಸನ್ಮಾನಿಸಲಾಯಿತು.
ಛದ್ಮವೇಷ ಸ್ಪರ್ಧೆಯಲ್ಲಿ 23 ಜನ ಚಿಕ್ಕಮಕ್ಕಳು ಭಾಗವಹಿಸಿದರು. ಪ್ರಥಮ ಸ್ಥಾನವು ನೈನಿತಾ ಅಮ್ಮಲಝರಿ ದ್ವಿತೀಯ ಸ್ಥಾನವು ಸಾನ್ವಿ ಗಣಾಚಾರಿ ತೃತೀಯ ಸ್ಥಾನವು ವೈನವಿ ಗಾಂವಿ ಹಾಗೂ ಪ್ರಣವಿ ಮಹಾಲಿಂಗಪುರ ಪಡೆದುಕೊಂಡರು.
ನಂತರ ಜರುಗಿದ ಗಾಯನ ಸ್ಪರ್ಧೆಯಲ್ಲಿ 10 ಜನ ಸ್ಫರ್ಧಾಳುಗಳು ಭಾಗವಹಿಸಿದ್ದು. ತನ್ವಿ ಮಹಾಲಿಂಗಪುರ ಪ್ರಥಮ ಸ್ಥಾನ, ಶ್ವಾವಣಿ ಹಿರೇಮಠ ದ್ವಿತೀಯ ಸ್ಥಾನ ಖುಷಿ ಯಾದವಾಡ ತೃತೀಯ ಸ್ಥಾನವನ್ನು ಪಡೆದರು. ಈ ಎರಡು ಸ್ಫರ್ಧೆಯಲ್ಲಿ ತೀರ್ಪುಗಾರರಾಗಿ ರಜನಿ ಕರಡಿ, ಅಶ್ವಿನಿ ಹಿರೇಮಠ, ಪ್ರಜಾಲಿ ಭಂಡಾರಿ ನಿರ್ವಹಿಸಿದರು.
ಎಮ್.ಬಿ.ಮಠದ, ಸುರೇಶ ಅಬ್ಬಿಗೇರಿ, ಸುಭಾಸ ಪಾಟೀಲ, ಗುರು ಮಠಪತಿ, ಅರವಿಂದ ಪವಾರ, ಪ್ರಭು ಮಹಾಲಿಂಗಪುರ, ಮಹೇಂದ್ರ ಗುಡ್ಲಿ, ಮಹೇಶ ಅಡಹಳ್ಳಿಮಠ, ಗೌತಮ ಗಾಂವಿ, ಶಂಕರ ಮೆಟಗುಡ, ಗುರಯ್ಯಾ ಸರಗಣಾಚಾರಿ, ಗುರು ಮಹಾಲಿಂಗಪೂರ, ರಾಘು ಜೋಶಿ, ಉಪಸ್ಥಿತರಿದ್ದರು. ಶ್ರೀದಾನಮ್ಮಾ ದೇವಿ ಗಜಾನನ ಸಮೀತಿ ಅಧ್ಯಕ್ಷ ಸುನೀಲ ಮುರುಗೋಡ ಸ್ವಾಗತಿಸಿದರು. ಮಲ್ಲು ಗಣಾಚಾರಿ ನಿರೂಪಿಸಿದರು. ಅಜಿತ ಬಿರಾದಾರ ವಂದಿಸಿದರು.