ಅತ್ಯುತ್ತಮ ವಾಣಿಜ್ಯೋದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ
ಬಳ್ಳಾರಿ 02: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ವೆಂಕಟೇಶುಲು, ಅವರು ಕೆ.ಎಸ್.ಎಫ್.ಸಿ ಇಂದ ನೀಡುವ "ಅತ್ಯುತ್ತಮ ವಾಣಿಜ್ಯೋದ್ಯಮಿ ಪ್ರಶಸ್ತಿ 2019 ಪಡೆದುಕೊಂಡಿರುವುದು ನಮ್ಮ ಸಂಸ್ಥೆಗೆ ಸಂತಸದ ವಿಷಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ||ಡಿ.ಎಲ್.ರಮೇಶ್ಗೋಪಾಲ್ ಅವರು ನುಡಿದರು.
ಸಂಸ್ಥೆಯ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆ.ಎಸ್.ಎಫ್.ಸಿ ಬಳ್ಳಾರಿ ಶಾಖೆಯ ಉಪ ಮಹಾ ಪ್ರಬಂಧಕರಾದ ಮಲ್ಲಿಕಾಜರ್ುನ್ ಡಾ||ಡಿ.ಎಲ್.ರಮೇಶ್ಗೋಪಾಲ್ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರ ಸಮಕ್ಷಮದಲ್ಲಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಮಾತನಾಡಿದ ವಿ.ವೆಂಕಟೇಶುಲು ಅವರ ನಮ್ಮ ಸಂಸ್ಥೆಯಿಂದ ತಮ್ಮ ವ್ಯಾಪಾರದ ಅಭಿವೃದ್ದಿಗೆ ಸಾಲವನ್ನು ಪಡೆದುಕೊಂಡು ಪ್ರತೀ ತಿಂಗಳು ನಿಗದಿತ ಸಮಯಕ್ಕೆ ತಪ್ಪದೇ ವಂತಿಕೆಯನ್ನು ಮರುಪಾವತಿ ಮಾಡುತ್ತಾ ತಮ್ಮ ವ್ಯಾಪಾರವನ್ನು ಬೆಳೆಸಿಕೊಂಡು ಅನೇಕರಿಗೆ ಉದ್ಯೋಗವನ್ನು ನೀಡಿದ ಪರಿಣಾಮವಾಗಿ ಅತ್ಯುತ್ತಮ ವಾಣಿಜ್ಯೋದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ, ವಿ.ವೆಂಕಟೇಶುಲು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಹಾರೈಸಿದರು.
ಇದೇ ಸಮಯದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಮತ್ತು ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ನ ಸದಸ್ಯರು ವಿ.ವೆಂಕಟೇಶುಲು ಅವರಿಗೆ ಸನ್ಮಾನಿಸಿ ಶುಭ ಕೋರಿದರು. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜನೆವರಿ ತಿಂಗಳ 21ರಂದು ಬೆಂಗಳೂರಿನಲ್ಲಿ ಜರುಗಬೇಕಿತ್ತು, ಆದರೆ ಪ.ಪೂ.ಶ್ರೀ.ಶ್ರೀ. ಡಾ||ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದರಿಂದ ಮುಂದೂಡಲ್ಪಟ್ಟಿತ್ತು.