ಜಮಖಂಡಿ

ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ

ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ

ಜಮಖಂಡಿ  02: ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಲ್ಲಿ ಕಲಿಸುವ ಗುಣಗಳು ಶಿಕ್ಷಕರಲ್ಲಿ ಇರುತ್ತದೆ. ಶಿಕ್ಷಕರು ಯಾವುದೇ ಪುರಸ್ಕಾರವನ್ನು ಪಡೆದುಕೊಳ್ಳಬೇಕಾದರೆ. ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದರೆ ಮಾತ್ರ ಎಲ್ಲ ಪುರಸ್ಕಾರಗಳು ನಮ್ಮನ್ನು ಅರೆಸಿಕೊಂಡು ಬರುತ್ತವೆಂದು ರಾಷ್ಟ್ರಪತಿ ಪುರಸ್ಕಾರ ಶಿಕ್ಷಕಿ ಸ್ವಪ್ನಾ ಅನಿಗೋಳ ಹೇಳಿದರು. 

ನಗರದ ಮುಧೋಳ ರಸ್ತೆಯ ಬಳಿ ಇರುವ ವಿದ್ಯಾಭವನ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಮಾತೋಶ್ರೀ ಶ್ರೀ ಶಾರದಾ ಸೇವಾ ಸಮಿತಿ ಸಾವಳಗಿ ಹಾಗೂ ಜಮಖಂಡಿ ಸಹಯೋಗದಲ್ಲಿ ಮಕ್ಕಳ ಜ್ಞಾನಾಭಿವೃದ್ದಿಗಾಗಿ ಎಲೆ ಮರೆಯ ಕಾಯಿಯಂತೆ ಶ್ರಮವಹಿಸುತ್ತಿರುವ ಗೌರವಾನ್ವಿತ ಗುರುಗಳಿಗೆ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಶಿಕ್ಷಕರ ಜೀವನ ಮಧ್ಯಮ ವರ್ಗದವರು ಇರುತ್ತಾರೆ. ಅಂತಹವರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ಮತ್ತು ರಾಷ್ಟ್ರಪತಿ ಪ್ರಶಸ್ತಿಯು ದೊರೆಯಬೇಕಾದರೆ ಅದು ಶಾಲೆಯಲ್ಲಿ ಶಿಕ್ಷಣ ಕಲಿಸಿದ ಮಕ್ಕಳಿಂದ ಮಾತ್ರ. ಇಂದು ನಾನು ನನ್ನ ಶಾಲಾಮಕ್ಕಳಿಂದ ಪಡೆದಿರುವ ಪ್ರಶಸ್ತಿ,ಪುರಸ್ಕಾರಗಳು.  ವಿಜ್ಞಾನ ವಿಭಾಗದ ವಿಷಯದಲ್ಲಿ ಮಕ್ಕಳಿಗೆ ಮನೆಯಲ್ಲಿ ನಡೆಯುವ ಹಾಗೂ ತಿನ್ನುವ ಪದಾರ್ಥಗಳ ಮೇಲೆ ತಿಳಿಸಿ ಹೇಳಿದಾಗ ಮಕ್ಕಳು ಬೇಗ ತಿಳಿದುಕೊಳ್ಳುತ್ತಾರೆ. ಶಿಕ್ಷಕರಾದವರು ಮಕ್ಕಳ ನಡುವೆ ಬೇರತು. ಅವರಿಗೆ ತಿಳಿಯುವ ಹಾಗೆ ವಿದ್ಯಾಭ್ಯಾಸವನ್ನು ತಿಳಿಸಿದರೆ ಮಾತ್ರ. ಮಕ್ಕಳು ಜಾಣರಾಗುತ್ತಾರೆ. ಮಕ್ಕಳನ್ನು ಗುರುತಿಸಿದರೆ ಶಿಕ್ಷಕರಾದವರ ಜೀವನ ಸಾರ್ಥಕತೆಯಾಗುತ್ತದೆ. ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಲು ಸಾಕಷ್ಟು ಅಡೆತಡೆಗಳು ಬರುತ್ತವೆ. ಅವುಗಳನ್ನು ಮೇಟ್ಟಿ ನಿಂತು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಳ್ಳುವ ಗುಣಗಳನ್ನು ಶಿಕ್ಷಕರು ಜೀವನದಲ್ಲಿ ಅಳಡಿಸಿಕೊಳ್ಳಬೇಕು ಎಂದರು.  

ವಿಶ್ರಾಂತ ಉಪನಿರ್ದೇಶಕ ಎಮ್,ಜಿ, ದಾಸರ ಮಾತನಾಡಿ, ಮಕ್ಕಳು ಮೆಚ್ಚಿ ಗುರುತಿಸಿ ಪ್ರಶಸ್ತಿ ನೀಡುವದೆ ದೊಡ್ಡ ಪ್ರಶಸ್ತಿಯಾಗಿದೆ. ಹುಟ್ಟು ಸಾವು ನಡುವೆ ಬದುಕುವ ನಡುವೆ ಸಮಾಜಕ್ಕೆ ಯಾವುದಾದರೂ ಒಂದು ಕೊಡುಗೆ ನೀಡುವ ವ್ಯಕ್ತಿಯಾಗಬೇಕು. ಶಿಕ್ಷಕ ಏನನ್ನಾದರೂ ಸಾಧನೆ ಕಂಡಿದ್ದು ಆಗಿದರೆ ಅದು ನಾಲ್ಕು ಕೋಣೆಯ ಮಧ್ಯೆ ಮಕ್ಕಳ ಜೊತೆಗೆ ಇರುವ ಭಾಗ್ಯದಲ್ಲಿ ಸಾಧನೆ ಮತ್ತು ದೇವರನ್ನು ಕಾಣುತ್ತಾನೆ. ತಂದೆ, ತಾಯಿಗಿಂತ ಹೆಚ್ಚು ಗುರುವಿಗೆ ಗೌರವ ಸ್ಥಾನ ನೀಡುವದೆ ಮಕ್ಕಳು. ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ರೂಪಿಸುವ ಶಕ್ತಿ ಒಬ್ಬ ಶಿಕ್ಷಕನ ಕೈಯಲ್ಲಿ ಇದೆ. ಆ ಮಕ್ಕಳು ದೇಶದ ಶ್ರೇಷ್ಠ ವ್ಯಕ್ತಿಗಳನ್ನಾಗಿ ತಯಾರು ಮಾಡುವುದು ಶಿಕ್ಷಕ. ಅಕ್ಷರ ಲೋಕದ ಶಿಕ್ಷಕ. ಅಕ್ಷರ ಲೋಕದ ಪ್ರೇಮಿ ಶಿಕ್ಷಕನಾಗಿದ್ದಾನೆ. ಅಕ್ಷರದಲ್ಲಿ ಲೋಪದೋಷಗಳನ್ನು ತಿದ್ದುವ ತಾಯಿ ಎಲ್ಲಿ ಇದ್ದಾಳೆ ಎಂದರೆ ಶಾಲೆಯಲ್ಲಿ ಇದ್ದಾಳೆ. ಹೊಟ್ಟೆ ತುಂಬಿಸು ತಾಯಿ ಮನೆಯಲ್ಲಿ ಇದ್ದರೆ. ಶಿಕ್ಷಣ ಕಲಿಸಿದ ತಾಯಿ ಶಾಲೆಯಲ್ಲಿ ಇದ್ದಾಳೆ ಎಂದರು. 

ಋಷಿ ಸಂಸ್ಕೃತಿ ಶಿಕ್ಷಕನ ಪಾತ್ರವಾಗಿದೆ. ಮನೆಯ ಕುಟುಂಬಕ್ಕೂ ಹಾಗೂ ಶಾಲೆಯ ಕುಟುಂಬಕ್ಕೂ ಯಜಮಾನಾಗಿರುವುದು ಶಿಕ್ಷಕನಾಗಿರುತ್ತಾನೆ. ಸಮಾಜ ಬೆಳಕು ನೀಡುವ ಸಂಘ, ಸಂಸ್ಥೆಗಳಿಂದ ಶಿಕ್ಷಕರನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳು ನಡೆಯುತ್ತವೆ. ಸಮಾಜಕ್ಕೆ ಆಸರೆಯಾಗಿ ನಿಲ್ಲುವ ಶಕ್ತಿ ಸಂಘ,ಸಂಸ್ಥೆಗಳ ಜವಾಬ್ದಾರಿಯಾಗಿದೆ. ನಡತೆ ಮತ್ತು ಮಾತು ಒಂದೆಯಾದರೆ ಸಮಾಜ ಮುಂದೆ ನಡೆಯುತ್ತದೆ. ಮೇಲಾಧಿಕಾರಿಗಳು ಇದ್ದರು ಸಹ ಎಲ್ಲ ಜವಾಬ್ದಾರಿಯನ್ನು ಮುನ್ನಡೆಸುವ ಕೆಲಸ ಶಿಕ್ಷಕಣನದು ಆಗಿದೆ. ದೇಶದಲ್ಲಿ ಇಂಜೀನಿಯರ, ಡಾಕ್ಟರ್‌ಗಳನ್ನು ತಯಾರು ಮಾಡುವ ನೀಲಿ ನಕ್ಷೆ ಶಕ್ತಿ ಶಿಕ್ಷಕನಲ್ಲಿ ಇದೆ ಎಂದರು. 

ಸಂಸ್ಥೆ ಅಧ್ಯಕ್ಷೆ ವನತಾ ಕುಲಕರ್ಣಿ, ಜಿಲ್ಲಾ ಉಪನಿರ್ದೇಶಕ ಬಿ,ಕೆ, ನಂದನೂರ, ಬಿಇಒ ಎ,ಕೆ,ಬಸನ್ನವರ, ಸಿಟಿಇ ಹಿರಿಯ ಉಪನ್ಯಾಸಕ ಸಿ,ಎಂ, ನ್ಯಾಮಗೌಡ, ಬಿ,ಪಿ, ಬಾಗೆನ್ನವರ, ಡಾ, ಉಜ್ಬಲಾ ಘಾಟಗೆ ಸೇರಿದಂತೆ ಅನೇಕರು ಇದ್ದರು. ಎನ್,ಆರ್, ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಶಿವು ಯಾದವಾಡ ನಿರೂಪಿಸಿದರು. 


ಸುದ್ದಿ ಓದಿ