ಜಾಲಗಾರಗೆ "ಬಸವ ಶ್ರೀ" ಪ್ರಶಸ್ತಿ ಪ್ರದಾನ
ಧಾರವಾಡ 15: ನಗರದ ಕುಲಪುರೋಹಿತ ಆಲೂರ ವೆಂಕಟರಾವ ಸಭಾಭವನದಲ್ಲಿ ನಮ್ಮ ಬಸವ ಸೇನೆ (ರಿ) ಬೆಂಗಳೂರು ಹಾಗೂ ಧಾರವಾಡ ನ್ಯೂಸ್ ಆಶ್ರಯದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ ನಿಧನಕ್ಕೆ ಸಂತಾಪ ಸೂಚಿಸಿ ನಂತರ ನಿವೃತ್ತ ಕ್ಯಾಪ್ಟನ್ ಬಿ.ಬಿ.ಚಕ್ರಸಾಲಿ ರಚನೆಯ "ಶರಣರ ಸದನ" ಪುಸ್ತಕ ಬಿಡುಗಡೆ ಮಾಡಿ ನಂತರ "ಬಸವ ಶ್ರೀ" ಪ್ರಶಸ್ತಿಯನ್ನು ಮಕ್ಕಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಮನಪ್ಪ ಜಾಲಗಾರಗೆ “ಬಸವ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು, ಮನಗುಂಡಿ ಶ್ರೀ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮಿಗಳು, ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕರಾದ ವಿ. ಕೃಷ್ಣಮೂರ್ತಿ, ನಮ್ಮ ಬಸವಸೇನೆ, ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷರಾದ ಲೋಕೇಶ ಮೂರ್ತಿ, ಬಸವರಾಜ್ ಆನೆಗುಂದಿ, ಶರಣರ ಸದನ ಪುಸ್ತಕ ರಚನೆಯ ಆರ್ಮಿ ನಿವೃತ್ತ ಅಧಿಕಾರಿ ಬಿ,ಬಿ,ಚಕ್ರಸಾಲಿ , ನಮ್ಮ ಬಸವಸೇನೆ ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಅಕಾಡೆಮಿ ರಾಜ್ಯಾಧ್ಯಕ್ಷರಾದ ಲೋಕೇಶ ಮೂರ್ತಿ ಉಪಸ್ಥಿತರಿದ್ದರು.