ಜಂಗಮ ಸಮಾವೇಶದಲ್ಲಿ ಹೆಚ್ಚಿನ ಜನರು ಭಾಗವಹಿಸಿ: ಅಳ್ಳಿಮಠಿ
ಅಥಣಿ 03: ಬರುವ ರವಿವಾರ ದಿನ ಬಸವಕಲ್ಯಾಣದಲ್ಲಿ ಜರಗುವ ಜಂಗಮ ಸಮಾವೇಶಕ್ಕೆ ಅತಿ ಹೆಚ್ಚು ಜನರು ಭಾಗವಹಿಸಿ ಸಮಾವೇಶ ಯಶಶ್ವಿಗೊಳಿಸೋಣ ಎಂದು ಅಥಣಿ ತಾಲೂಕಾ ಜಂಗಮ ಸಮಾಜದ ನೂತನ ಅಧ್ಯಕ್ಷ ಪಂಚಾಕ್ಷರಿ ಅಳ್ಳಿಮಠಿ ಅವರು ಹೇಳಿದರು.
ಅವರು ಇಂದು ಅಥಣಿ ಶೆಟ್ಟರಮಠದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹ ಸನ್ಮಾನ ಸಮಾರಂಭದಲ್ಲಿ ಸಮಾಜದ ಹಿರಿಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನಾನೋಬ್ಬ ಸಮಾಜದ ಸೇವಕ ಸಮಾಜದ ಹಿತಕ್ಕಾಗಿ ತಮ್ಮೆಲ್ಲರ ಸಹಕಾರ ಹಿರಿಯರ ಮಾರ್ಗದರ್ಶನದಿಂದ ಕೆಲಸವನ್ನು ಮಾಡುತ್ತೇನೆ. ಸಮಾಜ ನನಗೆ ಏನೂ ಕೊಟ್ಟಿದೆ ಮಹತ್ವದಲ್ಲ ಸಮಾಜಕ್ಕೆ ನಾನೆನೂ ಕೊಟ್ಟೆ ಎಂಬುದು ಮಹತ್ವದಾಗಿರುತ್ತದೆ ಎಂದು ಹೇಳಿದರು.
ಮಹಿಳಾ ಘಟಕದ ನೂತನ ಅಧ್ಯಕ್ಷರಾದ ಮೀನಾಕ್ಷಿ ತೆಲಸಂಗ ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಮುಂದೆ ಬರಬೇಕು. ಸಮಾಜ ಕಟ್ಟುವ ಕೆಲಸದಲ್ಲಿ ಒಗ್ಗಟ್ಟಿನಿಂದ ದುಡಿಯಬೇಕು. ತಮ್ಮಿಂದ ಸಾಧ್ಯವಾದಷ್ಟು ಸಾಹಾಯವನ್ನು ಬಡವರಿಗೆ ಮಾಡಬೇಕು. ವಿಧ್ಯಾವಂತ ಮಹಿಳೆಯರು ಸಮಾಜಿಕ ಸಂಘಟನೆಯಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಉಪಾಧ್ಯಕ್ಷ ರಾಜು ಹಿರೇಮಠ ಮತ್ತು ಮಹಿಳಾ ಘಟಕದ ಉಪಾಧ್ಯಕ್ಷರಾದ ಸುನಂದಾ ಅಳ್ಳಿಮಠ, ಬಸಯ್ಯಾ ಈರಯ್ಯಾ ಮಠಪತಿ ಉಪನ್ಯಾಸಕರು ಪಿ.ಎಚ್.ಡಿ. ಪದವಿನ್ನುಗಳಿಸಿದ್ದಕ್ಕೆ ಇವರನ್ನು ಸಹ ಸನ್ಮಾನ ಮಾಡಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಎಸ್.ಎಮ್. ಹಿರೇಮಠ ನಿವೃತ್ತ ಕೃಷಿ ಅಧಿಕಾರಿ ಆಗಮಿಸಿದ್ದರು. ಸಮಾರಂಭಧ್ಯಕ್ಷತೆಯನ್ನು ಶಿವುಕುಮಾರ ತೆಲಸಂಗ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಂಗಮೇಶ್ವರ ಕಲ್ಮಠ, ನಿರೂಪನೆಯನ್ನು ಪುಟ್ಟು ಹಿರೇಮಠ, ವಂದನಾರ್ಪನೆ ಶರಣಯ್ಯಾ ವಸ್ತ್ರದ ಮಾಡಿದರು.