ಜಮಖಂಡಿ

ಕ್ರೀಡಾಕೂಟ ನಡೆಸದಿರುವದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ವಿರುದ್ಧ ಕ್ರೀಡಾಪಟುಗಳು ಆಕ್ರೋಶ

ಕ್ರೀಡಾಕೂಟ ನಡೆಸದಿರುವದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ವಿರುದ್ಧ ಕ್ರೀಡಾಪಟುಗಳು ಆಕ್ರೋಶ
Athletes express outrage against the Department of Pre-University Education for not conducting sport

             ಜಮಖಂಡಿ 22 ; ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಕ್ರೀಡಾಕೂಟದಲ್ಲಿ ಪಂದ್ಯಗಳ ಅವಧಿಯನ್ನು ಕಡಿತಗೊಳಿಸಿ, ಲೀಗ್‌ನಿಂದ ಫೈನಲ್‌ವರೆಗಿನ ಪಂದ್ಯಗಳನ್ನು ಒಂದೇ ದಿನ ಆಯೋಜಿಸಿರುವುದು ಕ್ರೀಡಾಪಟುಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ,

          ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆಟಗಾರರಿಗೆ ಸಮರ​‍್ಕ ವಸತಿ, ವಿಶ್ರಾಂತಿ ಹಾಗೂ ಮೂಲಸೌಲಭ್ಯ ಕಲ್ಪಿಸದೆ ಕ್ರೀಡಾಕೂಟ ನಡೆಸದಿರುವದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ವಿರುದ್ಧ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

           ನಗರದ ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಕ್ರೀಡಾಕೂಟದಲ್ಲಿ ಪಂದ್ಯಗಳು ಸ್ಕೂಲ್ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ನಿಯಮಾವಳಿ ಪ್ರಕಾರ 15 ನಿಮಿಷಗಳ ನಾಲ್ಕು ಕ್ವಾರ್ಟರ್‌ಗಳಲ್ಲಿ, ಒಟ್ಟು 60 ನಿಮಿಷಗಳ ಕಾಲ ಪಂದ್ಯ ನಡೆಯಬೇಕು.

             ಆದರೆ, ಒಂದು ಗಂಟೆ ನಡೆಯಬೇಕಿದ್ದ ಪಂದ್ಯಗಳನ್ನು ಕೇವಲ 10 ನಿಮಿಷಗಳಿಗೆ ಸೀಮಿತಗೊಳಿಸಿರುವುದು ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೇ ಆಟದ ಅವಧಿಗೆ ಕತ್ತರಿ ಹಾಕಿರುವದರಿಂದ ಒಳ್ಳೆಯ ತಂಡವನ್ನು ನೋಡಿ ರಾಷ್ಟ್ರಮಟ್ಟಕ್ಕೆ ಕಳಿಸುವದನ್ನು ಬಿಟ್ಟು ಕಾಟಾಚಾರಕ್ಕೆ ಕ್ರೀಡೆ ನಡೆಸುತ್ತಿರುವದು ಕಂಡು ಬಂದಿತು. 


ಸುದ್ದಿ ಓದಿ